Site icon Vistara News

World Cup 2023 : ನೀವು ಹೇಳಿದ ಹಾಗೆ ನಾವು ಕೇಳಲ್ಲ; ಪಾಕಿಸ್ತಾನ ತಂಡಕ್ಕೆ ತಿರುಗೇಟು ಕೊಟ್ಟ ಬಿಸಿಸಿಐ

Pakistan Cricket Team

#image_title

ಮುಂಬಯಿ: ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆಯುತ್ತಿರುವ ಒಳಜಗಳದಿಂದಾಗಿ ಏಷ್ಯಾ ಕಪ್ ಮತ್ತು ವಿಶ್ವ ಕಪ್​ ಆಯೋಜನೆ (World Cup 2023) ಐಸಿಸಿಗೆ ಕ್ಲಿಷ್ಟಕರ ಸಂಗತಿ ಎನಿಸಿದೆ. ಅದರಲ್ಲೂ ವಿಶ್ವ ಕಪ್​ಗೆ ಆತಿಥ್ಯ ವಹಿಸಿರುವ ಭಾರತ ತಂಡ ಪ್ರತಿಯೊಂದು ನಿರ್ಧಾರವನ್ನೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರೋಧಿಸುತ್ತಿದೆ. ಬಿಸಿಸಿಐಗೆ ಪ್ರತಿ ಹಂತದಲ್ಲೂ ಸಮಸ್ಯೆ ತಲೆದೋರುವಂತೆ ಮಾಡುತ್ತಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆ ಪಂದ್ಯದ ತಾಣಗಳ ನಿರಾಕರಣೆ ಚೆನ್ನೈನಲ್ಲಿ ಸ್ಪಿನ್ ಸ್ನೇಹಿ ಸ್ಟೇಡಿಯಮ್​ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಪಾಕಿಸ್ತಾನ ತಂಡ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಅದೇ ರೀತಿ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲೂ ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಆದರೆ, ಪಾಕಿಸ್ತಾನದ ಈ ಬೇಡಿಕೆಗಳಿಗೆ ಭಾರತ ಸೊಪ್ಪು ಹಾಕುತ್ತಿಲ್ಲ ನೀವು ಹೇಳಿದಂತೆ ಕೇಳಲು ಸಾಧ್ಯವೇ ಇಲ್ಲ ಎಂದಿದೆ.

ವಿಶ್ವಕಪ್ 2023 ರ ವೇಳಾಪಟ್ಟಿ ಬಿಡುಗಡೆಗೆ ಮೊದಲು, ಐಸಿಸಿ ವಿಶ್ವಕಪ್ ವೇಳಾಪಟ್ಟಿಗೆ ಸಂಬಂಧಿಸಿದಂತೆ ಪಿಸಿಬಿಯಿಂದ ಸಲಹೆಗಳು ಮತ್ತು ಶಿಫಾರಸುಗಳನ್ನು ಕೇಳಿತ್ತು. ಚೆನ್ನೈನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಪಾಕಿಸ್ತಾನದ ಮನವಿಗೆ ಕ್ಯಾರೇ ಎನ್ನುತ್ತಿಲ್ಲ ಬಿಸಿಸಿಐ.

ಪಾಕಿಸ್ತಾನ ತಂಡದ ನಿಗದಿತ ಪಂದ್ಯಗಳು ಮತ್ತು ಸ್ಥಳಗಳ ಬಗ್ಗೆ ಪಿಸಿಬಿಯ ಆಯ್ಕೆದಾರರು, ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದರ ಪ್ರಕಾರ ತಾಣಗಳನ್ನು ಬದಲಿಸುವಂತೆ ಐಸಿಸಿಗೆ ಮನವಿ ಬಂದಿದೆ. ಉದಾಹರಣೆಗೆ ಪಾಕಿಸ್ತಾನವು ಚೆನ್ನೈನಲ್ಲಿ ಅಫ್ಘಾನಿಸ್ತಾನ ಮತ್ತು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವುದಿಲ್ಲ ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಬಿಸಿಸಿಐ ತನ್ನ ಯೋಜನೆಯಲ್ಲಿ ಸ್ಪಷ್ಟತೆ ಹೊಂದಿದೆ. ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಹೇಳಿದೆ. ಐಸಿಸಿಗೆ ಪಿಸಿಬಿ ಮಾಡಿದ ವಿನಂತಿಗಳನ್ನು ತಳ್ಳಿಹಾಕಿದೆ. ಪ್ರಸ್ತಾವಿತ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಸಿದ್ಧವಿಲ್ಲ .

ಇದನ್ನೂ ಓದಿ : World Cup 2023 : ಒಪ್ಪಂದಕ್ಕೆ ಸಹಿ ಹಾಕಲು ಐಸಿಸಿಯಿಂದ ಕಾಸು ಕೇಳಿದ ಪಾಕ್​ ತಂಡ! ಇದೆಂಥಾ ದುರಾಸೆ?

ಪಾಕಿಸ್ತಾನದ ಪಂದ್ಯಗಳನ್ನು ಮರು ನಿಗದಿಪಡಿಸಲು ಸಾಧ್ಯವಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಬೆಂಗಳೂರಿನಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲು ಕೇಳಿರುವ ಸಲಹೆ ಸೂಕ್ತವಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿಯ ಸದಸ್ಯ ಮಂಡಳಿಗಳಿಗೆ ಪ್ರಯಾಣದ ಬಗ್ಗೆ ಸಲಹೆಗಳನ್ನು ಕೇಳುವುದು ಟೂರ್ನಿ ಆಯೋಜನೆಯ ಪ್ರೋಟೋಕಾಲ್​​ನ ಭಾಗವಾಗಿದೆ. ಸ್ಥಳಗಳನ್ನು ಬದಲಾಯಿಸಲು ಅವಕಾಶ ಇದ್ದರೂ ಬಲವಾದ ಕಾರಣವಿರಬೇಕು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. “2016ರಲ್ಲಿ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​​ಗಾಗಿ ಭಾರತ ಪ್ರವಾಸ ಕೈಗೊಂಡಾಗ ಭದ್ರತಾ ಕಾರಣಗಳಿಂದಾಗಿ ಮೊಹಾಲಿಯಿಂದ ಕೋಲ್ಕೊತಾಗೆ ಪಂದ್ಯವನ್ನು ಸ್ಥಳಾಂತರಿಸಲಾಗಿತ್ತು. ನಿಮ್ಮ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿಗೆ ಅನುಗುಣವಾಗಿ ನೀವು ಸ್ಥಳದ ಬಗ್ಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರೆ, ವೇಳಾಪಟ್ಟಿಯನ್ನು ಅಂತಿಮಗೊಳಿಸುವುದು ತುಂಬಾ ಕಷ್ಟವಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

Exit mobile version