Site icon Vistara News

World Cup 2023 : ತಮ್ಮ ನಿರ್ಧಾರದಿಂದ ಯೂ ಟರ್ನ್​ ಹೊಡೆದ ಇಂಗ್ಲೆಂಡ್​ ಆಟಗಾರ ಬೆನ್​ಸ್ಟೋಕ್ಸ್​

Ben stokes

ಲಂಡನ್​: 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸಲು ಪ್ರಾರಂಭಿಸಿವೆ. ಇಯಾನ್ ಮಾರ್ಗನ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಅನುಭವಿ ಆಟಗಾರರು ಇಲ್ಲದೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಭಾರತದ ನೆಲದಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ದೊಡ್ಡ ಸವಾಲನ್ನು ಹೊಂದಿದೆ. ಏತನ್ಮಧ್ಯೆ ಸ್ಟೋಕ್ಸ್​ ಅವರನ್ನು ತಂಡಕ್ಕೆ ವಾಪಸ್​ ಕರೆತರುವ ಪ್ರಯತ್ನ ಯಶಸ್ವಿಯಾಗಿದೆ ಎಂಬುದಾಗಿ ವರದಿಯಾಗದಿಎ.

ಇಂಗ್ಲೆಂಡ್ ಅಭಿಮಾನಿಗಳ ಸಂತೋಷಕ್ಕೆ ಈ ಸುದ್ದಿಯು ಕಾರಣವಾಗಿದೆ. 2019 ರ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ಏಕದಿನ ತಂಡಕ್ಕೆ ಮರಳಲು ಸಜ್ಜಾಗಿದ್ದಾ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಏಕ ದಿನ ತಂಡದ ನಾಯಕ ಜೋಸ್ ಬಟ್ಲರ್ ಅವರನ್ನು ಭೇಟಿಯಾದ ಬಳಿಕ ಬೆನ್ ಸ್ಟೋಕ್ಸ್ ತಮ್ಮ ಏಕದಿನ ನಿವೃತ್ತಿ ನಿರ್ಧಾರದ ಬಗ್ಗೆ ಯು-ಟರ್ನ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

32 ವರ್ಷದ ಸ್ಟೋಕ್ಸ್​ ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಲು ಜುಲೈ 2022ರಲ್ಲಿ ಏಕದಿನ ಮಾದರಿಯಿಂದ ಹಠಾತ್ ನಿವೃತ್ತಿ ಘೋಷಿಸಿದರು. ಆದಾಗ್ಯೂ, ಮುಂಬರುವ ವಿಶ್ವ ಕಪ್​ನಲ್ಲಿ ಪಾಲ್ಗೊಳ್ಳಲು ಸ್ಟೋಕ್ಸ್ ಆಶ್ಚರ್ಯಕರವಾಗಿ ಮರಳುತ್ತಿರುವುದು ಇಂಗ್ಲೆಂಡ್ ಅಭಿಮಾನಿಗಳಿಗೆ ಬೆರಗು ಹುಟ್ಟಿಸಿದೆ. ಅವರ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಐಪಿಎಲ್ 2023ರ ಬಳಿಕದಿಂದ ಇಂಗ್ಲೆಂಡ್ ಆಲ್​ರೌಂಡರ್​ ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ. ಇದು ಅವರ ಬೌಲಿಂಗ್ ಸಾಮರ್ಥ್ಯವನ್ನು ಸೀಮಿತಗೊಳಿಸಿದೆ. ಅವರು ಆ್ಯಶಸ್​ 2023ರ ಐದು ಟೆಸ್ಟ್​​ಗಳಲ್ಲಿ ಕೇವಲ 29 ಓವರ್​ಗಳ ಳನ್ನು ಎಸೆದಿದ್ದಾರೆ. ಮುಂದಿನ ಇಂಗ್ಲಿಷ್ ಬೇಸಿಗೆಗೆ ಮುಂಚಿತವಾಗಿ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸ್ಟೋಕ್ಸ್ ಐಪಿಎಲ್ 2024 ಅನ್ನು ಕಳೆದುಕೊಳ್ಳಲು ಸಿದ್ಧರಿದ್ದಾರೆ ಎಂದು ಟೆಲಿಗ್ರಾಫ್ ವರದಿ ತಿಳಿಸಿದೆ.

ಅವರು ತಂಡಕ್ಕೆ ಆಯ್ಕೆಯಾದರೆ ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಕ್ರೈಸ್ಟ್ಚರ್ಚ್ ಮೂಲದ ಕ್ರಿಕೆಟಿಗ ನ್ಯೂಜಿಲೆಂಡ್ ವಿರುದ್ಧದ 2019 ರ ವಿಶ್ವಕಪ್ ಫೈನಲ್​​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಸ್ಟೋಕ್ಸ್ 84* (98) ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು ಗೆಲ್ಲಿಸಿದ್ದರು.

ಜೋಫ್ರಾ ಲಭ್ಯತೆ

ಏಕದಿನ ವಿಶ್ವಕಪ್ 2023 ರಲ್ಲಿ ಭಾಗವಹಿಸುವ ಎಲ್ಲಾ ಹತ್ತು ತಂಡಗಳು ಸೆಪ್ಟೆಂಬರ್ 05 ರೊಳಗೆ ತಮ್ಮ ಪ್ರಾಥಮಿಕ ತಂಡದ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಬೇಕಾಗುತ್ತದೆ. ಸೆಪ್ಟೆಂಬರ್ 27ರವರೆಗೆ ತಂಡಗಳು ತಮ್ಮ ತಂಡಗಳಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಬಹುದು.

ಇದನ್ನೂ ಓದಿ: IPL 2024 : ಸಿಎಸ್​ಕೆ ತಂಡಕ್ಕೆ ಆಘಾತ; ಮುಂದಿನ ಆವೃತ್ತಿಯಲ್ಲಿ ಆಡುವುದಿಲ್ಲ ಎಂದ ಇಂಗ್ಲೆಂಡ್​ ಆಲ್​ರೌಂಡರ್​

ಇಂಗ್ಲೆಂಡ್​ ಬಳಗ ಸೆಪ್ಟೆಂಬರ್ 08 ರಿಂದ ನ್ಯೂಜಿಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಏಕದಿನ ಸರಣಿಯಲ್ಲಿ ಮತ್ತು ವಿಶ್ವಕಪ್​​ಗೆ ಮುಂಚಿತವಾಗಿ ಸೆಪ್ಟೆಂಬರ್ 20 ರಿಂದ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ.

ಸ್ಟೋಕ್ಸ್ ಹೊರತಾಗಿ, ಜೋಫ್ರಾ ಆರ್ಚರ್ ಅವರನ್ನು ಅಕ್ಟೋಬರ್ 05 ರಿಂದ ಪ್ರಾರಂಭವಾಗಲಿರುವ ವಿಶ್ವ ಕಪ್​ಗೆ ಇಂಗ್ಲೆಂಡ್ ತಂಡದ ಪರ ಆಡಲಿದ್ದಾರೆ. ಪ್ರತಿ ದೇಶವು ವಿಶ್ವಕಪ್​ಗೆ 15 ಸದಸ್ಯರ ತಂಡವನ್ನು ಘೋಷಿಸಬಹುದು ಮತ್ತು ಮೂರು ಪ್ರಯಾಣದ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

Exit mobile version