Site icon Vistara News

ವಾಟ್ಸ್​ಆ್ಯಪ್​​ ಖಾತೆ ತೆರೆದ ಬಿಸಿಸಿಐ; ಅಭಿಮಾನಿಗಳಿಗೆ ಭಾರತ ತಂಡ ಇನ್ನಷ್ಟು ಹತ್ತಿರ

team india whatsapp

ಮುಂಬಯಿ: ಸ್ಮಾರ್ಟ್‌ಫೋನ್‌ಗಳು ಎಲ್ಲರ ಕೈಯಲ್ಲಿ ಬಂದು ಕುಳಿತು ದಶಕ ಸಂದಿದೆ. ಸಾಮಾಜಿಕ ಜಾಲತಾಣಗಳ ಬಳಕೆ ವರ್ಷವರ್ಷಕ್ಕೂ ಹೆಚ್ಚುತ್ತಿದೆ. ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳು. ದಿನದಲ್ಲಿ ಒಂದು ಬಾರಿಯಾದರೂ ಒಬ್ಬ ವ್ಯಕ್ತಿ ತನ್ನ ಸಾಮಾಜಿಕ ಜಾಲತಾಣವನ್ನು ಪರೀಕ್ಷಿಸದೇ ಇರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇದು ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು ತಪ್ಪಾಗಲಾರದು. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರು ಕ್ಷಣ ಮಾತ್ರದಲ್ಲಿ ಮಾಹಿತಿ ಜನರ ಕೈ ಸೇರುತ್ತದೆ. ಇದೀಗ ಬಿಸಿಸಿಐ(BCCI News) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಟೀಮ್​ ಇಂಡಿಯಾದ(team india whatsapp) ಅಭಿಮಾನಿಗಳಿಗಾಗಿ ವಾಟ್ಸ್​ಆ್ಯಪ್​​ ಖಾತೆಯೊಂದನ್ನು ತೆರೆದಿದೆ.

ಬಿಸಿಸಿಐ ವಾಟ್ಸ್​ಆ್ಯಪ್​​ ಖಾತೆ ತೆರೆದಿರುವ ವಿಚಾರವನ್ನು ತನ್ನ ಅಧಿಕೃತ ಟ್ವಿಟರ್​ನಲ್ಲಿ ಪ್ರಕಟಿಸಿದೆ. “ಟೀಮ್ ಇಂಡಿಯಾ ಈಗ ವಾಟ್ಸ್​ಆ್ಯಪ್​​ ಖಾತೆ ಹೊಂದಿದೆ. ಹೊಸ ಅಪ್​ಡೇಟ್​ಗಳು, ವಿಶೇಷ ಫೋಟೋಗಳು ಮತ್ತು ಇತರ ಎಲ್ಲ ವಿಷಯಕ್ಕಾಗಿ ಸಂಪರ್ಕದಲ್ಲಿರಿ” ಎಂದು ಬರೆದುಕೊಂಡಿದೆ.

ಮಾಹಿತಿಗಳು ಅಧಿಕೃತ

ಈ ವಾಟ್ಸ್​ಆ್ಯಪ್​ ಖಾತೆಯಲ್ಲಿ ಅಭಿಮಾನಿಗಳು ಸಂವಹನ ಮಾಡಲು ಸಾಧ್ಯವಿಲ್ಲ. ಕೇವಲ ಅಡ್ಮೀನ್​ ಆಗಿರುವ ಬಿಸಿಸಿಐ ಮಾತ್ರ ಭಾರತ ತಂಡಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತದೆ. ಪಂದ್ಯಗಳ ಲೈವ್​ ಅಪ್​ಡೇಟ್ಸ್​, ಭಾರತ ತಂಡದ ಮುಂದಿನ ಸರಣಿ ಹಾಗೂ ಆಟಗಾರರ ಲಭ್ಯತೆ ಮತ್ತು ಅಲಭ್ಯತೆಯ ಮಾಹಿತಿಗಳನ್ನು ಕ್ಷಣ ಮಾತ್ರದಲ್ಲಿ ನೇರವಾಗಿ ರವಾನಿಸಲಿದೆ. ಈಗಾಗಲೇ ಈ ಗ್ರೂಪ್​ಗೆ ಹಲವು ಮಂದಿ ಕ್ರಿಕೆಟ್ ಅಭಿಮಾನಿಗಳು ಸೇರ್ಪಡೆಗೊಂಡಿದ್ದಾರೆ. ಕೆಲವು ಸುಳ್ಳು ಸುದ್ದಿಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಸಿಸಿಐ ಈ ವಾಟ್ಸಪ್​ ಖಾತೆಯನ್ನು ತರೆದಿದೆ. ಇಲ್ಲಿ ಬರುವಂತಹ ಎಲ್ಲ ಸುದ್ದಿಗಳು ಅಧಿಕೃತವಾಗಿರುತ್ತದೆ ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ R Ashwin : ಏಕ ದಿನ ಕ್ರಿಕೆಟ್​ನಲ್ಲಿ ಭಾರತದ ಪಾರಮ್ಯ ಕಡಿಮೆಯಾಗಿದ್ದಕ್ಕೆ ಕಾರಣ ತಿಳಿಸಿದ ಆರ್​ ಅಶ್ವಿನ್​

