Site icon Vistara News

BCCI: ಮಾಧ್ಯಮ ಹಕ್ಕುಗಳ ಟೆಂಡರ್ ಬಿಡುಗಡೆ ಮಾಡಿದ ಬಿಸಿಸಿಐ

BCCI

BCCI releases media rights tender for bilateral India games

ಮುಂಬಯಿ: ಭಾರತ ಕ್ರಿಕೆಟ್ ತಂಡದ ಮುಂಬರುವ ದ್ವಿಪಕ್ಷೀಯ ಪಂದ್ಯಗಳ ಮಾಧ್ಯಮ ಹಕ್ಕುಗಳ(Media Rights) ವಿತರಣೆಗಾಗಿ ಬಿಸಿಸಿಐ ಟೆಂಡರ್ ಕರೆಯಲು ಮುಂದಾಗಿದೆ. ಭಾರತ ತಂಡದ ಅಂತಾರಾಷ್ಟ್ರೀಯ(international matches) ಮತ್ತು ದೇಶೀಯ(domestic matches) ಪಂದ್ಯಗಳ ಮಾಧ್ಯಮ ಹಕ್ಕುಗಳಿಗಾಗಿ ಅರ್ಜಿದಾರರು ಬಿಡ್ ಸಲ್ಲಿಸಬಹುದಾಗಿದೆ.

ಬುಧವಾರ ಬಿಸಿಸಿಐ ಪ್ರಕಟಿಸಿರುವ ತನ್ನ ಪ್ರಕಟಣೆಯಲ್ಲಿ ಬಿಡ್ಡಿಂಗ್​ ಪ್ರಕ್ರಿಯೆಗಳ ಎಲ್ಲ ನಿಯಮವನ್ನು ಮತ್ತು ಯಾವ ಷರತ್ತುಗಳು ಇರಲಿವೆ ಎಂದು ತಿಳಿಸಿದೆ. ಮರುಪಾವತಿಸಲಾಗದ ಶುಲ್ಕ 15 ಲಕ್ಷ ರೂಪಾಯಿಗೆ ಟೆಂಡರ್‌ನ ಅರ್ಜಿಗಳನ್ನು ಪಡೆಯಬಹುದು. ಆಗಸ್ಟ್ 25ರವರೆಗೆ ಆಹ್ವಾನ ಅರ್ಜಿ ಖರೀದಿಸಲು ಅವಕಾಶವಿದೆ.

“ಟೆಂಡರ್ ಪ್ರಕ್ರಿಯೆ, ಅರ್ಹತಾ ಅವಶ್ಯಕತೆಗಳು, ಬಿಡ್‌ಗಳ ಸಲ್ಲಿಕೆ, ಹಕ್ಕುಗಳು ಮತ್ತು ಕಟ್ಟುಪಾಡುಗಳು ಇತ್ಯಾದಿಗಳನ್ನು ಟೆಂಡರ್‌ಗೆ ಅರ್ಜಿ ಆಹ್ವಾನ (ITT) ನಲ್ಲಿ ವಿವರಿಸಲಾಗಿದೆ. ಅರ್ಜಿಯನ್ನು ಮರುಪಾವತಿಸಲಾಗದ 15 ಲಕ್ಷ ರೂ. ಪಾವತಿಸಿದ ಬಳಿಕವೇ ಒದಗಿಸಲಾಗುತ್ತದೆ. ಇದಲ್ಲದೆ ಅನ್ವಯವಾಗುವ ಸರಕು ಮತ್ತು ಸೇವಾ ತೆರಿಗೆಯೂ (ಜಿಎಸ್‌ಟಿ) ಒಳಗೊಂಡಿರುತ್ತದೆ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ BCCI: ವಿಶ್ವಕಪ್​ ಪಂದ್ಯ ಆಯೋಜನೆ ಕೈತಪ್ಪಿದ ಸ್ಟೇಡಿಯಂಗಳಿಗೆ ಬಿಗ್ ಆಫರ್​ ಘೋಷಿಸಿದ ಬಿಸಿಸಿಐ

ಬಿಡ್ ಸಲ್ಲಿಸಲು ಬಯಸುವ ಯಾವುದೇ ಆಸಕ್ತ ಮಾಧ್ಯಮಗಳು ITT(Invitation To Tender)ಯಲ್ಲಿ ವಿವರಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸುವವರು ಮತ್ತು ಅದರಲ್ಲಿರುವ ಇತರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟವರಾಗಿರಬೇಕು. ಈ ಎಲ್ಲ ಅರ್ಹತೆ ಇದ್ದರೆ ಮಾತ್ರ ಬಿಡ್​ ಸಲ್ಲಿಸಬಹುದು ಎಂದು ಬಿಸಿಸಿಐ ಹೇಳಿದೆ.

ಸುಳ್ಳು ಮಾಹಿತಿ ನೀಡಿ ಟೆಂಡರ್ ಅರ್ಜಿ (ITT) ಖರೀದಿಸಿದ್ದು ಬೆಳಕಿಗೆ ಬಂದರೆ ಯಾವುದೇ ಹಂತದಲ್ಲಿ ಅಂತವರ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸುವ ಅಥವಾ ಮಾರ್ಪಡಿಸುವ ಹಕ್ಕನ್ನು ಬಿಸಿಸಿಐ ಹೊಂದಿರುತ್ತದೆ ಎಂದು ಸ್ಪಷ್ಟವಾಗಿ ಬಿಸಿಸಿಐ ತಿಳಿಸಿದೆ. ಹೀಗಾಗಿ ಬಿಡ್​ ಸಲ್ಲಿಸುವವರು ಎಲ್ಲ ದಾಖಲೆಯನ್ನು ಪರಿಶೀಲಿಸಿ ಬಿಡ್​ ಸಲ್ಲಿಸಿದರೆ ಒಳಿತು. ಇಲ್ಲವಾದಲ್ಲಿ 15 ಲಕ್ಷ ರೂ. ನಷ್ಟವಾಗಬಹುದು.

ಈ ಹಿಂದೆ ಬಿಸಿಸಿಐ ಡಿಸ್ನಿ ಸ್ಟಾರ್‌ನೊಂದಿಗೆ ಮಾಧ್ಯಮ ಹಕ್ಕುಗಳ ಒಪ್ಪಂದ ಮಾಡಿಕೊಂಡಿತ್ತು. ಇದು ಇದೇ ವರ್ಷ ಮಾರ್ಚ್ನಲ್ಲಿ ಕೊನೆಗೊಂಡಿದೆ. ಡಿಸ್ನಿ ಸ್ಟಾರ್‌ ಸಂಸ್ಥೆ ಮಾಧ್ಯಮ ಹಕ್ಕುಗಳನ್ನು 6138.10 ಕೋಟಿ ರೂ.ಗೆ ಪಡೆದುಕೊಂಡಿತ್ತು. ಎಲ್ಲ ಸ್ವರೂಪಗಳ ಪ್ರತಿ ಅಂತಾರಾಷ್ಟ್ರೀಯ ಪಂದ್ಯಕ್ಕೆ 61 ಕೋಟಿ ರೂ.ಪಾವತಿಸಿದೆ. ಈ ಬಾರಿ ಟೆಂಡರ್‌ನ ಹಕ್ಕುಗಳು ಇನ್ನೂ ಏರಿಕೆಯಾಗುವ ನಿರೀಕ್ಷೆಯಿದೆ.

Exit mobile version