ಬೆಂಗಳೂರು: ನಿಯಮ ಉಲ್ಲಂಘನೆ ಹಾಗೂ ವಾಹನ ಚಾಲನೆ ವೇಳೆ ಅಶಿಸ್ತು ತೋರುವುದು ಕೆಲವು ಆಟೋ ಚಾಲಕರಿಗೆ ಮಾಮೂಲಿ ಸಂಗತಿಯಾಗಿರುತ್ತದೆ. ಆದರೆ, ಪ್ರಯಾಣಿಕರ ಪಾಲಿಗೆ ಇದು ಅತ್ಯಂತ ಆತಂಕದ ಸಂಗತಿಯಾಗಿರುತ್ತದೆ. ಭಾರತೀಯರು ಇಂಥ ಸಂದರ್ಭಗಳನ್ನು ಹಲವು ಬಾರಿ ಎದುರಿಸಿರುವ ಕಾರಣ ಮನಸ್ಸು ಗಟ್ಟಿ ಮಾಡಿಕೊಂಡಿರುತ್ತಾರೆ. ಏನಾದರೂ ಹೇಳಲು ಹೋದರೆ ಡ್ರೈವರ್ಗಳಿಂದಲೇ ಬೈಸಿಕೊಳ್ಳುವ ಅಪಾಯ ಎದುರಾಗುವ ಕಾರಣ ಸುಮ್ಮನಿರುತ್ತಾರೆ. ಆದರೆ, ವಾಹನ ಚಾಲನೆಯಲ್ಲಿ ಅತ್ಯಂತ ಶಿಸ್ತು ಹೊಂದಿರುವ ದೇಶಗಳಿಂದ ಬಂದಿರುವವರಿಗೆ ಇಂಥ ಘಟನೆಗಳು ದುಸ್ವಪ್ನ ಎನಿಸಿಕೊಳ್ಳಲಿದೆ. ಅಂಥದ್ದೊಂದು ಪ್ರಸಂಗವನ್ನು ಬೆಂಗಳೂರಿನಲ್ಲಿ ಎದುರಿಸಿರುವುದಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes) ವಿವರಿಸಿದ್ದಾರೆ. ಇದು ತಮ್ಮ ಜೀವನದಲ್ಲಿ ಎದುರಾದ ಅಂತ್ಯಂತ ಭಯಭೀತ ಘಟನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಅಂದ ಹಾಗೆ ಇಂಗ್ಲೆಂಡ್ ಪರ 2019 ರ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ನಿವೃತ್ತಿಯಿಂದ ಹೊರ ಬಂದಿದ್ದರು. ಭಾರತದಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತಮ್ಮ ತಂಡಕ್ಕೆ ಸಹಾಯ ಮಾಡಲು ಮುಂದಾಗಿದ್ದರು. ಅವರು ಅಕಾಲಿಕ ಗಾಯವನ್ನು ಎದುರಿಸಿದ್ದರಿಂದ ಮತ್ತು ತಮ್ಮ ತಂಡಕ್ಕಾಗಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರಿಂದ ಅವರ ಯೋಜನೆಯ ಪ್ರಕಾರ ನಡೆಯಲಿಲ್ಲ. ಜತೆಗೆ ತಂಡದ ಪ್ರದರ್ಶನವೂ ಉತ್ತಮವಾಗಿರಲಿಲ್ಲ.
ಬುಧವಾರ ಸ್ಟಾರ್ ಆಲ್ರೌಂಡರ್ ವೀಡಿಯೊ ಮಾಡಿ ತಮಗೆ ಆಟೋ ರಿಕ್ಷಾ ಪ್ರಯಾಣದ ವೇಳೆ ಆಗಿರುವ ಅನುಭವವನ್ನು ಹೇಳಿದ್ದಾರೆ. ಲಿಯಾಮ್ ಲಿವಿಂಗ್ಸ್ಟನ್ ಮತ್ತು ಕೋಚ್ ಆಂಡಿ ಮಿಚೆಲ್ ಅವರನ್ನು ಒಳಗೊಂಡ ಭಯಾನಕ ಆಟೋ ರಿಕ್ಷಾ ಪ್ರಯಾಣದ ಘಟನೆಯನ್ನು ವಿವರಿಸಿದ್ದಾರೆ. ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿರುವುದಾಗಿ ಹೇಳಿದ್ದಾರೆ.
ನಾನು ಮತ್ತು ಲಿವಿ [ಲಿಯಾಮ್ ಲಿವಿಂಗ್ಸ್ಟನ್] ಮತ್ತು ನಾವು ನಮ್ಮ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ತರಬೇತುದಾರ ಮಿಚ್ ಅವರ ಜತೆ ಹೋಗುತ್ತಿದ್ದೆ. ಆಟೋ ರಿಕ್ಷಾ ಪ್ರಯಾವೂ ದೊಡ್ಡಗಾಗಿರಲಿಲ್ಲ. ಬೇರೆ ವಾಹನ ವೊಂದು ಗುದ್ದಿ ರಿಕ್ಷಾದ ಹಿಂಭಾಗದಲ್ಲಿ ನುಜ್ಜುಗುಜ್ಜಾಗುತ್ತಿದ್ದೆವು. ಅದಕ್ಕೆಲ್ಲ ಕಾರಣ ಆಟೋ ಚಾಲಕನ ವೇಗದ ಪ್ರಯಾಣವೇ ಕಾರಣ ಎಂದು ಅವರು ಹೇಳಿದ್ದಾರೆ. ಮುಂದಿನಿಂದ ಬೇರೆ ವಾಹನ ಬರುತ್ತಿದ್ದರೂ ಅವರು ವೇಗ ಕಡಿಮೆ ಮಾಡಿಲ್ಲ. ಸ್ವಲ್ಪದರಲ್ಲೇ ನಮ್ಮ ಪ್ರಾಣ ಉಳಿಯಿತು ಎಂದು ಅವರು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ : IPL 2024 : ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ? ಬಿಸಿಸಿಐ ಸ್ಪಷ್ಟನೆ
ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆಯಿತು ಎಂಬುದು ವೀಡಿಯೊದೊಂದಿಗೆ ಸ್ಪಷ್ಟವಾಗಿಲ್ಲ. ಆದರೆ ಬೆಂಗಳೂರಿನ ಬೀದಿಯೊಂದರಲ್ಲಿ ಎಂಬುದು ಗೊತ್ತಾಗಿದೆ.
ಪ್ರಮುಖ ಮುಖಾಮುಖಿ
ಹಾಲಿ ಚಾಂಪಿಯನ್ ಗಳಿಗೆ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಪಂದ್ಯ ಮಹತ್ವದ್ದಾಗಿದೆ. ಎರಡೂ ತಂಡಗಳು ವಿಶ್ವಕಪ್ 2023 ಪಾಯಿಂಟ್ಸ್ ಟೇಬಲ್ನ ಕೊನೆಯ ಎರಡು ಸ್ಥಾನಗಳಲ್ಲಿವೆ. ಪಂದ್ಯವನ್ನು ಗೆಲ್ಲುವುದು ಅವರ ಆತ್ಮವಿಶ್ವಾಸಕ್ಕೆ ಒಳ್ಳೆಯದನ್ನು ಮಾಡುತ್ತದೆ. ಕಳಪೆ ಫಾರ್ಮ್ ಹೊರತಾಗಿಯೂ, ಇಂಗ್ಲೆಂಡ್ ಇನ್ನೂ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ.