Site icon Vistara News

ಭಾರತ-ಪಾಕ್​ ವಿಶ್ವಕಪ್​ ಪಂದ್ಯದ ಟಿಕೆಟ್‌ಗೆ 57 ಲಕ್ಷ ರೂ! ಕ್ರಿಕೆಟ್‌ ಅಭಿಮಾನಿಗಳು ಕಕ್ಕಾಬಿಕ್ಕಿ

ODI World Cup Ticket

ಮುಂಬಯಿ: ಅಕ್ಟೋಬರ್​ 5ರಿಂದ ಆರಂಭವಾಗುವ ಏಕದಿನ ವಿಶ್ವಕಪ್ (ICC World Cup 2023)​ ಪಂದ್ಯಗಳ ಟಿಕೆಟ್ (icc world cup tickets)​ಗಳು ಈಗಾಗಲೇ ಅಧಿಕೃತ ಪಾಲುದಾರ ಬುಕ್ ​ಮೈಶೋ ಮಾರಾಟ ಮಾಡಿದೆ. ಎಲ್ಲ ಅಭ್ಯಾಸ ಮತ್ತು ಲೀಗ್ ಹಂತದ ಪಂದ್ಯಗಳ ಟಿಕೆಟ್‌ಗಳ ಮಾರಾಟವನ್ನು ಅದು ಸೆಪ್ಟೆಂಬರ್ 3ರಂದು ಕೊನೆಗೊಳಿಸಿದೆ. ಆದರೆ ಇತರ ಮಾರುಕಟ್ಟೆಯಲ್ಲಿ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಳ ಮಾರಾಟವು ಮುಂದುವರಿದಿದ್ದು, ಇಲ್ಲಿ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯದ ಟಿಕೆಟ್​ನ ದರಗಳು 57 ಲಕ್ಷ ರೂ.ಗೆ ಏರಿದೆ! ಇದೇ ವಿಚಾರವಾಗಿ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐಗೆ ದೂರು ನೀಡಿದ್ದಾರೆ.

​ಅಭಿಮಾನಿಯೊಬ್ಬರು ಈ ಟಿಕೆಟ್​ನ ಬೆಲೆಯ ಸ್ಕ್ರೀನ್​ಶಾಟ್​ ತೆಗೆದು ಇದನ್ನು ಬಿಸಿಸಿಐಗೆ ಟ್ವೀಟ್​ ಮಾಡಿದ್ದಾನೆ. ಟಿಕೆಟ್​ನ ಅಧಿಕೃತ ಪಾಲುದಾರ ಬುಕ್​ಮೈಶೋದಲ್ಲಿ ಇರುವ ಮೊತ್ತವೂ ಹಾಗೂ ಇತರ ವೆಬ್​ಸೈಟ್​ಗಳಲ್ಲಿರುವ ಮೊತ್ತದ ಏರಿಳಿತವನ್ನು ಬರೆದು ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸದ್ಯ ಬಿಸಿಸಿಐ ಯಾವ ಕ್ರಮ ಕೈಗೊಳ್ಳಲಿದೆ ಎಂದುದನ್ನು ಕಾದು ನೋಡಬೇಕಿದೆ.

ಲೈವ್ ಇವೆಂಟ್‌ಗಳ ಟಿಕೆಟ್‌ಗಳನ್ನು ಮಾರಾಟಮಾಡುವ ವಿಶ್ವದ ಅತಿದೊಡ್ಡ ಜಾಗತಿಕ ಆನ್‌ಲೈನ್ ಪ್ಲಾಟ್‌ಫಾರ್ಮ್” ವಯಾಗೋಗೋದಲ್ಲಿ ಟಿಕೆಟ್​ ದರಗಳನ್ನು ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿದೆ. ಅಕ್ಟೋಬರ್​ 14ರಂದು ನಡೆಯುವ ಭಾರತ ಮತ್ತು ಪಾಕ್​ ನಡುವಣ ಪಂದ್ಯದ ಟಿಕೆಟ್​ಗಳನ್ನು 19,51,580 ರೂ.ಗೆ (ಶಿಪ್ಪಿಂಗ್ ಮತ್ತು ಹೋಮ್ ಡೆಲಿವರಿ ಹೆಚ್ಚುವರಿ) ಮಾರಾಟ ಮಾಡಲಾಗುತ್ತಿದೆ. ಇದು ಏ ದರ್ಜೆಯ ಟಿಕೆಟ್​ಗಳಾಗಿದೆ. ಸಾಮಾನ್ಯ ಕ್ಲಾಸ್​ನ ಟಿಕೆಟ್​ ಬೆಲೆ 57 ಲಕ್ಷಕ್ಕೆ ನಿಗದಿಯಾಗಿದೆ!

ಇದನ್ನೂ ಓದಿ Virender Sehwag: ‘ಇದು ಟೀಮ್‌ ಇಂಡಿಯಾ ಅಲ್ಲ’; ವಿಶ್ವಕಪ್​ ತಂಡ ಪ್ರಕಟದ ಬೆನ್ನಲ್ಲೇ ಅಚ್ಚರಿಯ ಟ್ವೀಟ್​ ಮಾಡಿದ ಸೆಹವಾಗ್

ಭಾರತದ ಇತರ ಪಂದ್ಯಗಳ ಟಿಕೆಟ್​ ಕೂಡ ಅತ್ಯಂತ ದುಬಾರಿ ಮೊತ್ತದಿಂದ ಕೂಡಿದೆ. ಕ್ರಿಕೆಟ್​ ಅಭಿಮಾನಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಲಕ್ನೋದಲ್ಲಿ ನಡೆಯುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಟಿಕೆಟ್‌ಗಳು 2,34,632 ರೂ. ಆರಂಭಿಕ ಬೆಲೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಆರಂಭಿಕ ಬೆಲೆ 38,877 ರೂ.ಗಳು, ವರ್ಗ ‘ಎ’ ಟೀಕೆಟ್​ಗೆ 2,34,622 ರೂ. ನಿಗದಿಯಾಗಿದೆ. ಇದೇ ವಿಚಾರವಾಗಿ ಅಭಿಮಾನಿಗಳು ಬಿಸಿಸಿಐ ವಿರುದ್ದ ಕಿಡಿ ಕಾರಿದ್ದಾರೆ.

ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಮತ್ತು ಫೈನಲ್​ ಪಂದ್ಯಗಳೆರಡು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ

ಭಾರತ vs ನ್ಯೂಜಿಲ್ಯಾಂಡ್​- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ

ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ

ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ

ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಭಾರತ vs ನೆದರ್ಲೆಂಡ್ಸ್​ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

Exit mobile version