ವಯಾಕಾಮ್ 18ಗೆ ಭಾರತದ ತವರು ಪಂದ್ಯಗಳ ಪ್ರಸಾರದ ಹಕ್ಕು

ಭಾರತ ಕ್ರಿಕೆಟ್ ತಂಡದ ತವರು ಪಂದ್ಯಗಳ ನೇರಪ್ರಸಾರದ ಹಕ್ಕನ್ನು ವಯಾಕಾಮ್ 18(Viacom18) ಪಡೆದುಕೊಂಡಿದೆ. ಮುಂದಿನ 5 ವರ್ಷಗಳ ಕಾಲ ಈ ಒಪ್ಪಂದ ಚಾಲ್ತಿಯಲ್ಲಿ ಇರಲಿದೆ. ಒಪ್ಪಂದ ಪ್ರಕಾರ ಭಾರತೀಯ ಕ್ರಿಕೆಟ್ ತಂಡದ ತವರು ಪಂದ್ಯಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು(BCCI TV And Digital Media Rights) ವಯಾಕಾಮ್ 18 ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದರಿಂದ ಬಿಸಿಸಿಐಗೆ ಕೋಟಿ ಮೊತ್ತ ಹರಿದು ಬರಲಿದೆ.

8,200 ಕೋಟಿ ರೂ.

ಭಾರತದ 88 ತವರು ಪಂದ್ಯಗಳಿಗೆ ಪ್ರತ್ಯೇಕ ಟೆಲಿವಿಷನ್ ಮತ್ತು ಡಿಜಿಟಲ್ ಹಕ್ಕುಗಳನ್ನು ವಯಾಕಾಮ್ 18 ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೂಲಗಳ ಅಂದಾಜಿನ ಪ್ರಕಾರ ಬಿಸಿಸಿಐ ಪಂದ್ಯಗಳ ಮಾರಾಟದಿಂದ ಒಟ್ಟು ಆದಾಯದಲ್ಲಿ ಒಂದು ಬಿಲಿಯನ್ ಯುಎಸ್ ಡಾಲರ್ (8,200 ಕೋಟಿ. ರೂ) ಪಡೆಯುವ ನಿರೀಕ್ಷೆಯಿದೆ.

ಐದು ವರ್ಷಗಳ ಅವಧಿಯುಲ್ಲಿ ಇದೇ ವರ್ಷ ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ಸರಣಿಯೂ ಒಳಗೊಂಡಿದೆ. ಒಟ್ಟಾರೆಯಾಗಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮುಂದಿನ ಐದು ವರ್ಷಗಳಲ್ಲಿ ಪೂರ್ವ ನಿಗದಿಯಾದಂತೆ ಒಟ್ಟು 21 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಐದು ಟೆಸ್ಟ್ ಪಂದ್ಯಗಳು, ಆರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಹತ್ತು ಟ್ವೆಂಟಿ 20 ಪಂದ್ಯಗಳು ಸೇರಿವೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾದರೂ ಅಚ್ಚರಿಯಿಲ್ಲ.

Exit mobile version