Site icon Vistara News

Team India : ಭಾರತ ಕ್ರಿಕೆಟ್​ ತಂಡದ ಹೊಸ ಕಿಟ್​ ಅನಾವರಣ ಮಾಡಿದ ಬಿಸಿಸಿಐ

Team India New kit

#image_title

ಮುಂಬಯಿ: ಜೂನ್ 7ರಂದು ಇಂಗ್ಲೆಂಡ್​​ನ ಓವಲ್​ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ ಪಂದ್ಯ (WTC FInal 2023) ನಡೆಯಲಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಪ್ರಶಸ್ತಿಗಾಗಿ ಸೆಣಸಾಡಲಿದೆ. ಏತನ್ಮಧ್ಯೆ, ಐಪಿಎಲ್​​ನಿಂದ ಹೊರಕ್ಕೆ ಬಿದ್ದಿರುವ ತಂಡಗಳಲ್ಲಿದ್ದ ಟೀಮ್​ ಇಂಡಿಯಾ (Team India) ಆಟಗಾರರು ಈಗಾಗಲೇ ಇಂಗ್ಲೆಂಡ್ ತಲುಪಿ ಅಭ್ಯಾಸ ಆರಂಭಿಸಿದ್ದಾರೆ. ಮೊದಲ ಶಿಬಿರದ ವೇಳೆ ಟೀಮ್​ ಇಂಡಿಯಾ ಆಟಗಾರರು ಬಿಸಿಸಿಐನ ಹೊಸ ಕಿಟ್​ನೊಂದಿಗೆ ಕಾಣಿಸಿಕೊಂಡಿದ್ದಾರೆ. ಅದು ಅಡಿಡಾಸ್​ ಸಂಸ್ಥೆಯ ಕಿಟ್​ ಅಗಿದೆ. ಈ ಚಿತ್ರವನ್ನು ಬಿಸಿಸಿಐ (BCCI) ತನ್ನ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದೆ.

ಆಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಸೇರಿದಂತೆ ಮೊದಲ ಬ್ಯಾಚ್​​ನ ಭಾರತೀಯ ಕ್ರಿಕೆಟಿಗರು ಹೆಡ್​ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಭಾರತದ ಸಹಾಯಕ ಸಿಬ್ಬಂದಿಯ ಕಣ್ಗಾವಲಿನಲ್ಲಿ ಡಬ್ಲ್ಯುಟಿಸಿ ಫೈನಲ್​ಗೆ (WTC Final 2023) ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಐಪಿಎಲ್ 2023 ಮುಗಿದ ಕೂಡಲೇ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟ್ಸ್​​ಮನ್​ ವಿರಾಟ್ ಕೊಹ್ಲಿ ಮತ್ತು ಇತರ ಕ್ರಿಕೆಟಿಗರು ಇಂಗ್ಲೆಂಡ್​​ಗೆ ಪ್ರವಾಸ ಬೆಳೆಸಲಿದ್ದಾರೆ.

ವೇಗದ ಬೌಲರ್​ಗಳಾದ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಕೋಚ್ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು ಸ್ಕೈ ಬ್ಲ್ಯೂ ಬಣ್ಣದ ಜಂಪರ್​​ಗಳು ಮತ್ತು ಸ್ವೆಟ್​ಶರ್ಟ್​​ಗಳನ್ನು ಧರಿಸಿದ್ದಾರೆ. ಇದರ ಬಣ್ಣವು ಪ್ರೀಮಿಯರ್ ಲೀಗ್ ಕ್ಲಬ್ ಮ್ಯಾಂಚೆಸ್ಟರ್ ಸಿಟಿಯ ಜೆರ್ಸಿಗೆ ಹತ್ತಿರವಿದೆ.

2028ರವರೆಗೆ ಭಾರತೀಯ ಪುರುಷರ, ಮಹಿಳಾ ಮತ್ತು ಕಿರಿಯರ ತಂಡದ ಕಿಟ್ ಪ್ರಾಯೋಜಕರಾಗಿರುವ ಅಡಿಡಾಸ್ ಹೊಸ ಕಿಟ್ ಅನ್ನು ಒದಗಿಸಿದೆ. ಜೂನ್ 2023ರಿಂದ, ಟೀಮ್ ಇಂಡಿಯಾ ಮೊದಲ ಬಾರಿಗೆ ಅಡಿಡಾಸ್​ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್​​ನಲ್ಲೂ ಹೊಸ ಕಿಟ್ ಚಾಲನೆಗೆ ಬರಲಿದೆ. ಕೆಲವೇ ದಿನಗಳಲ್ಲಿ ಅದು ಬಿಡುಗಡೆಯಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ : WTC Final 2023: ಲಂಡನ್​ನಲ್ಲಿ ಅಭ್ಯಾಸ ಆರಂಭಿಸಿದ ಟೀಮ್​ ಇಂಡಿಯಾ

ನೈಕ್ ಜತೆಗಿನ ಪಾಲುದಾರಿಕೆ ಕೊನೆಗೊಂಡ ನಂತರ ಜಾಗತಿಕ ಬ್ರಾಂಡ್​​ನೊಂದಿಗೆ ಭಾರತದ ಮೊದಲ ಒಪ್ಪಂದ ಇದಾಗಿದೆ. ಈ ಮಧ್ಯೆ, ಭಾರತೀಯ ಕ್ರಿಕೆಟ್ ತಂಡಗಳ ಉಡುಪುಗಳನ್ನು ಎಂಪಿಎಲ್ ಮತ್ತು ಕಿಲ್ಲರ್ ಪ್ರಾಯೋಜಿಸಿದವು.

ಬಿಸಿಸಿಐ ಮತ್ತು ಅಡಿಡಾಸ್ ನಡುವಿನ ಪಾಲುದಾರಿಕೆಯ ಮೂಲಕ ಜಾಗತಿಕ ಬ್ರಾಂಡ್​ ಭಾರತ ಕ್ರಿಕೆಟ್​ ತಂಡದ ಆಟಗಾರರ ಮೈಮೇಲೆ ಕಂಗೊಳಿಸಲಿದೆ. ಅಡಿಡಾಸ್ ವಿಶ್ವದ ಕೆಲವು ಅತ್ಯುತ್ತಮ ಕ್ರೀಡಾ ತಂಡಗಳಿಗೆ ಪಾದರಕ್ಷೆಗಳು ಮತ್ತು ಉಡುಪುಗಳೊಂದಿಗೆ ಸಜ್ಜುಗೊಳಿಸಿದ ಸುದೀರ್ಘ ಇತಿಹಾಸ ಹೊಂದಿದೆ.

Exit mobile version