Site icon Vistara News

BCCI Meeting: ಬಿಸಿಸಿಐ ಮಹತ್ವದ ಸಭೆಯಲ್ಲಿ ರೋಹಿತ್​,ದ್ರಾವಿಡ್​ ಭಾಗಿ; ವಿಶ್ವಕಪ್​ ಬಗ್ಗೆ ಚರ್ಚೆ

bcci meeting

ನವದೆಹಲಿ: ಏಷ್ಯಾ ಕಪ್(Asia Cup 2023​ ಮತ್ತು ಐಸಿಸಿ ಏಕದಿನ ವಿಶ್ವಕಪ್​ಗೆ(ICC World Cup 2023) ತಂಡವನ್ನು ರಚಿಸುವ ಸಲುವಾಗಿ ಬಿಸಿಸಿಐ ಸೋಮವಾರ ಆಯ್ಕೆ ಸಮಿತಿಯೊಂದಿಗೆ ಮಹತ್ವದ ಸಭೆ(BCCI Meeting) ನಡೆಸಲಿದೆ. ಈ ಸಭೆಯಲ್ಲಿ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಅವರಿಗೂ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ಸಭೆಯಲ್ಲಿ ಗಾಯಾಳು ಆಟಗಾರರ ಪಟ್ಟಿಯನ್ನು ಸಿದ್ಧಮಾಡಿ ಅವರ ಲಭ್ಯತೆಯ ಬಗ್ಗೆ ಗಂಭೀರ ಚರ್ಚೆಯನ್ನು ನಡೆಸಿ ಏಷ್ಯಾಕಪ್​ಗೆ 15 ಮಂದಿ ಸದಸ್ಯರ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಒಂದೊಮ್ಮೆ ಈ ಸಂಖ್ಯೆ 18ಕ್ಕೆ ಏರಿಕೆಯಾದರೂ ಅಚ್ಚರಿಯಿಲ್ಲ. ಆಗ ಮೂವರು ಆಟಗಾರರು ಸ್ಟ್ಯಾಂಡ್​ ಬೈ ಆಗಿ ಉಳಿಯಲಿದ್ದಾರೆ.

ರಾಹುಲ್​-ಅಯ್ಯರ್​​ ಭವಿಷ್ಯ ನಿರ್ಧಾರ

ಕೆ.ಎಲ್ ರಾಹುಲ್(KL Rahul) ಅವರ ಫಿಟ್​ನೆಸ್ ವರದಿ ಶುಕ್ರವಾರ ಹೊರಬಿದ್ದಿದೆ. ಮೂಲಗಳ ಪ್ರಕಾರ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಪಿಟಿಐ(PTI) ವರದಿ ಮಾಡಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಫಿಟ್​ನೆಸ್​ ಪರೀಕ್ಷೆಗೆ ಒಳಪಟ್ಟ ರಾಹುಲ್ ಬ್ಯಾಟಿಂಗ್​ ಮತ್ತು ಫೀಲ್ಡಿಂಗ್​ ಮಾಡಲು ಫಿಟ್​ ಆಗಿದ್ದಾರೆ ಎಂದು ಎನ್​ಸಿಎ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಆದರೆ ಶ್ರೇಯಸ್​ ಅಯ್ಯರ್​ ಬೆನ್ನು ನೋವಿನಿಂದ ಸಂಪೂರ್ಣ ಚೇತರಿಕೆ ಕಂಡಿಲ್ಲ ಅವರಿಗೆ ಇನ್ನು ಕೆಲ ದಿನಗಳ ವಿಶ್ರಾಂತಿ ಬೇಕಿದೆ ಎಂದು ವರದಿಯಾಗಿದೆ. ಹೀಗಾಗಿ ಇವರಿಬ್ಬರ ಆಯ್ಕೆ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ರಾಹುಲ್​ ಮತ್ತು ಅಯ್ಯರ್​ ಅವರು ಫಿಟ್​ ಆಗಿದ್ದರೂ ಅವರನ್ನು ನೇರವಾಗಿ ಮಹತ್ವದ ಪಂದ್ಯದಲ್ಲಿ ಆಡಲಿಳಿಸುವುದರಿಂದ ತಂಡಕ್ಕೆ ಹಿನ್ನಡೆಯಾಗಬಹುದು ಇದರ ಬದಲು ಪ್ರಸ್ತುತ ಆಡುತ್ತಿರುವ ಆಟಗಾರರನ್ನು ಆಯ್ಕೆ ಮಾಡಿದರೆ ಉತ್ತಮ ಎಂದು ರವಿಶಾಸ್ತ್ರಿ, ಸಾಬಾ ಕರೀಂ ಸೇರಿ ಹಲವು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.

4ನೇ ಕ್ರಮಾಂಕಕ್ಕೂ ಆಟಗಾರನ ಆಯ್ಕೆ

ಭಾರತ ತಂಡದಲ್ಲಿ ಯುವರಾಜ್​ ಸಿಂಗ್​ ಅವರ ಬಳಿಕ 4ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ ಸಿಗಲೇ ಇಲ್ಲ. ಈ ಸಮಸ್ಯೆ ಕಳೆದ 2019ರ ವಿಶ್ವಕಪ್​ನಲ್ಲಿಯೂ ಹೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು. ಈ ಸ್ಥಾನಕ್ಕೆ ವಿಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಕೋಚ್​ ರಾಹುಲ್​ ದ್ರಾವಿಡ್​ ಅವರು ಪ್ರಯೋಗವೊಂದನ್ನು ಮಾಡಿ ತಿಲಕ್​ ಮರ್ಮಾ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಇದರಲ್ಲಿ ಅವರು ಯಶಸ್ಸು ಕಂಡಿದ್ದರು. ಹೀಗಾಗಿ ಅವರನ್ನು ಕೂಡ ಆಯ್ಕೆಗೆ ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ Asia Cup: ಏಷ್ಯಾಕಪ್‌ಗೆ ತಂಡದ ಪಟ್ಟಿ ಫೈನಲ್‌; ಸಂಜು ಸ್ಯಾಮ್ಸನ್‌ ಔಟ್‌

ಈಗಾಗಲೇ ಈ ಟೂರ್ನಿಯ ಆತಿಥೇಯ ಪಾಕಿಸ್ತಾನ ಸೇರಿ ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸಾಂಪ್ರದಾಯಿಯ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕ್​ ನಡುವಣ ಪಂದ್ಯ ಸೆಪ್ಟಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. 50 ಓವರ್​ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

Exit mobile version