Site icon Vistara News

Team India : ಟೆಸ್ಟ್​ ತಂಡಕ್ಕೆ ಹಾರ್ದಿಕ್ ಪಾಂಡ್ಯ ರಿಎಂಟ್ರಿ? ಟೀಮ್​ ಇಂಡಿಯಾ ರಚನೆಗೆ ಸರ್ಕಸ್​ ಶುರು!

Hardik Pandya

#image_title

ಮುಂಬಯಿ: ಭಾರತ ಕ್ರಿಕೆಟ್ (Team India) ತಂಡದ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​​ ಚಕ್ರವು ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಪ್ರಾರಂಭವಾಗಲಿದೆ. ಮತ್ತೊಂದು ಡಬ್ಲ್ಯುಟಿಸಿ ಫೈನಲ್ ಸೋಲಿನ ನಂತರ ಈಗ ಟೆಸ್ಟ್ ತಂಡದ ಸುಧಾರಣೆ ಮೇಲೆ ಗಮನ ಹರಿಸಿದೆ ಬಿಸಿಸಿಐ. ಹೊಸ ಮುಖಗಳಿಗೆ ಅವಕಾಶ ನೀಡಿ ಹಿರಿಯರನ್ನು ಹಂತಹಂತವಾಗಿ ಕೈಬಿಡುವುದೇ ಯೋಜನೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರಲಿದ್ದಾರೆ. ಆದರೆ, ಟೆಸ್ಟ್ ತಂಡಕ್ಕೆ ಹಾರ್ದಿಕ್ ಪಾಂಡ್ಯಗೆ ಮರಳುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚರ್ಚಿಸಲಿದೆ ಎನ್ನಲಾಗಿದೆ. ಮುಂದಿನ ವಾರ ತಂಡ ಘೋಷಣೆಯಾಗಲಿದೆ

ಬೆನ್ನುನೋವಿನ ಸಮಸ್ಯೆಗಅಗಿ ಆಲ್​ರೌಂಡರ್​ ಟೆಸ್ಟ್ ಕ್ರಿಕೆಟ್​ನಿಂದ ಮುಕ್ತಿ ಪಡೆದುಕೊಂಡಿದ್ದರು. ದೀರ್ಘ ಸ್ಪೆಲ್​​ಗಳನ್ನು ನಿರ್ವಹಿಸಲು ಕಷ್ಟ ಎಂಬುದೇ ಅವರ ಟೆಸ್ಟ್ ಕರ್ತವ್ಯದಿಂದ ಮುಕ್ತಿ ಪಡೆಯಲು ಕಾರಣ. ಸರ್ಜರಿ ಎಲ್ಲ ಮುಗಿದು ಅವರೀಗ ಫಿಟ್​ ಆಗಿದ್ದಾರೆ. ಹೀಗಾಗಿ ತಂಡಕ್ಕೆ ಮರಳುವರೆಂಬ ಸುದ್ದಿ ಸೃಷ್ಟಿಯಾಗಿದೆ. ಹಾರ್ದಿಕ್ ಕೊನೆಯ ಬಾರಿಗೆ 2018ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಟೆಸ್ಟ್​ನಲ್ಲಿ ಆಡಿದ್ದರು.

ಇದನ್ನೂ ಓದಿ : IPL 2023 : ಡಕ್​ಔಟ್​ ಆಗುವ ಮೂಲಕ ಅನಗತ್ಯ ದಾಖಲೆ ಸೃಷ್ಟಿಸಿಕೊಂಡ ರೋಹಿತ್ ಶರ್ಮಾ

ಹಾರ್ದಿಕ್ ಖಂಡಿತವಾಗಿಯೂ ಒಂದು ಆಯ್ಕೆ. ಆದರೆ ಟೆಸ್ಟ್ ಮರಳುವ ಬಗ್ಗೆ ಸ್ವತಃ ಹಾರ್ದಿಕ್ ಅವರೇ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಆಯ್ಕೆದಾರರು ಅವರನ್ನು ಮತ್ತೆ ದೀರ್ಘ ಅವಧಿಯ ಕ್ರಿಕೆಟ್​​ನಲ್ಲಿ ನೋಡಲು ಉತ್ಸುಕರಾಗಿದ್ದಾರೆ. ಆದರೆ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುವ ಸ್ಥಿತಿಯಲ್ಲಿದ್ದಾರೆಯೇ ಎಂಬುದು ಮೂಲ ಪ್ರಶ್ನೆಯಾಗಿದೆ. ಅವರು ಸೀಮಿತ ಓವರ್​​ಗಳ ಪಂದ್ಯಗಳಲ್ಲಿ ಪ್ರಮುಖ ಆಟಗಾರ ಎಂದು ಪರಿಗಣಿಸಲಾಗುತ್ತಿದೆ. ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಕ್ರೀಡಾ ವೆಬ್​ಸೈಟ್​​ಗೆ ತಿಳಿಸಿದ್ದಾರೆ.

ಮುಂದಿನ ವಾರ ಆಯ್ಕೆಗಾರರ ಸಭೆ

ಶಿವ್ ಸುಂದರ್ ದಾಸ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಮುಂದಿನ ವಾರ ಸಭೆ ಸೇರುವ ಮೊದಲು, ಆಯ್ಕೆದಾರರು ಮತ್ತು ಬಿಸಿಸಿಐ ಹಾರ್ದಿಕ್ ಪಾಂಡ್ಯ ಅವರಿಗೆ ಕರೆ ಮಾಡುವ ಸಾಧ್ಯತೆಗಳಿವೆ. ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೂ ಮುನ್ನ ಟೆಸ್ಟ್​ಗೆ ಮರಳಬೇಕಾಗಿ ಬಂದರೆ ಕಠಿಣ ಸವಾಲು ಎದುರಿಸಬೇಕಾಗುತ್ತದೆ ಎಂದು ಹಾರ್ದಿಕ್ ಪಾಂಡ್ಯ. ಹೇಳಿದ್ದರು. ನಾನು ಟೆಸ್ಟ್ ಕ್ರಿಕೆಟ್ ಆಡಬೇಕೆಂದರೆ ಖಂಡಿತವಾಗಿಯೂ ಬರುತ್ತೇನೆ ಎಂದು ಅವರು ಹೇಳಿದ್ದರು.

ಪೂಜಾರಗೆ ಕೊಕ್​

ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ್​ ಅವರಿಗೆ ಅವರ ಫಾರ್ಮ್ ಕ್ಷೀಣಿಸುತ್ತಿದ್ದರೂ ಆಯ್ಕೆದಾರರು ಮತ್ತು ತಂಡದ ಆಡಳಿತವು ಅವರನ್ನು ಬೆಂಬಲಿಸುತ್ತಿದೆ. 35ರ ಹರೆಯದ ಪೂಜಾರ 2025ರ ಡಬ್ಲ್ಯುಟಿಸಿ ಫೈನಲ್ ವರೆಗೂ ಮುಂದುವರಿಯಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಶ್ರೇಯಸ್ ಅಯ್ಯರ್ ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಮತ್ತು ಟೀಮ್ ಇಂಡಿಯಾಗೆ ಮತ್ತೊಂದು ಆಯ್ಕೆಯ ಅಗತ್ಯವಿದೆ.

ದೇಶೀಯ ಕ್ರಿಕೆಟ್​ನಲ್ಲಿ ಶತಕಗಳನ್ನು ಗಳಿಸಿದರೂ ಸರ್ಫರಾಜ್ ಖಾನ್ ಗೆ ಅವಕಾಶವೇ ಸಿಕ್ಕಿರಲಿಲ್ಲ. ಈ ಬಾರಿ ಕರೆ ಹೋಗಬಹುದು ಎಂದು ನಿರೀಕ್ಷಿಸಲಾಗಿದೆ. ಪೂಜಾರ ಕಳೆದ 12 ತಿಂಗಳಲ್ಲಿ 40.16 ಸರಾಸರಿಯನ್ನು ಹೊಂದಿದ್ದಾರೆ. ಇದರಲ್ಲಿ ಕಳೆದ 14 ಇನಿಂಗ್ಸ್​​ಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

ತಂಡ ಯಾವ ರೀತಿ ಇರಬಹುದು?

Exit mobile version