Site icon Vistara News

IND vs ENG: 3ನೇ ಟೆಸ್ಟ್​ಗೆ​ ನಾಳೆ ಭಾರತ ತಂಡ ಪ್ರಕಟ ಸಾಧ್ಯತೆ; ಕೊಹ್ಲಿ ಆಗಮನ ಅನುಮಾನ!

Virat Kohli

ಮುಂಬಯಿ: ಗಾಯಗೊಂಡಿರುವ ಕೆ.ಎಲ್ ರಾಹುಲ್(KL Rahul) ಮತ್ತು ರವೀಂದ್ರ ಜಡೇಜಾ(Ravindra Jadeja) ಇಂಗ್ಲೆಂಡ್(IND vs ENG) ವಿರುದ್ಧದ ಎರಡನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಇವರ ಸ್ಥಾನಕ್ಕೆ ಬದಲಿ ಆಟಗಾರ ಆಯ್ಕೆಯಾಗಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಆಯ್ಕೆ ಸಮಿತಿ ಉಳಿದ ಮೂರು ಟೆಸ್ಟ್‌ ಪಂದ್ಯಕ್ಕೆ ತಂಡವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.

ಆಯ್ಕೆ ಸಮಿತಿಯು ಇಂದು (ಜನವರಿ 30) ಟೆಸ್ಟ್ ನಿಯೋಜನೆಯ ಉಳಿದ ಪಂದ್ಯಗಳ ಆಯ್ಕೆಯ ಕುರಿತು ಔಪಚಾರಿಕ ಸಭೆಯನ್ನು ನಡೆಸುವ ಸಾಧ್ಯತೆಯಿದೆ. ತಂಡವು ಬಹುತೇಕ ಒಂದೇ ಆಗಿರುವ ಸಾಧ್ಯತೆಯಿದ್ದರೂ ವಿರಾಟ್ ಕೊಹ್ಲಿ ಮರಳುವ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ. ವೈಯಕ್ತಿಕ ಕಾರಣದಿಂದ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಂದ ಹಿಂದೆ ಸರಿದಿದ್ದರು.

ಕೊಹ್ಲಿ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದರೂ ಕೂಡ ಅವರ ವಾಪಸಾತಿ ಕುರಿತು ಇನ್ನೂ ಯಾವುದೇ ಮಾಹಿತಿ ನಿಡಿಲ್ಲ. ಹೀಗಾಗಿ ಕೊಹ್ಲಿ ಉಳಿದ ಟೆಸ್ಟ್​ ಪಂದ್ಯಗಳಿಗೆ ಲಭ್ಯರಿದ್ದಾರಾ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಕೆ.ಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಗಾಯಗೊಂಡ ಕಾರಣ ವಿಶಾಖಪಟ್ಟಣಂನಲ್ಲಿ ನಡೆಯುವ ಎರಡನೇ ಪಂದ್ಯಕ್ಕಾಗಿ ಬಿಸಿಸಿಐ ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿದೆ. ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ಆಡುವ ಬಳಗದಲ್ಲಿ ಅವಕಾಶ ಪಡೆಯಬಹುದು.

ಇದನ್ನೂ ಓದಿ Virat Kohli: ಕೊಹ್ಲಿ ನನ್ನ ಮೇಲೆ ಉಗುಳಿದ್ದರು; ಗಂಭೀರ ಆರೋಪ ಮಾಡಿದ ಡೀನ್​ ಎಲ್ಗರ್​

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ 4 ನೇ ದಿನದ ಆಟದಲ್ಲಿ ಜಡೇಜಾ ಮಂಡಿರಜ್ಜು ಗಾಯಕ್ಕೊಳಗಾಗಿದ್ದರು, ರಾಹುಲ್ ಬಲ ತೊಡೆಯ ನೋವಿಗೊಳಗಾಗಿದ್ದರು.

ಕೆ.ಎಲ್​ ರಾಹುಲ್ ಅವರ ಗಾಯವು ಗಂಭೀರವಾಗಿಲ್ಲದಿದ್ದರೂ, ಜಡೇಜಾ ಹೆಚ್ಚು ಕಾಲ ಹೊರಗುಳಿಯಬಹುದು ಎಂದು ವರದಿಗಳು ಹೇಳಿದೆ. ಕುಲದೀಪ್ ಯಾದವ್ ಬೆಂಚ್ ಮೇಲೆ ಕಾಯುತ್ತಿರುವ ಕಾರಣ, ಎರಡನೇ ಟೆಸ್ಟ್‌ಗೆ ಸ್ಪಿನ್ನರ್‌ಗಳ ಆಯ್ಕೆ ತಂಡದ ನಿರ್ವಹಣೆಗೆ ಸುಲಭವಲ್ಲ.

ವಿಶಾಖಪಟ್ಟಣದಲ್ಲಿ ಭಾರತದ ಟೆಸ್ಟ್​ ದಾಖಲೆ ಹೇಗಿದೆ?


ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಮೈದಾನದಲ್ಲಿ ಭಾರತ ತಂಡ ಇದುವರೆಗೆ 2 ಟೆಸ್ಟ್​ ಪಂದ್ಯಗಳನ್ನು ಮಾತ್ರ ಆಡಿದೆ. ಎದುರಾಳಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​. ಈ 2 ಪಂದ್ಯಗಳನ್ನು ಭಾರತ ಬೃಹತ್​ ಮೊತ್ತದ ಅಂತರದಿಂದ ಗೆದ್ದು ಬೀಗಿದೆ. ಇದೀಗ ಮತ್ತೆ ಇಂಗ್ಲೆಂಡ್​ ವಿರುದ್ಧ ಇಲ್ಲಿ 2ನೇ ಬಾರಿ ಮುಖಾಮುಖಿಯಾಗಲಿದೆ. ಹೈದರಾಬಾದ್​ನಲ್ಲಿ ಅಜೇಯ ದಾಖಲೆ ಹೊಂದಿದ್ದ ಭಾರತಕ್ಕೆ ಸೋಲಿನ ಶಾಕ್​ ನೀಡಿದ್ದ ಇಂಗ್ಲೆಂಡ್​ ಇದೀಗ ಈ ಸ್ಟೇಡುಯಂನಲ್ಲಿಯೂ ಇದೇ ಫಲಿತಾಂಶವನ್ನು ಪುನರಾವರ್ತಿಸುವ ಭರವಸೆಯಲ್ಲಿದೆ.

ದ್ವಿತೀಯ ಟೆಸ್ಟ್​ಗೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್​ ಕೀಪರ್​), ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ವಿಸಿ), ಅವೇಶ್ ಖಾನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.

Exit mobile version