Site icon Vistara News

Bengaluru Open: ಸಿಎಂ ಬೊಮ್ಮಾಯಿ ತಡವಾಗಿ ಬಂದ ಕಾರಣಕ್ಕೆ ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್‌ ಬೋರ್ಗ್‌

Bengaluru Open: Tennis legend Bion Borg rejects CM Bommai's late arrival

Bengaluru Open: Tennis legend Bion Borg rejects CM Bommai's late arrival

ಬೆಂಗಳೂರು: 11 ಬಾರಿಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ, ಮಾಜಿ ಟೆನಿಸ್​ ಆಟಗಾರ ಬ್ಯೋನ್ ಬೋರ್ಗ್(Bjorn Borg) ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆಯು ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಲು ನಿರಾಕರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿಗದಿಯಾಗಿದ್ದ ಸನ್ಮಾನ ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(CM Bommai) ಅವರು ಒಂದೂವರೆ ಗಂಟೆ ತಡವಾಗಿ ಬಂದ ಕಾರಣಕ್ಕೆ ಅವರು ತಮ್ಮ ಸನ್ಮಾನವನ್ನೇ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮಗನ ಆಟ ನೋಡಲು ಬ್ಯೋನ್ ಬೋರ್ಗ್ ಅವರು ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ಭಾರತದ ಮಾಜಿ ಆಟಗಾರ ವಿಜಯ್‌ ಅಮೃತ್‌ರಾಜ್‌ ಮತ್ತು ಬೋರ್ಗ್‌ ಅವರನ್ನು ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸುವ ಕಾರ್ಯಕ್ರಮವನ್ನು ಮಂಗಳವಾರ ಕೆಎಸ್‌ಎಲ್‌ಟಿಎನಲ್ಲಿ ಮಂಗಳವಾರ(ಫೆ.21) ಬೆಳಿಗ್ಗೆ 9.30ಕ್ಕೆ ಏರ್ಪಡಿಸಲಾಗಿತ್ತು.

ಸಿಎಂ ಬೊಮ್ಮಾಯಿ ಈ ಕಾರ್ಯಕ್ರಮಕ್ಕೆ ಬರುವುದು ತಡವಾದ ಕಾರಣಕ್ಕೆ ಸಮಾರಂಭವನ್ನು 10.15ಕ್ಕೆ ಮುಂದೂಡಲಾಯಿತು. ಆದರೆ 11 ಗಂಟೆಯಾದರೂ ಈ ಸಮಾರಂಭ ಆರಂಭವಾಗಲಿಲ್ಲ. ಲಿಯೊ ಅವರ ಪಂದ್ಯ ಬೆಳಿಗ್ಗೆ 11ಕ್ಕೆ ನಿಗದಿಯಾಗಿತ್ತು. ಮಗನ ಆಟ ನೋಡಲು ಬೋರ್ಗ್‌ ಅವರು ಗ್ಯಾಲರಿಯಲ್ಲಿ ಕುಳಿತುಕೊಂಡರು.

ಪಂದ್ಯ ಆರಂಭವಾಗಿ ಕೆಲವು ನಿಮಿಷಗಳಾದ ಬಳಿಕ ಬೊಮ್ಮಾಯಿ ಅವರು ಈ ಕಾರ್ಯಕ್ರಮಕ್ಕೆ ಬಂದರು. ಇದೇ ವೇಳೆ ಸಿಎಂ ಬಂದ ವಿಷಯವನ್ನು ಬೋರ್ಗ್ ಅವರ ಗಮನಕ್ಕೆ ತರಲಾಯಿತು. ಆದರೆ ಮಗನ ಪಂದ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಪಂದ್ಯ ಮುಗಿದ ಬಳಿಕವಷ್ಟೇ ಈ ಕಾರ್ಯಕ್ರಮಕ್ಕೆ ಬರುವುದಾಗಿ ಬ್ಯೋನ್ ಬೋರ್ಗ್ ಹೇಳಿದ್ದಾರೆ. ಇದರಿಂದಾಗಿ ಆಯೋಜಕರು ಸಮಾರಂಭವನ್ನು ರದ್ದುಗೊಳಿಸಿದ್ದಾರೆ.

ಇದನ್ನೂ ಓದಿ Asian Cup Table Tennis | ಐತಿಹಾಸಿಕ ಪದಕ ಗೆದ್ದ ಮಣಿಕಾ ಬಾತ್ರಾ; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ

ಹಲವು ಕಾರ್ಯಕ್ರಮಗಳು ಇದ್ದ ಕಾರಣ ಮುಖ್ಯಮಂತ್ರಿ ತಡವಾಗಿ ಬಂದರು ಎಂದು ಸಂಘಟನಾ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೋರ್ಗ್ ಅವರು ಮಗನ ಪಂದ್ಯದ ವೀಕ್ಷಣೆಯನ್ನು ಅರ್ಧದಲ್ಲೇ ಬಿಟ್ಟು ಬರಲು ಸಾಧ್ಯವಿಲ್ಲ ಎಂಬುದನ್ನು ಮುಖ್ಯಮಂತ್ರಿಗೆ ತಿಳಿಸಿದೆವು. ಆದರೂ ಬೊಮ್ಮಾಯಿ ಅವರು ಕೆಲಹೊತ್ತು ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿ ತೆರಳಿದ್ದಾರೆ ಎಂದು ಸಂಘಟನಾ ಸಮಿತಿಯ ಅಧಿಕಾರಿಗಳು ತಿಳಿಸಿರುವುದಾಗಿ ಡೆಕ್ಕನ್​ ಹೆರಾಲ್ಡ್ ವರದಿ ಮಾಡಿದೆ.

Exit mobile version