ನವ ದೆಹಲಿ: ವಿಶ್ವಕಪ್ 2023 ರ ಸಮಯದಲ್ಲಿ ಬೆಟ್ಟಿಂಗ್ ಸೈಟ್ಗಳಿಗೆ ಜಾಹೀರಾತು ಅವಕಾಶ ನೀಡುವುದರ ವಿರುದ್ಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಜಾಗತಿಕ ಈವೆಂಟ್ ಸುತ್ತಲೂ ಬೆಟ್ಟಿಂಗ್ ಮತ್ತು ಜೂಜಾಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಾರತ ಸರ್ಕಾರ ಎಚ್ಚರಿಕೆ ವಹಿಸಲು ಸಲಹೆ ನೀಡಿದೆ. ಹಾಗೆ ಮಾಡಲು ವಿಫಲವಾದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಯಾವುದೇ ರೂಪದಲ್ಲಿ ಬೆಟ್ಟಿಂಗ್ ಅಥವಾ ಜೂಜಾಟದ ಬಗ್ಗೆ ಜಾಹೀರಾತುಗಳು ಮತ್ತು ಪ್ರಚಾರ ವಿಷಯವನ್ನು ತೋರಿಸದಂತೆ ಮಾಧ್ಯಮ ಘಟಕಗಳು, ಆನ್ಲೈನ್ ಜಾಹೀರಾತು ಏಜೆನ್ಸಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಸೇರಿದಂತೆ ಎಲ್ಲಾ ಏಜೆನ್ಸಿಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ ಖಡಕ್ ಎಚ್ಚರಿಕೆ ನೀಡಿದೆ.
ಈ ಹೇಳಿಕೆಯಿಂದಾಗಿ ಫ್ಯಾಂಟಸಿ ಗೇಮ್ ಪ್ಲಾಟ್ ಫಾರ್ಮ್ಗಳಿಗೆ ಯಾವುದೇ ಅಡಚಣೆ ಇಲ್ಲ ಎನ್ನಲಾಗಿದೆ. ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರಾಗಿ ಡ್ರೀಮ್ 11 ಕಾಣಿಸಿಕೊಂಡಿದೆ. ಇದೇ ಮಾದರಿಯ ಸಂಸ್ಥೆಗಳು ಕಾಣಿಸಿಕೊಳ್ಳಲಿವೆ ಎಂದು ಹೇಳಲಾಗಿದೆ. ಹೀಗಾಗಿ ಇತರ ಫ್ಯಾಂಟಸಿ ಫ್ಲ್ಯಾಟ್ಫಾರ್ಮ್ಗಳು ಪಂದ್ಯಾವಳಿಯ ಸಮಯದಲ್ಲಿ ತಮ್ಮ ಬ್ರಾಂಡ್ ಮತ್ತು ಉತ್ಪನ್ನವನ್ನು ಜಾಹೀರಾತು ಮಾಡುವುದು ಸ್ಪಷ್ಟ. ಆದರೆ, ಜೂಜಾಟ ಮತ್ತು ಬೆಟ್ಟಿಂಗ್ ಅನ್ನು ಉತ್ತೇಜಿಸುವ ವೆಬ್ಗಳಿಗೆ ನಿಯಂತ್ರಣವಿರುತ್ತದೆ.
ಬೆಟ್ಟಿಂಗ್ ಜಾಹೀರಾತುಗಳಿಗೆ ಪಾವತಿಸಲು ಸಾಕಷ್ಟು ‘ಕಪ್ಪು ಹಣ’ವನ್ನು ಬಳಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ . ಐಪಿಎಲ್ 2023 ರ ಸಮಯದಲ್ಲಿ ಇದೇ ರೀತಿಯ ಹೇಳಿಕೆಯನ್ನು ನೀಡಿತ್ತು. ಹೀಗಾಗಿ ಇದು ಹೊಸದೇನಲ್ಲ ಎನ್ನಲಾಗಿದೆ. ಬೆಟ್ಟಿಂಗ್ ಮತ್ತು ಜೂಜಾಟವು ಕಾನೂನುಬಾಹಿರ ಚಟುವಟಿಕೆಯಾಗಿದೆ ಮತ್ತು ಆದ್ದರಿಂದ ಅದರ ಜಾಹೀರಾತುಗಳು ಅಥವಾ ಪ್ರಚಾರವು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಆರೋಪವಾಗಿದೆ.
2023ರ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಇಡೀ ಪಂದ್ಯಾವಳಿಯನ್ನು ಪ್ರಸಾರ ಮಾಡಲಿದೆ. ಬಿಸಿಸಿಐ ಮತ್ತು ಡಿಸ್ನಿ ಸ್ಟಾರ್ ಎರಡೂ ಕೇಂದ್ರ ಸರಕಾರದ ಆದೇಶದಂತೆಯೇ ಕೆಲಸ ಮಾಡಬೇಕಾಗಿರುವ ಕಾರಣ ವಿಷಯ ಚರ್ಚೆಗೆ ಆಸ್ಪದ ಕೊಡಲಿದೆ.
