ಅಹಮದಾಬಾದ್ : ಭಾರತ 19 ವರ್ಷದೊಳಗಿನವರ ವನಿತೆಯರ ತಂಡ (U19 World Cup) ಉದ್ಘಾಟನಾ ಆವೃತ್ತಿಯ ಟಿ20 ವಿಶ್ವ ಕಪ್ನಲ್ಲಿ ಚಾಂಪಿಯನ್ಪಟ್ಟ ಅಲಂಕರಿಸಿದೆ. ಈ ಮೂಲಕ ಮಹಿಳೆಯರ ಭಾರತವೇ ಹೆಮ್ಮೆ ಪಡುವಂಥ ಅಭೂತಪೂರ್ವ ಸಾಧನೆ ಮಾಡಿದೆ. ಈ ತಂಡದ ಸಾಧನೆಯನ್ನು ಬಿಸಿಸಿಐ ಕೊಂಡಾಡಿದೆ. ಜತೆಗೆ ತಂಡಕ್ಕೆ ಐದು ಕೋಟಿ ರೂಪಾಯಿ ಬಹುಮಾನ ಕೂಡ ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಮಾಹಿತಿ ಪ್ರಕಟಿಸಿದ್ದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಸಮಾರಂಭ ನಡೆಸಿ ಬಹುಮಾನ ವಿತರಣೆ ಮಾಡುವುದಾಗಿ ಹೇಳಿದ್ದಾರೆ.
ಪೊಚೆಫ್ಸ್ಟ್ರೂಮ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಜನವರಿ 29ರಂದು ನಡೆದ ಫೈನಲ್ ಪಂದ್ಯದಲ್ಲಿ ಶಫಾಲಿ ವರ್ಮಾ ನೇತೃತ್ವದ ಭಾರತ ತಂಡ ಎದುರಾಳಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ಪಟ್ಟ ಅಲಂಕರಿಸಿತು. ತಕ್ಷಣವೇ ಜಯ್ ಶಾ ಅವರು ಬಹುಮಾನ ಘೋಷಿಸಿ ಟ್ವೀಟ್ ಮಾಡಿದರು.
ಇದೊಂದು ಅಭೂತಪೂರ್ವ ಸಾಧನೆಯಾಗಿದೆ. ಯುವ ಕ್ರಿಕೆಟಿಗರು ದೇಶವೇ ಹೆಮ್ಮೆ ಪಡುವಂಥ ಸಾಧನೆ ಮಾಡಿದೆ. ಈ ಸಾಧನೆ ಮಾಡಿರುವ ಮಹಿಳೆಯರ ತಂಡಕ್ಕೆ ಐದು ಕೋಟಿ ರೂಪಾಯಿ ಬಹುಮಾನ ಘೋಷಿಸಲು ಖುಷಿಯಾಗುತ್ತಿದೆ. ಮಹಿಳೆಯರ ತಂಡಕ್ಕೆ ಇದು ಹೊಸ ಅಧ್ಬುತ ವರ್ಷ ಎಂಬುದಾಗಿ ಜಯ್ ಶಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : U19 T20 World Cup : ಉದ್ಘಾಟನಾ ಆವೃತ್ತಿಯ ವಿಶ್ವ ಕಪ್ ಗೆದ್ದು ದಾಖಲೆ ನಿರ್ಮಿಸಿದ ಭಾರತ ವನಿತೆಯರ ಕ್ರಿಕೆಟ್ ತಂಡ
ವಿಶ್ವ ಕಪ್ ಗೆದ್ದಿರುವ ಮಹಿಳೆಯರ ತಂಡವನ್ನು ಫೆಬ್ರವರಿ 1ರಂದು ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆಯುವ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಪಂದ್ಯಕ್ಕೆ ಆಹ್ವಾನಿಸುತ್ತಿದ್ದೇನೆ. ಅಂದು ವಿಜಯ ಸಂಭ್ರಮ ನಡೆಯಲಿದೆ ಎಂದು ಜಯ್ ಶಾ ಬರೆದುಕೊಂಡಿದ್ದಾರೆ.