Site icon Vistara News

ಆಫ್ಘನ್​ ವಿರುದ್ಧದ ಸರಣಿಗೆ ಭಾರತದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತನೆ

BCCI plans to rest India's key players for series against Afghanistan

#image_title

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ( IPL 2023) ಮುಕ್ತಾಯದ ನಂತರ ಕ್ರಿಕೆಟ್ ಪ್ರಿಯರು ಮುಂಬರುವ ದಿನಗಳಲ್ಲಿ ಎಡೆಬಿಡದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಿಗೆ ಸಾಕ್ಷಿಯಾಗಲಿದ್ದಾರೆ. ಜೂನ್ 7ರಿಂದ ಇಂಗ್ಲೆಂಡ್​​ನ ಓವಲ್​​ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ನಡೆಯಲಿದೆ. ಇದು ಟೀಮ್​ ಇಂಡಿಯಾ (Team India) ಪಾಲಿಗೆ ಮೊದಲ ಸವಾಲು. ಇದಾದ ಬಳಿಕ ಅಫಘಾನಿಸ್ತಾನ ವಿರುದ್ಧ ತವರಿನಲ್ಲಿ ಸರಣಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ.

ಟೀಮ್ ಇಂಡಿಯಾದ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿ (Cricket Timetable) ಗಮನಿಸಿದರೆ, ಬಿಸಿಸಿಐ ತವರಿನಲ್ಲಿ ನಡೆಯುವ ಈ ಸರಣಿಗೆ ಹೆಚ್ಚು ಯೋಜನೆಗಳನ್ನು ರೂಪಿಸಬೇಕಾಗಿದೆ. ಪ್ರಮುಖವಾಗಿ ಆಟಗಾರರ ಲಭ್ಯತೆ ಬಗ್ಗೆ ಹೆಚ್ಚು ಆತಂಕಗಳು ಎದುರಾಗಲಿವೆ. ವರದಿಗಳನ್ನು ನಂಬುವುದಾದರೆ, ಭಾರತೀಯ ಮಂಡಳಿಯು ತಮ್ಮ ಕೆಲಸದ ಹೊರೆ ನಿರ್ವಹಣಾ ಪ್ರಯತ್ನಗಳ ಭಾಗವಾಗಿ ಆಫ್ಘನ್ನರ ವಿರುದ್ಧ ಪ್ರಮುಖ ಆಟಗಾರರು ಇಲ್ಲದ ಎರಡನೇ ತಂಡವನ್ನು ಆಡಿಸುವ ಸಾಧ್ಯತೆಗಳಿವೆ. ಹಾರ್ದಿಕ್ ಪಾಂಡ್ಯ (Hardik Pandya) ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ.

ತವರಿನ ಸರಣಿ ಮುಕ್ತಾಯದ ಬಳಿಕದ ವೆಸ್ಟ್ ಇಂಡೀಸ್ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಹೊರೆ ನಿರ್ವಹಣೆಯನ್ನು ಯೋಜಿಸಲಾಗಿದೆ, ಟೆಸ್ಟ್ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿಗೆ ಅಫಘಾನಿಸ್ತಾನ ವಿರುದ್ಧ ಆಡುವುದಿಲ್ಲ.

ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಭಾಗಿ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಹಿಂದೆ ಮಾಧ್ಯಮ ಹಕ್ಕುಗಳ ಟೆಂಡರ್​ ವಿತರಣೆ ವೇಳೆ ಈ ಕುರಿತು ಮಾಹಿತಿ ನೀಡಿದ್ದರು. ಅದನ್ನು ಅಫ್ಘಾನಿಸ್ತಾನ ತಂಡದ ಭಾರತ ಪ್ರವಾಸದ ಆಧಾರದ ಮೇಲೆ ಪರಿಗಣಿಸಲಾಗುವುದು. ಆಸ್ಟ್ರೇಲಿಯಾ ಸರಣಿಯ ಸಮಯದಲ್ಲಿ ಹೊಸ ಪ್ರಕ್ರಿಯೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು.

“ಬಿಸಿಸಿಐ ಮಾಧ್ಯಮ ಹಕ್ಕುಗಳ ಟೆಂಡರ್ ಈ ವರ್ಷ (ಜೂನ್-ಜುಲೈ) ನಿಗದಿಯಲ್ಲಿರುತ್ತದೆ. ಉಳಿದ ಪ್ರಕ್ರಿಯೆಯು ಆಸ್ಟ್ರೇಲಿಯಾ ಸರಣಿಯಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಮಂಡಳಿಯು ಸಂಬಂಧಪಟ್ಟ ಎಲ್ಲಾ ಪಾಲುದಾರರೊಂದಿಗೆ ಮಾಡುತ್ತೇವೆ ಎಂದು ಜಯ್​ ಶಾ ಹೇಳಿದ್ದರು.

ಮತ್ತೊಂದು ಬೆಳವಣಿಗೆಯಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಅಧ್ಯಕ್ಷ ಮಿರ್ವಾಯಿಸ್ ಅಶ್ರಫ್​ ಪಿಎಲ್ 2023 ರ ಫೈನಲ್​ ಪಂದ್ಯದ ವೇಳೆ ಹಾಜರಿರುತ್ತಾರೆ. ಇದೇ ವೇಳೆ 2023ರ ಏಷ್ಯಾಕಪ್ ಟೂರ್ನಿಯ ಭವಿಷ್ಯವನ್ನು ನಿರ್ಧರಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆ ನಡೆಸುವ ಸಾಧ್ಯತೆ ಇದೆ. ಆದ್ದರಿಂದ, ಅದರ ನಡುವೆ ಎರಡೂ ದೇಶಗಳ ಮಂಡಳಿಗಳು ಸೀಮಿತ ಓವರ್​​ಗಳ ಸರಣಿಯ ಕುರಿತೂ ಚರ್ಚೆ ನಡೆಸಲಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ 5 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಪ್ರವಾಸವು ಜುಲೈ 12ರಂದು ಪ್ರಾರಂಭವಾಗಿ ಆಗಸ್ಟ್ 13 ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಮೂರು ಚುಟುಕು ಪಂದ್ಯಗಳ ಸರಣಿ ಆಡಲಿದೆ.

Exit mobile version