Site icon Vistara News

ODI World Cup : 2023ರ ಏಕದಿನ ವಿಶ್ವಕಪ್​ಗಾಗಿ ವಿಶೇಷ ಸಮಿತಿ ರಚಿಸಲಿದೆ ಬಿಸಿಸಿಐ

BCCI

ಮುಂಬಯಿ: ಮುಂಬರುವ ಏಕ ದಿನ ವಿಶ್ವ ಕಪ್​ಗೆ ಇನ್ನೂ ದಿನಾಂಕ ಪ್ರಕಟಗೊಂಡಿಲ್ಲ. ಆದರೆ, ತವರಿನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಹೇಗಾದರೂ ಮಾಡಿ ಕಪ್​ ಗೆಲ್ಲಲೇಬೇಕು ಎಂಬುದು ಬಿಸಿಸಿಐ ಯೋಜನೆಯಾಗಿದೆ. ಅದಕ್ಕಾಗಿ ಮೇ 27 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ 2023ರ ಏಕದಿನ ವಿಶ್ವಕಪ್ ಆಯೋಜನೆಗಾಗಿ ಆಂತರಿಕ ಕಾರ್ಯಪಡೆ ರಚಿಸುವ ತೀರ್ಮಾನ ಕೈಗೊಳ್ಳಲಿದೆ.

ಬಿಸಿಸಿಐ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಹಂಗಾಮಿ ಸಿಇಒ ಮತ್ತು ಇತರ ಹಿರಿಯ ಅಧಿಕಾರಿಗಳು ಏಕದಿನ ಟೂರ್ನಿಯ ಕಾರ್ಯಕಾರಿ ಸಮಿತಿಯಲ್ಲಿ ಇರಲಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಅಕ್ಟೋಬರ್​​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಆತಿಥ್ಯ ವಹಿಸುವ ಸಂಭಾವ್ಯ ಕ್ರೀಡಾಂಗಣಗಳ ಪುನರುಜ್ಜೀವನ ಕುರಿತು ಈ ಸಮಿತಿ ಚರ್ಚೆ ನಡೆಸಲಿದೆ. ಅದೇ ರೀತಿ ಪಂದ್ಯದ ಸ್ಥಳಗಳನ್ನು ಅಂತಿಮಗೊ

ಏಕದಿನ ವಿಶ್ವ ಕಪ್​ ಹತ್ತಿರದಲ್ಲಿಯೇ ಇದ್ದು ಪಂದ್ಯಗಳನ್ನು ಐಸಿಸಿ ಇನ್ನೂ ಘೋಷಿಸಿಲ್ಲ. ಇದಲ್ಲದೆ, ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತು ಖಚಿತತೆ ವ್ಯಕ್ತಪಡಿಸಿಲ್ಲ. ಏತನ್ಮಧ್ಯೆ ಬಿಸಿಸಿಐ ತನ್ನೆಲ್ಲ ಸಿದ್ಧತೆಗಳನ್ನು ಆರಂಭಿಸಿದೆ.

ಅಭಿವೃದ್ಧಿಗಾಗಿ ಡಬ್ಲ್ಯುಪಿಎಲ್ ಸಮಿತಿ ರಚನೆ

ಸಭೆಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ಗಾಗಿ ಸಮಿತಿ ರಚಿಸುವ ಕುರಿತು ಬಿಸಿಸಿಐ ಮಾತುಕತೆ ನಡೆಸಲಿದೆ. ಲೀಗ್ ಮತ್ತು ಆಟಗಾರರ ಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಮಿತಿಯನ್ನು ರಚಿಸಲಾಗುತ್ತದೆ. ದೀಪಾವಳಿಯ ಸಮಯದಲ್ಲಿ ಮಹಿಳೆಯರ ಐಪಿಎಲ್​ ನಡೆಸುವ ಯೋಜನೆ ಬಿಸಿಸಿಐ ಅಧಿಕಾರಿಗಳ ಮುಂದಿತ್ತು. ಆದರೆ, ಏಕ ದಿನ ವಿಶ್ವ ಕಪ್​ ಕಾರಣಕ್ಕೆ ಮುಂದೂಡಿಕೆಯ ಯೋಜನೆ ಮಾಡಲಾಗಿದೆ.

ಪ್ರಸಕ್ತ ಋತುವಿನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಫೆಬ್ರವರಿ ಮೂರನೇ ವಾರದವರೆಗೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಆ ಬಳಿಕ ಡಬ್ಲ್ಲುಪಿಎಲ್​ ಆರಂಭವಾಗಲಿದೆ.

ಸಭೆಯಲ್ಲಿ ಬಿಸಿಸಿಐ ತನ್ನ ಲೈಂಗಿಕ ಕಿರುಕುಳ ತಡೆ (ಪಿಎಸ್ಎಚ್) ನೀತಿಯನ್ನು ಅನುಮೋದಿಸಲಿದೆ. ಬಿಸಿಸಿಐನ ಮಾಜಿ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಮಿತಿ ತಕ್ಷಣದಲ್ಲೇ ರಚನೆಯಾಗಲಿದೆ.

Exit mobile version