ಮುಂಬಯಿ: ಬಹು ನಿರೀಕ್ಷಿತ ಮಹಿಳೆಯರ ಐಪಿಎಲ್ ಆರಂಭಕ್ಕೆ ಬಿಸಿಸಿಐ ನಾನಾ ರೀತಿಯಲ್ಲಿ ಯೋಜನೆ ರೂಪಿಸಿಕೊಳ್ಳುತ್ತಿದೆ. ಪುರುಷರ ಐಪಿಎಲ್‌ಗೆ ಮೊದಲು ಮಹಿಳೆಯರ ಕ್ರಿಕೆಟ್ ಲೀಗ್ ನಡೆಯಬಹುದು ಎಂದು ಅಂದಾಜಿಸಲಾಗಿದ್ದು, ಒಟ್ಟು ಆರು ಫ್ರಾಂಚೈಸಿಗಳ ನಡುವೆ ಹಣಾಹಣಿ ನಡೆಯಬಹುದು ಎಂದು ಹೇಳಲಾಗುತ್ತಿದೆ. ಈ ಸಿದ್ಧತೆ ಹಿನ್ನೆಲೆಯಲ್ಲಿ ಬಿಸಿಸಿಐ ಪಂಧ್ಯದ ನೇರ ಪ್ರಸಾರದ ಹಕ್ಕು ವಿತರಣೆಗೆ ಟೆಂಡರ್ ಕರೆದಿದೆ.
ಹಕ್ಕು ಪಡೆಯಲು ಬೇಕಾಗುವ ಅರ್ಹತೆ, ಬಿಡ್ ಸಲ್ಲಿಕೆ, ಮೀಡಿಯಾ ಹಕ್ಕುಗಳ ಪ್ಯಾಕೆಜ್ ಹಾಗೂ ಬದ್ಧತೆಗಳನ್ನು ಬಿಸಿಸಿಐ ಪ್ರಕಟಿಸಿದೆ. ಇನ್ವಿಟೇಷನ್ ಟು ಟೆಂಡರ್ ಪಡೆಯಬೇಕಾದರೆ ಮರು ಪಾವತಿಯಾಗದ ೫ ಲಕ್ಷ ರೂಪಾಯಿ ಪಾವತಿ ಮಾಡಬೇಕೆಂದು ಬಿಸಿಸಿಐ ಹೇಳಿದೆ.
ಡಿಸೆಂಬರ್ ೩೧ರವರೆಗೆ ಟೆಂಡರ್ ಅರ್ಜಿ ಲಭಿಸಲಿದೆ. ಸಲ್ಲಿಕೆಯಾದ ಅರ್ಜಿಯನ್ನು ಐಪಿಎಲ್ ಸಮಿತಿಯ ಪರಿಶೀಲನೆ ಮಾಡಲಿದ್ದು, ನಿಯಮಗಳು ಪಾಲಿಸಿರುವ ಕಂಪನಿಗಳಿಗೆ ಮಾತ್ರ ಬಿಡ್ ಮಾಡಲು ಅವಕಾಶ ಲಭಿಸಲಿದೆ. ಅರ್ಜಿ ತಿರಸ್ಕೃತಗೊಂಡವರಿಗೆ ಹಣ ವಾಪಸ್ ಸಿಗುವುದಿಲ್ಲ ಎಂಬುದಾಗಿ ಬಿಸಿಸಿಐ ಹೇಳಿದೆ.
ಇದನ್ನೂ ಓದಿ | Women’s IPL | ತಂಡಗಳ ಹರಾಜಿನ ಮೂಲ ಬೆಲೆಯಲ್ಲೇ ವಿಶ್ವ ದಾಖಲೆ ಸೃಷ್ಟಿಸಲಿದೆ ಮಹಿಳೆಯರ ಐಪಿಎಲ್!