Site icon Vistara News

BCCI: ಚೇತನ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಗೇಟ್​ಪಾಸ್​ ನೀಡಿದ ಬಿಸಿಸಿಐ!

BCCI Scraps Selection Committee Led By Chetan Sharma

ನವದೆಹಲಿ: ದುಬೈ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಎರಡು ಐಸಿಸಿ ಟಿ20 ವಿಶ್ವ ಕಪ್‌ ಕ್ರಿಕೆಟ್​ ಟೂರ್ನಿಗಳಲ್ಲಿ ಭಾರತ ತಂಡ ಟ್ರೋಫಿ ಗೆಲ್ಲಲು ವಿಫಲವಾದ ಬೆನ್ನಲ್ಲೇ ಕಠಿಣ ನಿರ್ಧಾರ ತೆಗೆದುಕೊಂಡಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಮಾಜಿ ವೇಗಿ ಚೇತನ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ. ಅದರಂತೆ ಬಿಸಿಸಿಐ ಈಗಾಗಗಲೇ ಹೊಸ ಆಯ್ಕೆ ಸಮಿತಿ ರಚಿಸುವ ಸಲುವಾಗಿ ಖಾಲಿ ಇರುವ 5 ಹುದ್ದೆಗಳಿಗೆ ಅರ್ಜಿ ಕೂಡ ಆಹ್ವಾನಿಸಿದೆ.

ಚೇತನ್‌ ಶರ್ಮಾ ಸಾರಥ್ಯದ ಆಯ್ಕೆ ಸಮಿತಿಯಲ್ಲಿ ಸುನಿಲ್‌ ಜೋಶಿ, ಹವಿಂದರ್‌ ಸಿಂಗ್‌ ಮತ್ತು ದೇಬಾಶಿಶ್‌ ಮೊಹಾಂತಿ ಅವರಂತಹ ಮಾಜಿ ಆಟಗಾರರು ಇದ್ದರು. ಇದೀಗ ಹೊಸ ಆಯ್ಕೆ ಸಮಿತಿಗೆ ಸೇರಬಯಸುವ ಆಸಕ್ತರು ನವೆಂಬರ್‌ 28ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದೆ.

ಚೇತನ್​ ಶರ್ಮಾ ಆಯ್ಕೆ ಸಮಿತಿಯ ಅವಧಿಯಲ್ಲಿ ಆಡಲಾದ 2021ರ ಐಸಿಸಿ ಟಿ20 ಕ್ರಿಕೆಟ್‌ ವಿಶ್ವ ಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೂಪರ್‌-12 ಹಂತದಲ್ಲೇ ಮುಗ್ಗರಿಸಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2022ರ ಸಾಲಿನ ಟಿ20 ವಿಶ್ವ ಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿಯೂ ಹೀನಾಯವಾಗಿ ಸೋತು ನಿರಾಸೆ ಮೂಡಿಸಿತ್ತು. ಜತೆಗೆ ಇವರ ಆಯ್ಕೆ ಸಮಿತಿಯಲ್ಲಿ ಭಾರತ ತಂಡ ಒಂದೂ ಐಸಿಸಿ ಟ್ರೋಫಿಯನ್ನು ಗೆಲ್ಲವಲ್ಲಿ ಯಶಸ್ವಿಯಾಗಿರಲಿಲ್ಲ. ಇದರಿಂದ ಬಿಸಿಸಿಐ ಈ ಆಯ್ಕೆ ಸಮಿತಿಗೆ ಗೇಟ್​ಪಾಸ್​ ನೀಡಿದೆ.

ಚೇತನ್​ ಶರ್ಮಾ ಭಾರತ ಪರ ಒಟ್ಟು 23 ಟೆಸ್ಟ್​ ಮತ್ತು 65 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ನಲ್ಲಿ (61), ಏಕದಿನದಲ್ಲಿ(67) ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ | IND VS NZ | ಕಿವೀಸ್​​ ವಿರುದ್ಧದ ಮೊದಲ ಟಿ20 ಮಳೆಯಿಂದ ರದ್ದು; ಭಾರತದ ಯುವ ಆಟಗಾರರಿಗೆ ನಿರಾಸೆ

Exit mobile version