Site icon Vistara News

ICC U19 Women’s World Cup: ಚೊಚ್ಚಲ ಐಸಿಸಿ ಅಂಡರ್ 19 ವನಿತೆಯರ ವಿಶ್ವ ಕಪ್​ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಸನ್ಮಾನ

icc u19 women's world cup

#image_title

ಅಹಮದಾಬಾದ್‌: ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳೆಯರ(icc u19 women’s world cup) ಟಿ20 ವಿಶ್ವ ಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡಕ್ಕೆ ಬಿಸಿಸಿಐ ಮತ್ತು ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್(sachin tendulkar) ಅಭಿನಂದನೆ ಸಲ್ಲಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಕಿವೀಸ್​ ವಿರುದ್ಧದ ಅಂತಿಮ ಟಿ20 ಪಂದ್ಯ ಆರಂಭಕ್ಕೆ ಮುನ್ನ ವಿಶ್ವ ವಿಜೇತ ತಂಡಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಿತು.

ವಿಶ್ವ ಕಪ್​ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಶಫಾಲಿ ವರ್ಮಾ ಪಡೆ ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ 5 ಕೋಟಿ ರೂ. ಬಹುಮಾನದ ಚೆಕ್‌ ನೀಡಿ ಗೌರವಿಸಿದರು. ಇದೇ ವೇಳೆ ಸಚಿನ್​ ತೆಂಡೂಲ್ಕರ್​ ಪ್ರಶಸ್ತಿ ಗೆದ್ದ ಎಲ್ಲ ಭಾರತೀಯ ಆಟಗಾರ್ತಿಯರನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ IND VS NZ: ಗಿಲ್​, ಪಾಂಡ್ಯ ಆರ್ಭಟಕ್ಕೆ ಬೆಚ್ಚಿಬಿದ್ದ ಕಿವೀಸ್​; ಭಾರತಕ್ಕೆ ಸರಣಿ ಜಯ

“ದೇಶಕ್ಕಾಗಿ ನೀವು ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲಬೇಕು, ಇನ್ನೂ ಮಹತ್ತರವಾದುದ್ದನ್ನು ನೀವು ಸಾಧಿಸುತ್ತೀರಿ ಎನ್ನುವ ನಂಬಿಕೆ ಇದೆ” ಎಂದು ಸಚಿನ್ ತೆಂಡೂಲ್ಕರ್ ಹೇಳಿದರು. ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಬಿಸಿಸಿಐ ಉತ್ತಮವಾಗಿ ಕೆಲಸ ಮಾಡುತ್ತಿದೆ. ಮಹಿಳೆಯರು ಮತ್ತು ಪುರುಷರು ಸಮಾನರು ಎಂದು ನಾನು ನಂಬುತ್ತೇನೆ. ಕ್ರೀಡೆಯಲ್ಲಿ ಮಾತ್ರವಲ್ಲ ಎಲ್ಲ ವಲಯಗಳಲ್ಲೂ ಅವರಿಗೆ ಸಮಾವ ಅವಕಾಶ ಸಿಗಬೇಕು ಎಂದು ಸಚಿನ್​ ಹೇಳಿದರು.

Exit mobile version