Site icon Vistara News

Amrit Mahotsav | ಅಮೃತ ಮಹೋತ್ಸವಕ್ಕೆ ಬಿಸಿಸಿಐ ನೂತನ ಜೆರ್ಸಿ ಹೀಗಿದೆ ನೋಡಿ

amirt mahotsav

ಮುಂಬಯಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ (Amrit Mahotsav) ಹಿನ್ನೆಲೆಯಲ್ಲಿ ದೇಶ ಸಂಭ್ರಮದಲ್ಲಿದೆ. ಎಲ್ಲೆಡೆ ನೋಡಿದರೂ ತ್ರಿವರ್ಣ ಧ್ಜಜಗಳು ಹಾರಾಡುತ್ತಿವೆ. ಪ್ರತಿಯೊಬ್ಬ ಭಾರತೀಯನೂ ಈ ವಿಶೇಷ ಕ್ಷಣವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾನೆ. ಏತನ್ಮಧ್ಯೆ, ಬಿಸಿಸಿಐ ೭೫ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾದ ಹೊಸ ಜರ್ಸಿ ಬಿಡುಗಡೆ ಮಾಡಿದೆ.

ಭಾರತ ತಂಡದ ಇದೀಗ ಜಿಂಬಾಬ್ವೆ ಪ್ರವಾಸದಲ್ಲಿದೆ. ಅಲ್ಲಿಯೂ ಟೀಮ್‌ ಇಂಡಿಯಾದ ಆಟಗಾರರು ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿದ್ದಾರೆ. ಅವರು ಸರಣಿಯಲ್ಲಿ ಹೊಸ ಮಾದರಿಯ ಜರ್ಸಿ ಧರಿಸಿ ಆಡುವ ಸಾಧ್ಯತೆಗಳಿವೆ.

ಬಿಸಿಸಿಐ ಟ್ವೀಟ್‌ ಮಾಡುವ ಮೂಲಕ ತಮ್ಮ ಹೊಸ ಜರ್ಸಿಯನ್ನು ಅನಾವರಣ ಮಾಡಿದೆ. “ಎಲ್ಲರೂ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವಾಂತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸೋಣ. ಇಲ್ಲಿದೆ ನೋಡಿ ಸೀಮಿತ ಆವೃತ್ತಿಯ ಜರ್ಸಿ ಎಂದು ಬರೆದುಕೊಂಡಿದೆ.

ಜರ್ಸಿಯಲ್ಲಿ ಪೂರ್ತಿ ೭೫ ಎಂದು ಮುದ್ರಿಸಲಾಗಿದೆ. ಎಡಭಾಗದಲ್ಲಿ ಬಿಸಿಸಿಐ ಲೋಗೋ ಹಾಗೂ ಬಲಭಾಗದಲ್ಲಿ ಪ್ರಾಯೋಜಕರಾದ ಎಮ್‌ಪಿಎಲ್‌ನ ಹೆಸರಿದೆ. ಮಧ್ಯದಲ್ಲಿ ಇಂಡಿಯಾ ಎಂದು ಬರೆಯಲಾಗಿದೆ.

ಭಾರತ ಹಾಗೂ ಜಿಂಬಾಬ್ವೆ ನಡುವಿನ ಏಕದಿನ ಪಂದ್ಯಗಳ ಸರಣಿ ಆಗಸ್ಟ್‌ ೧೮ರಂದ ಆರಂಭಗೊಂಡು ೨೨ರವೆಗೆ ನಡೆಯಲಿದೆ

ಇದನ್ನೂ ಓದಿ | Team India | ಹರಾರೆಯಲ್ಲಿ ನಿಂತು ಭಾರತ ಮಾತಾ ಕಿ ಜೈ ಕೂಗಿದ ಟೀಮ್‌ ಇಂಡಿಯಾ

Exit mobile version