ಬೆಂಗಳೂರು: ಭಾರತದ ಡಬಲ್ಸ್ ಜೋಡಿ ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್. ಪ್ರಶಾಂತ್(Anirudh-Prashanth) ಇಲ್ಲಿ ನಡೆಯುತ್ತಿರುವ 5ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್(Bengaluru Open) ಕೂಟದ ಫೈನಲ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.
ಇಂದು(ಶನಿವಾರ ಫೆ.25) ನಡೆಯುವ ಫೈನಲ್ ಕಾದಾಟದಲ್ಲಿ ಭಾರತ ಜೋಡಿ ದಕ್ಷಿಣ ಕೊರಿಯಾದ ಚುಂಗ್ ಯನ್ ಸಿಯಾಂಗ್-ಚೈನೀಸ್ ತೈಪೆಯ ಯು ಸು ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಟೂರ್ನಿಯಲ್ಲಿನ ಆಟವನ್ನು ಗಮನಿಸುವಾಗ ಫೈನಲ್ನಲ್ಲಿಯೂ ಭಾರತ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
ಶುಕ್ರವಾರ(ಫೆ.24) ನಡೆದ ಪುರುಷರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್. ಪ್ರಶಾಂತ್ ಜೋಡಿ 4ನೇ ಶ್ರೇಯಾಂಕಿತ ಭಾರತದ ಅರ್ಜುನ್ ಖಾಡೆ-ಆಸ್ಟ್ರಿಯಾದ ಮ್ಯಾಕ್ಸಿಮಿಲನ್ ವಿರುದ್ಧ 7-6, 4-6, 10-2 ಸೆಟ್ಗಳಲ್ಲಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ Bengaluru Open: ಸುಮಿತ್ ನಗಲ್ಗೆ ಸೋಲು; ಅನಿರುದ್ಧ್ -ಪ್ರಶಾಂತ್ ಜೋಡಿ ಸೆಮಿಗೆ ಲಗ್ಗೆ
ದಿನದ ಮತ್ತೊಂದು ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಪುರ್ಸೆಲ್ ಹಾಗೂ ಕ್ರೊವೇಷಿಯಾದ ಹಮದ್ ಮೆಡ್ಜೆಡೋವಿಚ್ ಮುಖಾಮುಖಿಯಾಗಲಿದ್ದಾರೆ.