ಮುಂಬಯಿ : ಭಾರತ ಕ್ರಿಕೆಟ್ ತಂಡವನ್ನು ೧೪ ವರ್ಷಗಳ ಬಳಿಕ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದ್ದು, ಸರಕಾರದಿಂದ ಅನುಮತಿ ಪಡೆಯಲು ಮನವಿ ಸಲ್ಲಿಕೆ ಮಾಡಲಿದೆ. ಅಕ್ಟೋಬರ್ ೧೮ರಂದು ಬಿಸಿಸಿಐ ವಾರ್ಷಿಕ ಮಹಾಸಭೆ ನಡೆಯಲಿದ್ದು, ಅದರಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.
ಪಾಕಿಸ್ತಾನದಲ್ಲಿ ೨೦೨೩ರ ಏಷ್ಯಾ ಕಪ್ ಆಯೋಜನೆಗೊಂಡಿದ್ದು, ಅದರಲ್ಲಿ ಪಾಲ್ಗೊಳ್ಳುವುದಕ್ಕೆ ಭಾರತ ತಂಡ ಅಲ್ಲಿಗೆ ಹೋಗಬೇಕಾಗುತ್ತದೆ. ಆದರೆ, ೨೦೦೮ರಿಂದ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಿಲ್ಲ. ರಾಜಕೀಯ ಭಿನ್ನಭಿಪ್ರಾಯದ ಹಿನ್ನೆಲೆಯಲ್ಲಿ ಎರಡೂ ದೇಶಗಳ ಕ್ರಿಕೆಟ್ ಸಂಬಂಧ ಮುರಿದು ಬಿದ್ದಿತ್ತು. ಹೀಗಾಗಿ ಮತ್ತೆ ಪಾಕಿಸ್ತಾನಕ್ಕೆ ತೆರಳು ಮೊದಲು ಭಾರತ ಸರಕಾರದ ಅನುಮತಿ ಅಗತ್ಯವಿರುತ್ತದೆ.
೨೦೨೩ರಲ್ಲಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ನಡೆದ ರೀತಿಯಲ್ಲೇ ಅದೇ ವರ್ಷ ಭಾರತದಲ್ಲಿ ಏಕ ದಿನ ವಿಶ್ವ ಕಪ್ ಕೂಡ ಆಯೋಜನೆಗೊಂಡಿದೆ. ಅದಕ್ಕೆ ಪಾಕಿಸ್ತಾನ ತಂಡ ಆಗಮಿಸಬೇಕಾಗುತ್ತದೆ. ಹೀಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಮುಂದಾಗಿದೆ. ಆದರೆ, ಸರಕಾರದ ಪೂರ್ವಾನುಮತಿಯನ್ನು ಪಡೆಯಲು ಉದ್ದೇಶಿಸಿದೆ.
ಪಾಕಿಸ್ತಾನಕ್ಕೆ ಭಾರತ ತಂಡ ಹೋಗುವ ಸಂಗತಿ ಸರಕಾರದ ಅನುಮತಿಯನ್ನು ಆಧರಿಸಿರುತ್ತದೆ. ಹೀಗಾಗಿ ಸಭೆ ಮುಗದಿ ಬಳಿಕ ಅನುಮತಿ ಪಡೆದುಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ | Team India | ಜಸ್‌ಪ್ರಿತ್ ಬುಮ್ರಾ ಬದಲಿಗೆ ಬೇರೆ ಬೌಲರ್ ಆಯ್ಕೆ, ಪ್ರಕಟಣೆ ಹೊರಡಿಸಿದ ಬಿಸಿಸಿಐ