Site icon Vistara News

Team India | ಚಂದದ ಕಾರನ್ನು ಶೆಡ್‌ನಲ್ಲಿಡಲಾಗಿದೆ; ಟೀಮ್‌ ಇಂಡಿಯಾ ಬಗ್ಗೆ ಬ್ರೆಟ್‌ ಲೀ ಮಾತಿನ ಹುರುಳೇನು?

ಪರ್ತ್‌ : ಟಿ೨೦ ವಿಶ್ವ ಕಪ್‌ಗಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಲುಪಿದ್ದು ಅದಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದೆ. ಡೆತ್‌ ಓವರ್‌ ಬೌಲರ್‌ಗಳ ಕೊರತೆಯೊಂದಿಗೆ ಸಮರಕ್ಕೆ ಸಜ್ಜಾಗಿರುವ ಭಾರತ ತಂಡದ ಬೌಲಿಂಗ್‌ ಆಯ್ಕೆ ಬಗ್ಗೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್‌ ಬ್ರೆಟ್‌ ಲೀ ಅವರಿಗೆ ಸಮಾಧಾನವಿಲ್ಲ. ವೇಗದ ಬೌಲರ್‌ ಆಗಿದ್ದ ಬ್ರೆಟ್‌ ಲೀ ಅವರಿಗೆ ಟೀಮ್ ಇಂಡಿಯಾದ ಸದ್ಯದ ಅತಿ ವೇಗದ ಬೌಲರ್‌ ಉಮ್ರಾನ್ ಮಲಿಕ್‌ ಅವರನ್ನು ಆಯ್ಕೆ ಮಾಡದಿರುವುದು ಸರಿ ಕಂಡಿಲ್ಲ.

“ನಿಮ್ಮ ಬಳಿ ಉತ್ತಮ ಕಾರು ಇದೆ ಎಂದಾದರೆ ಅದನ್ನು ಓಡಿಸಬೇಕು. ಶೆಡ್‌ನಲ್ಲಿ ಇಟ್ಟರೆ ಏನು ಪ್ರಯೋಜನ. ಉಮ್ರಾನ್ ಮಲಿಕ್‌ ಸರಾಸರಿ ೧೫೦ ಕಿಲೋ ಮೀಟರ್‌ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಆಸ್ಟ್ರೇಲಿಯಾದ ಪರಿಸ್ಥಿತಿಗೆ ಅವರು ಪೂರಕವಾಗಿದ್ದಾರೆ. ಆದರೆ ವಿಶ್ವ ಕಪ್‌ ತಂಡಕ್ಕೆ ಅವರನ್ನು ಆಯ್ಕೆ ಮಾಡಿಲ್ಲ ಎಂದಾದರೆ ವೇಗದ ಕಾರನ್ನು ಶೆಡ್‌ನಲ್ಲಿ ಇಟ್ಟ ಹಾಗೆ,” ಎಂಬುದಾಗಿ ಬ್ರೆಟ್‌ ಲೀ ಹೇಳಿದ್ದಾರೆ.

“ಉಮ್ರಾನ್‌ ಮಲಿಕ್ ಯುವ ಪ್ರತಿಭೆ. ಅನುಭವ ಕಡಿಮೆ ಇದೆ. ಆದರೆ, ೧೫೦ ಕಿ. ಮೀ ವೇಗದಲ್ಲಿ ಚೆಂಡೆಸೆಯಬಲ್ಲರು ಹಾಗೂ ಆಸ್ಟ್ರೇಲಿಯಾ ಪಿಚ್‌ನಲ್ಲಿ ವಿಕೆಟ್‌ ಪಡೆಯಬಲ್ಲರು. ಅವರ ಬದಲಿಗೆ ೧೪೦ ಕಿ.ಮೀ ಕಡಿಮೆ ವೇಗದಲ್ಲಿ ಚೆಂಡೆಸೆಯು ಬೌಲರ್‌ಗಳನ್ನು ಆಯ್ಕೆ ಮಾಡಲಾಗಿದೆ,” ಎಂಬುದಾಗಿ ಬ್ರೆಟ್‌ ಲೀ ನುಡಿದಿದ್ದಾರೆ.

ಉಮ್ರಾನ್‌ ಮಲಿಕ್‌ ಐರ್ಲೆಂಡ್ ಪ್ರವಾಸದ ಸರಣಿಗೆ ಆಯ್ಕೆಯಾಗಿದ್ದರು. ಕೇವಲ ಮೂರು ಪಂದ್ಯಗಳ ಬಳಿಕ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಟೀಮ್‌ ಇಂಡಿಯಾದಲ್ಲಿ ಜಸ್‌ಪ್ರಿತ್‌ ಬುಮ್ರಾ ಅವರು ಅವಕಾಶ ಪಡೆದುಕೊಂಡಿಲ್ಲ. ಗಾಯದ ಸಮಸ್ಯೆಯಿಂದ ಹೊರಕ್ಕುಳಿದಿದ್ದಾರೆ. ಬಿಸಿಸಿಐ ಅವರಿಗೆ ಪರ್ಯಾಯ ಆಯ್ಕೆಯನ್ನೂ ಸೂಚಿಸಿಲ್ಲ.

ಇದನ್ನೂ ಓದಿ | Jasprit Bumrah | ಅವಸರ ಮಾಡಿ ಬುಮ್ರಾ ಸೇವೆ ಕಳೆದುಕೊಂಡ ಟೀಮ್‌ ಇಂಡಿಯಾ, ಹಿರಿಯ ಕ್ರಿಕೆಟಿಗನ ಬೇಸರ

Exit mobile version