ಲಂಡನ್: ಏಕದಿನ ವಿಶ್ವಕಪ್ ಹಿನ್ನಲೆ ನಿವೃತ್ತಿ ವಾಪಸ್ ಪಡೆದು ತಂಡಕ್ಕೆ ಮರಳಿದ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್(Ben Stokes) ಕಿವೀಸ್ ವಿರುದ್ಧದ ಮೂರನೇ ಏಕದಿನ(England vs New Zealand) ಪಂದ್ಯದಲ್ಲಿ ಸೊಗಸಾದ ಶತಕ ಬಾರಿಸಿ ಮಿಂಚಿದ್ದಾರೆ. ಜತೆಗೆ ವಿಶ್ವಕಪ್ಗೂ(ICC World Cup) ಮುನ್ನ ತಾನೆಷ್ಟು ಬಲಿಷ್ಠ ಎನ್ನುವ ಸ್ಪಷ್ಟ ಸಂದೇಶವನ್ನು ಇತರ ತಂಡಗಳಿಗೆ ರವಾನಿಸಿದ್ದಾರೆ.
ಬುಧವಾರ ಇಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಅವರ ಸಿಡಿಲಬ್ಬರ ಶತಕದ ನೆರವಿನಿಂದ 48.1 ಓವರ್ಗಳಲ್ಲಿ 368 ರನ್ ಪೇರಿಸಿ ಸವಾಲೊಡ್ಡಿದೆ. ಗುರಿ ಬೆನ್ನಟ್ಟುತ್ತಿರುವ ಕಿವೀಸ್ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿದೆ.
ಪ್ರಚಂಡ ಬ್ಯಾಟಿಂಗ್
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಟೋಕ್ಸ್ ಕಿವೀಸ್ ಬೌಲರ್ಗಳ ಕಿವಿ ಕಿಂಡುವಲ್ಲಿ ಯಶಸ್ವಿಯಾದರು. 124 ಎಸೆತ ಎದುರಿಸಿದ ಅವರು ಬರೋಬ್ಬರಿ 15 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಿಂದ 182 ರನ್ ಬಾರಿಸಿ ತಮ್ಮ ಪ್ರಚಂಡ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸಿದರು. ಅವರ ಈ ಬ್ಯಾಟಿಂಗ್ ಫಾರ್ಮ್ ಕಂಡ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ಗೂ ಮುನ್ನ ಮತ್ತಷ್ಟು ಆತ್ಮವಿಶ್ವಾಸ ಮೂಡುವಂತೆ ಮಾಡಿದೆ. ಅಲ್ಲದೆ ವಿಶ್ವಕಪ್ ಟ್ರೋಫಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಧೈರ್ಯ ಬಂದಿದೆ. ಆರಂಭಿಕ ಆಟಗಾರ ಡೇವಿಡ್ ಮಲಾನ್ ಕೂಡ ಉತ್ತಮ ಪ್ರದರ್ಶನ ತೋರಿ 96 ರನ್ ಬಾರಿಸಿದರು. ಆದರೆ ಕೇವಲ 4 ರನ್ಗಳಿಂದ ಶತಕ ವಂಚಿತರಾದರು. ಉಭಯ ಆಟಗಾರರನ್ನು ಹೊರತುಪಡಿಸಿ ಉಳಿದ ಯಾರೋಬ್ಬ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸುವಲ್ಲಿ ಯಶಸ್ಸು ಕಾಣಲಿಲ್ಲ.
ದಾಖಲೆ ಬರೆದ ಸ್ಟೋಕ್ಸ್
ಸ್ಟೋಕ್ಸ್(182 ರನ್) ಅವರು ಈ ಪ್ರಚಂಡ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡದ ಪರ ನೂತನ ದಾಖಲೆಯೊಂದನ್ನು ಬರೆದರು. ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ಮೊತ್ತ ಗಳಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಜಾಸನ್ ರಾಯ್ ಹೆಸರಿನಲ್ಲಿತ್ತು. 2018 ರಲ್ಲಿ ರಾಯ್ ಆಸೀಸ್ ವಿರುದ್ಧ 180 ರನ್ ಬಾರಿಸಿ ದಾಖಲೆ ಬರೆದಿದ್ದರು.
ಇದನ್ನೂ ಓದಿ ವಿಶ್ವಕಪ್‌ಗೆ ಸಂಭಾವ್ಯ ತಂಡ ಪ್ರಕಟಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್; ಜೋಫ್ರಾ ಆರ್ಚರ್‌ಗೆ ಕೊಕ್
Ridiculous.
— England Cricket (@englandcricket) September 13, 2023
Scorecard/clips: https://t.co/Pd380O21mn@IGCom | #EnglandCricket pic.twitter.com/6FGco9sV24
ವಿಶ್ವಕಪ್ ಉದ್ಘಾಟನ ಪಂದ್ಯದಲ್ಲಿ ಕಿವೀಸ್-ಇಂಗ್ಲೆಂಡ್ ಮುಖಾಮುಖಿ
ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಿವೀಸ್ ವಿರುದ್ಧವೇ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ನಿವೃತ್ತಿ ವಾಪಸ್ ಪಡೆದಿದ್ದ ಸ್ಟೋಕ್ಸ್