Site icon Vistara News

WPL 2023 : ದುರ್ಗೆಯ ಶ್ಲೋಕದೊಂದಿಗೆ ಆರಂಭವಾಗುತ್ತದೆ ಮಹಿಳೆಯರ ಪ್ರೀಮಿಯರ್​ ಲೀಗ್​ನ ಗೀತೆ

BCCI has released the mascot of Women's Premier League

#image_title

ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್​ ಲೀಗ್​ (WPL 2023) ಮಸ್ಕಾಟ್​ ಅನ್ನು ಬಿಸಿಸಿಐ ಗುರುವಾರ (ಫೆಬ್ರವರಿ 2ರಂದು) ಬಿಡುಗಡೆ ಮಾಡಿದೆ. ಮಾರ್ಚ್​4ರಂದು ಗುಜರಾತ್​ ಜಯಂಟ್ಸ್​ ಹಾಗೂ ಮುಂಬಯಿ ಇಂಡಿಯನ್ಸ್​ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಹೀಗಾಗಿ ಎಲ್ಲ ತಂಡಗಳು ಅಭ್ಯಾಸ ಆರಂಭಿಸಿವೆ. ಇದೇ ಅವಧಿಯಲ್ಲಿ ಟೂರ್ನಿ ಆಯೋಜನೆಗೆ ಸಿದ್ಧತೆ ಮಾಡಿಕೊಂಡಿರುವ ಬಿಸಿಸಿಐ ಮಸ್ಕಾಟ್​ ಹಾಗೂ ಗೀತೆಯನ್ನು ಬಿಡುಗಡೆ ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಟ್ವಿಟರ್​ ಖಾತೆಯಲ್ಲಿ ಮಸ್ಕಾಟ್​ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಗೀತೆ ದೇವಿಯ ಶ್ಲೋಕದೊಂದಿಗೆ ಆರಂಭವಾಗುತ್ತದೆ.

ಜಯ್​ ಶಾ ಶೇರ್​ ಮಾಡಿರುವ ಟ್ವೀಟ್​ ಇಲ್ಲಿದೆ

ಮಹಿಳೆಯ ಪ್ರೀಮಿಯರ್​ ಲೀಗ್​ನ ಮಸ್ಕಾಟ್ ಹೆಸರು ಶಕ್ತಿ. ನೀಲಿ ಬಣ್ಣದ ಜೆರ್ಸಿ ಧರಿಸಿಕೊಂಡಿರುವ ಹೆಣ್ಣು ಹುಲಿ ಅದಾಗಿದೆ. ಈ ಮಸ್ಕಾಟ್​ ಕ್ರಿಕೆಟ್​ ಆಡಿ ತನ್ನ ಸಾಮರ್ಥ್ಯ ಪ್ರದರ್ಶಿಸುವ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಟೂರ್ನಿಯ ಗೀತೆಯನ್ನೂ ಪ್ರಕಟಿಸಲಾಗಿದೆ. ಅದರಲ್ಲಿ ಎಲ್ಲ ಸವಾಲುಗಳನ್ನು ಮೀರಿ ಕ್ರಿಕೆಟ್​ ಆಡಿದ ಮಹಿಳೆಯರನ್ನು ಶ್ಲಾಘಿಸಲಾಗಿದೆ. ದೇವಿ ದುರ್ಗೆಯನ್ನು ಪೂಜಿಸುವ ಯಾ ದೇವಿ ಸರ್ವಭೂತೇಶು ಶ್ಲೋಕದೊಂದಿಗೆ ಈ ಹಾಡು ಆರಂಭಗೊಳ್ಳುತ್ತದೆ. ಶಕ್ತಿ ಎಂದರೆ ದುರ್ಗೆಯ ರೂಪವೂ ಹೌದು. ಹೀಗಾಗಿ

ಇದನ್ನೂ ಓದಿ : WPL 2023 : ಜನಪ್ರಿಯ ಹಾಡೊಂದಕ್ಕೆ ಸ್ಟೆಪ್ಸ್ ಹಾಕಿದ ಗುಜರಾತ್​ ಜಯಂಟ್ಸ್ ತಂಡದ ಮೆಂಟರ್​ ಮಿಥಾಲಿ ರಾಜ್​

ಆರು ತಂಡಗಳನ್ನು ಒಳಗೊಂಡಿರುವ ಮಹಿಳೆಯರ ಪ್ರೀಮಿಯರ್​ ಲೀಗ್​ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೇ ಆಟಗಾರ್ತಿಯರು ಫ್ರಾಂಚೈಸಿಗಳಿಂದ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಂಡಿದ್ದು, ಮೈದಾನದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದಾರೆ.

Exit mobile version