ರಾಂಚಿ: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes) ನೆಟ್ಸ್ನಲ್ಲಿ ಕಠಿಣ ಬೌಲಿಂಗ್ ಅಭ್ಯಾಸ(ben stokes bowling practice) ನಡೆಸಿದ್ದಾರೆ. ಈ ಮೂಲಕ ನಾಲ್ಕನೇ(IND vs ENG) ಪಂದ್ಯದಲ್ಲಿ ಬೌಲಿಂಗ್ ನಡೆಸಲು ನಿರ್ಧರಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ(India vs England 4th Test) ಟೆಸ್ಟ್ ಪಂದ್ಯ ಫೆಬ್ರವರಿ 23ರಿಂದ ರಾಂಚಿಯಲ್ಲಿ(Ranchi) ಆರಂಭಗೊಳ್ಳಲಿದೆ.
ಆಲ್ರೌಂಡರ್ ಆಗಿರುವ ಬೆನ್ ಸ್ಟೋಕ್ಸ್ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಸಂಪೂರ್ಣವಾಗಿ ಬೌಲಿಂಗ್ ಮಾಡುವುದನ್ನು ನಿಲ್ಲಿಸಿ ಕೇವಲ ಬ್ಯಾಟಿಂಗ್ ಕಡೆ ಮಾತ್ರ ಗಮನಹರಿಸಿದ್ದರು. ಇದೀಗ ತಂಡದ ವೇಗಿಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ತೋರದಿರುವ ಕಾರಣದಿಂದ ಅವರು ಕೂಡ ಬೌಲಿಂಗ್ ಮಾಡಲು ಸಜ್ಜಾಗಿದ್ದಾರೆ.
Ben Stokes isn't ruling out a bowling comeback during the India series 👀 #INDvENG pic.twitter.com/eVmkw9OChl
— ESPNcricinfo (@ESPNcricinfo) February 18, 2024
ಸ್ಟೋಕ್ಸ್ ರಾಂಚಿಯ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಫೋಟೊಗಳು ವೈರಲ್ ಆಗಿದೆ. ಅಲ್ಲದೆ ಕೋಚ್ ಬ್ರೆಂಡನ್ ಮೆಕಲಮ್ ಕೂಡ ಸ್ಟೋಕ್ಸ್ ನಾಲ್ಕನೇ ಟೆಸ್ಟ್ನಲ್ಲಿ ಬೌಲಿಂಗ್ ಮಾಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ಪರ ವೇಗಿಗಳು ಇದುವರೆಗೆ ಹೇಳಿಕೊಳ್ಳುವ ಯಶಸ್ಸು ಪಡೆದಿಲ್ಲ. ಅನುಭವಿ ಜೇಮ್ಸ್ ಆಂಡರ್ಸನ್ಗೂ ಹೆಚ್ಚಿನ ಯಶಸ್ಸು ದೊರೆತಿಲ್ಲ. ಮಾರ್ಕ್ ವುಡ್ ಸದ್ಯ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡುವ ಮತೋರ್ವ ವೇಗಿಯ ಅವಶ್ಯವಿದೆ. ಈ ಜವಾಬ್ದಾರಿಯನ್ನು ಇದೀಗ ಸ್ಟೋಕ್ಸ್ ನಿಭಾಯಿಸುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ Wanindu Hasaranga: ಲಸಿತ್ ಮಾಲಿಂಗ ದಾಖಲೆ ಮುರಿದ ವನಿಂದು ಹಸರಂಗ
100 ಟೆಸ್ಟ್ ಪಂದ್ಯಗಳನ್ನು ಆಡಿರುವ ಬೆನ್ ಸ್ಟೋಕ್ಸ್ ಅವರು ಇದುವರೆಗೆ 146 ಇನಿಂಗ್ಸ್ನಲ್ಲಿ ಬೌಲಿಂಗ್ ನಡೆಸಿ 197 ವಿಕೆಟ್ ಕಿತ್ತಿದ್ದಾರೆ. 22 ರನ್ಗೆ 6 ವಿಕೆಟ್ ಕಿತ್ತದ್ದು ಇವರ ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ. 4 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.
ಇಂಗ್ಲೆಂಡ್ ತಂಡ
ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಶೋಯೆಬ್ ಬಶೀರ್, ಒಲ್ಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಗುಸ್ ಅಟ್ಕಿನ್ಸನ್.
ಬಾಜ್ಬಾಲ್ ಬಗ್ಗೆ ಮಾಜಿಗಳ ಅಪಸ್ವರ
ಇಂಗ್ಲೆಂಡ್ ತಂಡ ಅನುಸರಿಸುತ್ತಿರುವ ‘ಬಾಜ್ಬಾಲ್'(Bazball) ಶೈಲಿಯ ಆಟದ ಬಗ್ಗೆ ತಂಡದ ಮಾಜಿಗಳು ಅಪಸ್ವರವೆತ್ತಿದ್ದಾರೆ. ಈ ಪ್ರಕ್ರಿಯೆಯನ್ನು ಕೈಬಿಟ್ಟು ನೈಜ ಟೆಸ್ಟ್ ಆಡಬೇಕೆಂದು ಆಗ್ರಹಿಸಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರರಾದ ನಾಸಿರ್ ಹುಸೇನ್ ಮತ್ತು ಮೈಕೆಲ್ ವಾನ್ ಆಕ್ರಮಣಕಾರಿ ಶೈಲಿಯ ಬಾಜ್ಬಾಲ್ ತಂತ್ರವನ್ನು ತಕ್ಷಣ ಕೈಬಿಡಬೇಕು. ಒಂದೇ ಸಿದ್ಧಾಂತದ ಬದಲು ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಆಟವಾಡುವ ಕಡೆ ಯೋಚಿಸಬೇಕಾದ ಅಗತ್ಯವಿದೆ. ಭಾರತ ತಂಡವನ್ನು ನೋಡಿ ಕಲಿಯಿರಿ ಎಂದು ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಮ್ ಅವರ ನೇತೃತ್ವದಲ್ಲಿ ಇಂಗ್ಲೆಂಡ್ ಕಂಡ ದಯನೀಯ ಸೋಲು ಇದಾಗಿದೆ. ಅವರ ಕಾರ್ಯತಂತ್ರ ವೈಫಲ್ಯ ಕಂಡದ್ದು ಸೋಲಿಗೆ ಪ್ರಮುಖ ಕಾರಣ. ಪ್ರತಿ ಬಾರಿಯೂ ಆಕ್ರಮಣಕಾರಿ ಆಟ ನಡೆಯುವುದಿಲ್ಲ. ಟೆಸ್ಟ್ನಲ್ಲಿ ಸಂದರ್ಭೋಚಿತವಾಗಿ ಆಡಬೇಕಾಗುತ್ತದೆ ಎಂದು ವಾನ್ ಸ್ಥಳೀಯ ಪತ್ರಿಕೆಯ ಅಂಕಣದಲ್ಲಿ ಬರೆದಿದ್ದಾರೆ.