5 ಆಟಗಾರರನ್ನು ಹೊರತುಪಡಿಸಿ ಉಳಿದೆಲ್ಲರೂ ಪಾಸ್; ಕೊಹ್ಲಿಯನ್ನು ಮೀರಿಸಿದ ಯುವ ಬ್ಯಾಟರ್
ಬೆಂಗಳೂರು: ಏಷ್ಯಾಕಪ್ಗೆ(Asia Cup 2023) ಆಯ್ಕೆಯಾದ ಟೀಮ್ ಇಂಡಿಯಾದ ಆಟಗಾರರು ಬೆಂಗಳೂರಿನ ಆಲೂರಿನಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಬುಧವಾರದಿಂದ ಈ ಶಿಬಿರ ಆರಂಭವಾಗಿದೆ. ಈ ಶಿಬಿರದಲ್ಲಿ ಎಲ್ಲ ಆಟಗಾರರು ಯೋ-ಯೋ ಟೆಸ್ಟ್(Yo-Yo Test) ಮತ್ತು ಡೆಕ್ಸಾ ಪರೀಕ್ಷೆಗೆ(Dexa scan) ಒಳಪಟ್ಟಿದ್ದಾರೆ. ಸದ್ಯದ ಪಿಟಿಐ(PTI) ಮಾಹಿತಿ ಪ್ರಕಾರ 17 ಆಟಗಾರರ ಪೈಕಿ ಯದು ಆಟಗಾರರು ಈ ಟೆಸ್ಟ್ಗೆ ಒಳಪಟ್ಟಿಲ್ಲ ಎಂದು ವರದಿಯಾಗಿದೆ.
ಕೊಹ್ಲಿಯನ್ನು ಮೀರಿಸಿದ ಗಿಲ್
ಕ್ರಿಕೆಟ್ ಲೋಕದ ಮಿಸ್ಟರ್ ಪರ್ಫೆಕ್ಟ್, ಫಿಟ್ನೆಸ್ ಮಾಸ್ಟರ್ ಎಂದು ಕರೆಸಿಕೊಳ್ಳುವ ವಿರಾಟ್ ಕೊಹ್ಲಿಯೂ(virat kohli) ಹಲವು ವರ್ಷಗಳ ಬಳಿಕ ಯೋ-ಯೋ ಟೆಸ್ಟ್ಗೆ ಒಳಪಟ್ಟಿದ್ದರು. ಅವರು ಈ ಟೆಸ್ಟ್ನಲ್ಲಿ 17.2 ಅಂಕದೊಂದಿಗೆ ತೇರ್ಗಡೆಯಾದರೂ ಅವರನ್ನು ಶುಭಮನ್ ಗಿಲ್(shubman gill) ಮೀರಿಸಿದ್ದಾರೆ. ಭಾರತದ ಭರವಸೆಯ ಆಟಗಾರ ಎಂದು ಕರೆಸಿಕೊಳ್ಳುವ ಗಿಲ್ ಅವರು ಈ ಟೆಸ್ಟ್ನಲ್ಲಿ 18.7 ಸ್ಕೋರ್ ಮಾಡುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ವರದಿ ಹೇಳಿದೆ. ನಾಯಕ ರೋಹಿತ್ ಶರ್ಮ, ಉಪನಾಯಕ ಹಾರ್ದಿಕ್ ಪಾಂಡ್ಯ ಸೇರಿ ಉಳಿದ ಆಟಗಾರರು 16.5 ರಿಂದ 17ರ ಮಧ್ಯೆ ಅಂಕಗಳಿಸಿ ಪಾಸ್ ಆಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
5 ಆಟಗಾರರು ಭಾಗಿಯಾಗಿಲ್ಲ
17 ಮಂದಿ ಆಟಗಾರರ ಪೈಕಿ ಗಾಯದಿಂದ ಚೇತರಿಕೆ ಕಂಡಿರುವ ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಐರ್ಲೆಂಡ್ ಟಿ20 ಸರಣಿ ಮುಗಿಸಿ ಬಂದ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಯೋ-ಯೋ ಟೆಸ್ಟ್ನಲ್ಲಿ ಪಾಲ್ಗೊಂಡಿಲ್ಲ ಎಂದು ವರದಿ ತಿಳಿಸಿದೆ. ಕ್ರಿಕ್ಇನ್ಫೊ ವರದಿಯ ಪ್ರಕಾರ ಈ ಆಟಗಾರರು ಈಗಾಗಲೇ ಈ ಟೆಸ್ಟ್ಗೆ ಒಳಪಟ್ಟು ತಮ್ಮ ಫಿಟ್ನೆಸ್ ಸಾಬೀತುಪಡಿಸಿದ ಬಳಿಕವೇ ಐರ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದು, ಹೀಗಾಗಿ ಅವರಿಗೆ ಮತ್ತೆ ಈ ಟೆಸ್ಟ್ನ ಅಗತ್ಯವಿಲ್ಲ ಎಂದು ತಿಳಿಸಿದೆ. ಆದರೆ ಪಿಟಿಐ ವರದಿಯಲ್ಲಿ ಈ ಎಲ್ಲ ಆಟಗಾರರನ್ನು ಕೂಡ ಸೋಮವಾರದ ಒಳಗಡೆ ಟೆಸ್ಟ್ಗೆ ಕಡ್ಡಾಯವಾಗಿ ಒಳಪಡಿಸಲಾಗುತ್ತದೆ ಎಂದು ತಿಳಿಸಿದೆ. ಒಟ್ಟಾರೆ ಬಿಸಿಸಿಐ ಏಕದಿನ ವಿಶ್ವಕಪ್ ನಿಟ್ಟಿನಲ್ಲಿ ಎಲ್ಲ ಆಟಗಾರರ ಫಿಟ್ನೆಸ್ ಮೇಲೆ ಈ ಬಾರಿ ಹದ್ದಿನ ಕಣ್ಣಿಟ್ಟಿದೆ.