ಇಂದೋರ್ : ಭಾರತ ಹಾಗೂ ಆಸ್ಟ್ರೇಲಿಯಾ (INDvsAUS) ತಂಡಗಳ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ನಡೆದ ಇಂದೋರ್ ಪಿಚ್ ಕಳಪೆ ಎಂದು ಐಸಿಸಿ ಘೋಷಣೆ ಮಾಡಿರುವುದು ಬಿಸಿಸಿಐಗೆ ಅಸಮಾಧಾನ ತಂದಿದೆ. ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರ ನಿರ್ಧಾರ ಸರಿಯಿಲ್ಲ ಎಂದು ಹೇಳಿರುವ ಬಿಸಿಸಿಐ ಅದರ ವಿರುದ್ಧ ಮೇಲ್ಮನವಿ ಹೋಗಲು ನಿರ್ಧರಿಸಿದೆ. ಈ ಪಿಚ್ಗೆ ಮ್ಯಾಚ್ ರೆಫರಿ ಮೂರು ಡಿಮೆರಿಟ್ ಅಂಕಗಳನ್ನೂ ವಿಧಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಬೇಸರ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಇಂದೋರ್ನಲ್ಲಿ ನಡೆದ ಮೂರನೇ ಪಂದ್ಯ ಎರಡು ದಿನ ಹಾಗೂ ಒಂದು ಸೆಷನ್ನಲ್ಲಿ ಮುಕ್ತಾಯಗೊಂಡಿತ್ತು. ಹೀಗಾಗಿ ಪಿಚ್ ಬಗ್ಗೆ ಚರ್ಚೆ ಶುರುವಾಗಿತ್ತು. ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೆ ಮಿತಿ ಮೀರಿ ಟರ್ನ್ ಪಡೆಯುವ ಪಿಚ್ಗಳನ್ನು ಬಳಸಲಾಗುತ್ತದೆ ಎಂದು ಆರೋಪಗಳು ಕೇಳಿಬಂದವು. ಐಸಿಸಿ ಕೂಡ ಈ ಬಗ್ಗೆ ಮ್ಯಾಚ್ ರೆಫರಿಯ ವರದಿ ಆಧರಿಸಿ ಡಿಮೆರಿಟ್ ಪಾಯಿಂಟ್ಗಳನ್ನು ನೀಡಿತ್ತು.
ಇದನ್ನೂ ಓದಿ : IND VS AUS: ಇಂದೋರ್ ಪಿಚ್ಗೆ ಕಳಪೆ ರೇಟಿಂಗ್ಸ್ ಕೊಟ್ಟ ಐಸಿಸಿ
ಬಿಸಿಸಿಐ ಪ್ರಕಾರ ಇಂದೋರ್ ಪಿಚ್ ಅಪಾಯಕಾರಿಯಾಗಿರಲಿಲ್ಲ. ಬ್ಯಾಟ್ ಮಾಡವುದು ಅಸಾಧ್ಯವಾಗಿದ್ದರೂ ಬ್ಯಾಟ್ಸ್ಮನ್ಗಳಿಗೆ ಅಪಾಯ ಒಡ್ಡುತ್ತಿರಲಿಲ್ಲ. ಹೀಗಾಗಿ ಮೂರು ಡಿಮೆರಿಟ್ ಅಂಕಗಳನ್ನು ನೀಡಿದ್ದು ಸರಿಯಲ್ಲ. ಡಿಮೆರಿಟ್ ಅಂಕಗಳು ಭವಿಷ್ಯದಲ್ಲಿ ಬಿಸಿಸಿಐಗೆ ಸಮಸ್ಯೆ ಉಂಟು ಮಾಡಲಿದೆ. ಐದ ವರ್ಷಗಳ ಅವಧಿಯಲ್ಲಿ ಇನ್ನೆರಡು ಡಿಮೆರಿಟ್ ಅಂಕಗಳು ದೊರೆತರೆ ಪಿಚ್ಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸದಂತೆ ನಿಷೇಧ ಹೇರಲಿದೆ.