Site icon Vistara News

T20 World Cup | ತಂಡ ರಚನೆಗೆ ಮೊದಲು ಬುಮ್ರಾ, ಹರ್ಷಲ್ ಫಿಟ್ನೆಸ್‌ ಟೆಸ್ಟ್‌ ವರದಿಗೆ ಕಾಯುತ್ತಿದೆ ಬಿಸಿಸಿಐ

t20 world cup

ಮುಂಬಯಿ: ಅಕ್ಟೋಬರ್‌ ೧೬ರಂದು ಆರಂಭವಾಗಲಿರುವ ಟಿ೨೦ ವಿಶ್ವ ಕಪ್‌ಗೆ (T20 World Cup) ತಂಡ ಪ್ರಕಟಿಸುವ ಮೊದಲು ಬೌಲರ್‌ಗಳಾದ ಹರ್ಷಲ್‌ ಪಟೇಲ್ ಹಾಗೂ ಜಸ್‌ಪ್ರಿತ್ ಬುಮ್ರಾ ಅವರ ಫಿಟ್ನೆಸ್‌ ಪ್ರಮಾಣ ಪತ್ರವನ್ನು ಬಿಸಿಸಿಐ ಬಯಸಿದೆ. ಈ ಇಬ್ಬರು ಪ್ರಮುಖ ವೇಗಿಗಳು ಏಷ್ಯಾ ಕಪ್ ತಂಡಕ್ಕೆ ಗಾಯದ ಸಮಸ್ಯೆಯಿಂದಾಗಿ ಲಭ್ಯರಾಗಿರಲಿಲ್ಲ. ಹೀಗಾಗಿ ಬೌಲಿಂಗ್‌ ವಿಭಾಗ ದುರ್ಬಲವಾಗಿತ್ತು. ಈ ಇಬ್ಬರೂ ಆಟಗಾರರ ಉಪಸ್ಥಿತಿ ಭಾರತ ತಂಡಕ್ಕೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ತಂಡ ಘೋಷಣೆಗೆ ಮೊದಲು ಫಿಟ್ನೆಸ್‌ ಟೆಸ್ಟ್‌ಗಾಗಿ ಕಾಯುತ್ತಿದೆ.

ಬಹುತೇಕ ರಾಷ್ಟ್ರಗಳು ವಿಶ್ವ ಕಪ್‌ಗೆ ತಂಡವನ್ನು ಪ್ರಕಟಿಸಿದೆ. ಆದರೆ, ಬಿಸಿಸಿಐ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಆದಾಗ್ಯೂ ಟೀಮ್ ಇಂಡಿಯಾ ನಾಯಕ ರೋಹಿತ್‌ ಶರ್ಮ, ತಂಡದ ಸಂಯೋಜನೆ ಶೇಕಡಾ ೯೫ ಸಿದ್ಧಗೊಂಡಿದೆ ಎನ್ನಲಾಗಿದೆ.

“ತಂಡವನ್ನು ಪ್ರಕಟಿಸಲು ಯಾವುದೇ ಆತುರವಿಲ್ಲ. ಏಷ್ಯ ಕಪ್‌ ಮುಕ್ತಾಯಗೊಂಡ ಬಳಿಕ ತಂಡ ಪ್ರಕಟಿಸುವ ಯೋಜನೆಯಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಜಸ್‌ಪ್ರಿತ್‌ ಬುಮ್ರಾ ಹಾಗೂ ಹರ್ಷಲ್‌ ಪಟೇಲ್‌ ಅವರ ಫಿಟ್ನೆಸ್ ಪರೀಕ್ಷೆಯ ವರದಿ ಕೈ ಸೇರಬೇಕಾಗಿದೆ. ಜಸ್‌ಪ್ರಿತ್‌ ಬುಮ್ರಾ ಈ ವಾರದೊಳಗೆ ಬೆಂಗಳೂರಿಗೆ ತೆರಳಿ ಗಾಯದ ಸಮಸ್ಯೆಯ ವರದಿ ಪಡೆಯಲಿದ್ದಾರೆ,” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ | Virat kohli | ಬೆಂಬಲ ಸಿಕ್ಕಿಲ್ಲ ಎಂಬುದು ಸುಳ್ಳು, ಕೊಹ್ಲಿಗೆ ಹೇಳಿಕೆಗೆ ಬಿಸಿಸಿಐ ಅಧಿಕಾರಿಗಳ ಅಸಮಾಧಾನ

Exit mobile version