ಢಾಕಾ: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದ ವೇಳೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೆ ಎರಡು ಪಂದ್ಯಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ. ಈ ಘಟನೆಯ ಬಗ್ಗೆ ಐಸಿಸಿ ತನ್ನ ನಿರ್ಧಾರವನ್ನು ಸರಣಿ ಮುಗಿದ ಮೂರು ದಿನಗಳ ಬಳಿಕ ತೆಗೆದುಕೊಂಡಿತು. ಆದರೆ ಅದಕ್ಕಿಂತ ಮೊದಲೇ ಭಾರತದ ಹಿರಿಯ ಕ್ರಿಕೆಟಿಗರು ಹರ್ಮನ್ಪ್ರೀತ್ ಕೌರ್ ವಿರುದ್ಧ ಬಿಸಿಸಿಐ “ಕಠಿಣ ಕ್ರಮ” ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ವಿವರಣೆ ನೀಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಐಸಿಸಿ ಮಹಿಳಾ ಚಾಂಪಿಯನ್ಷಿಪ್ ಸರಣಿಯ ಮೂರನೇ ಪಂದ್ಯದ ವೇಳೆ ಹರ್ಮನ್ಪ್ರೀತ್ ಎರಡು ಪ್ರತ್ಯೇಕ ನೀತಿ ಸಂಹಿತೆ ಉಲ್ಲಂಘಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. 34 ವರ್ಷದ ಆಟಗಾರ್ತಿ ಭಾರತದ ಚೇಸಿಂಗ್ ಸಮಯದಲ್ಲಿ ಎಲ್ಬಿಡಬ್ಲ್ಯು ಔಟ್ಗೆ ಒಳಗಾದ ಬಳಿಕ ನಿರಾಸೆಯಿಂದ ಸ್ಟಂಪ್ಗೆ ಹೊಡೆದಿದ್ದರು. ಇದು ಲೆವೆಲ್ 2 ಅಪರಾಧವಾಗಿದ್ದು, ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ. ಜತೆಗೆ ಮೂರು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.
ಪಂದ್ಯದ ನಂತರ ಅವರು ಪಂದ್ಯದಲ್ಲಿ ಅಂಪೈರಿಂಗ್ ಮಾನದಂಡವನ್ನು ಪ್ರಶ್ನಿಸಿದ್ದರು. ಕರುಣಾಜನಕ ಅಂಪೈರಿಂಗ್ ಎಂದು ಕರೆದಿದ್ದರು. ಇದು ಕ್ರಿಕೆಟ್ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ನೀತಿ ಸಂಹಿತೆಯ ಆರ್ಟಿಕಲ್ 2.8ರ ಉಲ್ಲಂಘನೆ. ಪಂದ್ಯದ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಯಿತು. ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿತ್ತು.
ಹರ್ಮನ್ಪ್ರೀತ್ ತನಿಖೆ
ಶುಕ್ರವಾರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ. ಮೇಲ್ಮನವಿ ಸಮಯ ಮುಗಿದಿರುವುದರಿಂದ ಎರಡು ಪಂದ್ಯದ ನಿಷೇಧವನ್ನು ಹಿಂತೆಗೆದುಕೊಳ್ಳಲು ಅಥವಾ ಸಡಿಲಿಸಲು ಮಂಡಳಿಯು ಮನವಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಮಂಡಳಿಯ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಹರ್ಮನ್ಪ್ರೀತ್ ಅವರನ್ನು ತನಿಖೆ ಮಾಡಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ind vs wi : ವಿಂಡೀಸ್ ವಿರುದ್ಧದ 2ನೇ ಪಂದ್ಯ ನಡೆಯುವ ಕೆನ್ಸಿಂಗ್ಟನ್ ಓವಲ್ ಪಿಚ್ ಹೇಗಿದೆ?
ಎರಡು ಪಂದ್ಯಗಳ ಅಮಾನತು ಕಾರಣದಿಂದಾಗಿ, ಹರ್ಮನ್ಪ್ರೀತ್ 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡವು ಹೆಚ್ಚಿನ ಒತ್ತಡ ಅನುಭವಿಸಬೇಕಾಗಿದೆ.
ಕೌರ್ ಅವರ ವರ್ತನೆಗೆ ವಿಶ್ವದ ಎಲ್ಲಾ ಭಾಗಗಳಿಂದ ವ್ಯಾಪಕ ಟೀಕೆ ವ್ಯಕ್ತಗೊಂಡವು. ಬಿಸಿಸಿಐ ತನ್ನದೇ ಆದ ಸಂಹಿತೆಯನ್ನು ಜಾರಿಗೊಳಿಸಿ ಅವಳನ್ನು ಮತ್ತಷ್ಟು ಶಿಕ್ಷಿಸುವ ಸಾಧ್ಯತೆಗಳೂ ಇವ . ಆದಾಗ್ಯೂ, ಸಭೆಯ ನಂತರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. 2023ರ ಏಶ್ಯನ್ ಗೇಮ್ಸ್ನಲ್ಲಿ ಭಾರತ ಪಾಲ್ಗೊಳ್ಳಲಿದ್ದು, ಮುಂದಿನ ಎರಡು ಪಂದ್ಯಗಳಿಂದ ಹರ್ಮನ್ಪ್ರೀತ್ ಕೌರ್ ಹೊರಗುಳಿಯಲಿದ್ದಾರೆ. ಭಾರತ ಫೈನಲ್ ತಲುಪಿದರೆ ಮಾತ್ರ ಹರ್ಮನ್ ಪ್ರೀತ್ ಸಿಂಗ್ ಕಣಕ್ಕಿಳಿಯಲಿದ್ದಾರೆ. ಅವರ ಉಪ ನಾಯಕ ಸ್ಮೃತಿ ಚೀನಾದಲ್ಲಿ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ.