Site icon Vistara News

WTC Final 2023 : ಪಂದ್ಯ ಆರಂಭಕ್ಕೆ ಮೊದಲು ನ್ಯೂಜಿಲ್ಯಾಂಡ್​ನಿಂದ ಟ್ರೋಫಿಯನ್ನು ತಂದ ಹಿರಿಯ ಆಟಗಾರ

WTC Final 2023

#image_title

ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್ ಪಂದ್ಯಕ್ಕೆ ಮುಂಚಿತವಾಗಿ ನ್ಯೂಜಿಲೆಂಡ್​​ನ ಮಾಜಿ ಆಟಗಾರ ರಾಸ್ ಟೇಲರ್ ಪ್ರತಿಷ್ಠಿತ ಟ್ರೋಫಿಯನ್ನು ಮೈದಾನಕ್ಕೆ ತಂದರು. ಕಳೆದ ಆವೃತ್ತಿಯಲ್ಲಿ ಭಾರತವನ್ನು ಸೋಲಿಸಿದ್ದ ನ್ಯೂಜಿಲ್ಯಾಂಡ್​ ತಂಡ ಚಾಂಪಿಯನ್​​ಷಿಪ್​ನ ಟ್ರೋಫಿ ಗೆದ್ದುಕೊಂಡಿತ್ತು. ಹೀಗಾಗಿ ಹಾಲಿ ಋತುವಿನ ಆರಂಭದ ತನಕ ನ್ಯೂಜಿಲ್ಯಾಂಡ್​ ತಂಡ ಚಾಂಪಿಯನ್​ ಎನಿಸಿಕೊಂಡಿತ್ತು. ಇದೀಗ ಮತ್ತೊಂದು ಫೈನಲ್​ ಪಂದ್ಯ ಆರಂಭಗೊಂಡಿದ್ದು ಟ್ರೋಫಿಯನ್​ ವಾಪಸ್​ ತರಲಾಗಿದೆ.

ಲಂಡನ್ನ ಕೆನಿಂಗ್ಟನ್​ ಓವಲ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತವು ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಭಾರತ ತಂಡ ನಾಲ್ವರು ವೇಗಿಗಳೊಂದಿಗೆ ಕಣಕ್ಕೆ ಇಳಿದಿದ್ದು, ರವೀಂದ್ರ ಜಡೇಜಾ ಒಬ್ಬರೇ ಸ್ಪಿನ್ನ ಆಯ್ಕೆಯಾಗಿದ್ದಾರೆ. ಏತನ್ಮಧ್ಯೆ, ಸ್ಕಾಟ್ ಬೋಲ್ಯಾಂಡ್ ಆಸ್ಟ್ರೇಲಿಯಾ ಪರ ಆಡುತ್ತಿದ್ದಾರೆ. ಪ್ರಮುಖ ವೇಗಿ ಜೋಶ್​ ಹೇಜಲ್​ವುಡ್​ ಆಡದ ಹಿನ್ನೆಲೆಯಲ್ಲಿ ಬೋಲ್ಯಾಂಡ್​ಗೆ ಅವಕಾಶ ಸಿಕ್ಕಿದೆ.

ಇದನ್ನೂ ಓದಿ : WTC Final 2023 : ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯವೇ ಸರಿಯಿಲ್ಲ ಎಂದ ಡೇವಿಡ್​ ವಾರ್ನರ್​!

ನಾವು ಬೌಲಿಂಗ್ ಮಾಡಲಿದ್ದೇವೆ. ಕೇವಲ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಆಯ್ಕೆಯನ್ನು ತೆಗೆದುಕೊಂಡಿದ್ದೇನೆ. ನಾವು ಉತ್ತಮ ಕ್ರಿಕೆಟ್ ಆಡಬೇಕು ಮತ್ತು ಅಗ್ರಸ್ಥಾನಕ್ಕೆ ಬರಬೇಕು. ನಾವು 4 ವೇಗಿಗಳು ಮತ್ತು 1 ಸ್ಪಿನ್ನರ್ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿದ್ದೇವೆ. ಅಶ್ವಿನ್ ಕಳೆದ ಹಲವು ವರ್ಷಗಳಿಂದ ನಮಗೆ ಮ್ಯಾಚ್ ವಿನ್ನರ್ ಆಗಿದ್ದರಿಂದ ಅವರನ್ನು ಕೈ ಬಿಡುವುದು ಸುಲಭವಾಗಿರಲಿಲ್ಲ ಎಂದು ಟಾಸ್ ಬಳಿಕ ರೋಹಿತ್​ ಶರ್ಮಾ ಹೇಳಿದ್ದಾರೆ.

ತಂಡಗಳು ಇಂತಿವೆ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

Exit mobile version