ಧರ್ಮಶಾಲಾ: ಹಾರ್ದಿಕ್ ಪಾಂಡ್ಯ ಪಾದದ ಗಾಯದಿಂದ ಬಳಲುತ್ತಿರುವ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಗಾಯದ ಸಮಸ್ಯೆ ತಲೆದೋರಿದೆ ಎನ್ನಲಾಗಿದೆ. ಭಾರತದ ಮತ್ತೊಬ್ಬ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಧರ್ಮಶಾಲಾದಲ್ಲಿ ನಡೆಯುವ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಕ್ಕೆ ಅವರು ಲಭ್ಯರಿದ್ದಾರೆಯೇ ಎಂಬುದರ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಒಂದು ವೇಳೆ ಅವರು ಅಲಭ್ಯರಾದರೆ ತಂಡಕ್ಕೆ ದೊಡ್ಡ ಹಿನ್ನಡೆ ಉಂಟಾಗಲಿದೆ.
ರವೀಂದ್ರ ಜಡೇಜಾ 2022 ರ ಟಿ 20 ವಿಶ್ವಕಪ್ನಿಂದ ಮೊಣಕಾಲು ಸಮಸ್ಯೆಯಿಂದಾಗಿ ಹೊರಗುಳಿದಿದ್ದರು. ಅವರ ಅಲಭ್ಯತೆ ತಂಡಕ್ಕೆ ಸಾಕಷ್ಟು ಸಮಸ್ತೆ ಮಾಡಿತ್ತು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಮತ್ತು ಫಿಟ್ನೆಸ್ ಕಂಡುಕೊಂಡಿದ್ದರೂ ಮೊಣಕಾಲು ನೋವಿನ ಸಮಸ್ಯೆ ಮತ್ತೊಮ್ಮೆ ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ಅವರು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಎಡ ಮೊಣಕಾಲಿಗೆ ಐಸ್ ಪ್ಯಾಕ್ ಹಚ್ಚಿಕೊಂಡಿದ್ದು ಕಂಡು ಬಂದಿತ್ತು.
ಈ ಸುದ್ದಿಗಳನ್ನೂ ಓದಿ
IPL 2024 : ಚುನಾವಣೆ ಅಡಚಣೆ; ಮುಂದಿನ ಐಪಿಎಲ್ ವಿದೇಶಕ್ಕೆ ಶಿಫ್ಟ್? ಬಿಸಿಸಿಐ ಸ್ಪಷ್ಟನೆ ಏನು?
ಧರ್ಮಶಾಲಾ ಪಿಚ್ ದಾಖಲೆ ಹೇಗಿದೆ? ಭಾರತ-ಕಿವೀಸ್ ಸಂಭಾವ್ಯ ತಂಡ ಹೀಗಿದೆ
‘ತಂಡ ಮೊದಲು, ದಾಖಲೆ ಆ ಮೇಲೆ’ ಕೊಹ್ಲಿಗೆ ಬುದ್ಧಿವಾದ ಹೇಳಿದ ಟೆಸ್ಟ್ ಸ್ಪೆಷಲಿಸ್ಟ್
ಗಾಯವು ಗಂಭೀರವಲ್ಲ ಮತ್ತು ಅವರು ಹಾರ್ದಿಕ್ ಪಾಂಡ್ಯ ಅವರಂತೆ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಕೆಲವು ಹಂತದಲ್ಲಿ ಅವರಿಗೆ ರೆಸ್ಟ್ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆತಂಕ ಇಲ್ಲ
ಜಡೇಜಾ ಆರೋಗ್ಯವಾಗಿದ್ದಾರೆ. ಆಟಗಾರರೊಬ್ಬರು ಶಸ್ತ್ರಚಿಕಿತ್ಸೆಗೆ ಒಳಗಾದಾಗ, ದೀರ್ಘಕಾಲೀನ ಆರೈಕೆಯ ಅಗತ್ಯವಿದೆ. ಮೊಣಕಾಲು ಗಾಯಗಳು ಬೆನ್ನುನೋವನ್ನು ಉಂಟುಮಾಡುತ್ತವೆ. ಅದಕ್ಕಾಗಿಯೇ ಅವರು ಐಸ್ ಪ್ಯಾಕ್ ಇಟ್ಟುಕೊಂಡಿದ್ದರು . ಅವರ ಗಾಯದ ಬಗ್ಗೆ ತಕ್ಷಣದ ಕಾಳಜಿ ಇಲ್ಲ. ವೈದ್ಯಕೀಯ ತಂಡ ಮತ್ತು ಫಿಸಿಯೋಗಳು ಜಡೇಜಾ ಸೇರಿದಂತೆ ಎಲ್ಲಾ ಆಟಗಾರರ ಮೇಲೆ ನಿಗಾ ಇಟ್ಟಿದ್ದಾರೆ, “ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರವೀಂದ್ರ ಜಡೇಜಾಗೆ ವಿಶ್ರಾಂತಿ ಸಿಗಲಿದೆಯೇ?
ಗಾಯದ ಸಮಸ್ಯೆಯ ಹೊರತಾಗಿಯೂ, ರವೀಂದ್ರ ಜಡೇಜಾ ಭಾನುವಾರ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಲಭ್ಯವಿರುತ್ತಾರೆ. ಆದಾಗ್ಯೂ, ಹೆಚ್ಚಿನ ಕೆಲಸದ ಹೊರೆಯೊಂದಿಗೆ, ಅವರು ನಂತರದ ಹಂತಗಳಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ, ಬಹುಶಃ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ನೆದರ್ಲ್ಯಾಂಡ್ಸ್ ತಂಡ ದುರ್ಬಲ ತಂಡವಾಗಿರುವ ಕಾರಣ ಕೆಲವೊಂದು ಆಟಗಾರರಿಗೆ ವಿಶ್ರಾಂತಿ ದೊರೆಯುವ ಸಾಧ್ಯತೆಗಳಿವೆ.
ಜಡೇಜಾ ಭಾರತದ ತಂಡದ ಅಗತ್ಯ ವೈಟ್-ಬಾಲ್ ಸ್ಪಿನ್ನರ್ ಆಗಿದ್ದು, ಅವರು ಎಡಗೈ ಸ್ಪಿನ್ ಮಾತ್ರವಲ್ಲದೆ ಬ್ಯಾಟಿಂಗ್ ಮತ್ತು ಅಸಾಧಾರಣ ಫೀಲ್ಡಿಂಗ್ ಅನ್ನು ಮಾಡುತ್ತಾರೆ . ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಇಂತಹ 3ಡಿ ಆಟಗಾರರು ನಿರ್ಣಾಯಕ ಎನಿಸಿಕೊಳ್ಳುತ್ತಾರೆ.
ಭಾರತ ತಂಡ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿದ ನಂತರ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ರವೀಂದ್ರ ಜಡೇಜಾ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ 7 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಕೆಲವೊಂದು ನಿರ್ಣಾಯಕ ಫೀಲ್ಡಿಂಗ್ ಕೂಡ ಮಾಡಿದ್ದಾರೆ.
“ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗುತ್ತದೆಯೇ ಎಂಬುದು ತಂಡದ ಮ್ಯಾನೇಜ್ಮೆಂಟ್ಗೆ ಬಿಟ್ಟ ವಿಚಾರ. ಆದರೆ ನಿರ್ಣಾಯಕ ಪಂದ್ಯಗಳು ಬರುತ್ತಿರುವುದರಿಂದ ಜಡೇಜಾ ನಮಗೆ ಬಹಳ ಮುಖ್ಯವಾದ ಆಟಗಾರ. ಬಹುಶಃ, ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿದ ನಂತರ, ಆಟಗಾರರನ್ನು ನಾಕೌಟ್ ಹಂತಕ್ಕೆ ತಾಜಾವಾಗಿಡಲು ಬದಲಾವಣೆ ಮಾಡಬಹುದು, “ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.