ಲಂಡನ್ : ಭಾರತದ ಮಹಿಳಾ ಫೆನ್ಸರ್ ಭವಾನಿ ದೇವಿ ಇಲ್ಲಿ ನಡೆಯುತ್ತಿರುವ Commonwealth Fencing Championship ಸರ್ಧೆಯ ವೈಯಕ್ತಿಕ ಸಬ್ರೆ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಬುಧವಾರ ನಡೆದ ಸ್ಪರ್ಧೆಯಲ್ಲಿ ಅವರು ವಿಶ್ವದ ಎರಡನೇ Rank ಪಡೆದಿರುವ ಆಟಗಾರ್ತಿ ಆಸ್ಟ್ರೇಲಿಯಾದ ವೆರೊನಿಕಾ ವಸಿಲೇವಾ ಅವರನ್ನು ೧೫-೧೦ ಅಂಕಗಳಿಂದ ಮಣಿಸಿ ಪದಕ ಗೆದ್ದರು. ಭವಾನಿ ದೇವಿ ಅವರು ಕಳೆದ ಬಾರಿಯೂ ಇದೇ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಹೀಗಾಗಿ ತಮ್ಮ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಂತಾಗಿದೆ.
ಚೆನ್ನೈ ಮೂಲದ ಭವಾನಿ ದೇವಿ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಏಕೈಕ ಭಾರತಿಯ ಫೆನ್ಸರ್ ಎಂಬುದಾಗಿ ಖ್ಯಾತಿ ಗಳಿಸಿದ್ದರು. ಹಂಗೇರಿಯಲ್ಲಿ 2020ರಲ್ಲಿ ನಡೆದ ಫೆನ್ಸಿಂಗ್ ವಿಶ್ವ ಕಪ್‌ನ ಕ್ವಾರ್ಟರ್–ಫೈನಲ್ ತಲುಪಿದ್ದ ಭವಾನಿ ದೇವಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ್ದರು.
ಚಾಂಪಿಯನ್ ಪಟ್ಟ ಗಳಿಸಿದ ನಂತರ ಮಾತನಾಡಿರುವ ಭವಾನಿ, “ ಇಲ್ಲಿ ನನಗೆ ಕಠಿಣ ಸವಾಲುಗಳು ಎದುರಾದವು. ಅವೆಲ್ಲವನ್ನೂ ಮೀರಿ ಚಾಂಪಿಯನ್‌ಪಟ್ಟ ಗಳಿಸಿದೆ. ಭಾತಕ್ಕೆ ಮತ್ತೊಂದು ಚಿನ್ನವನ್ನುದ ದೊರಿಕಿಸಿಕೊಟ್ಟೆ. ಗೆಲುವು ಸಾಧಿಸಿ ಭಾರತಕ್ಕೆ ಮತ್ತೊಮ್ಮೆ ಚಿನ್ನದ ಪದಕ ದಕ್ಕಿಸಿಕೊಡುವಲ್ಲಿ ಯಶಸ್ವಿಯಾಗಿರುವುದಕ್ಕೆ ಸಂತಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇನೆ,” ಎಂದು ಹೇಳಿದರು.
ಉತ್ತಮ ಪ್ರದರ್ಶನ
ಭಾರತದ ಪ್ರತಿಭಾವಂತ ಫೆನ್ಸರ್ ಆಗಿರುವ ಭವಾನಿ ದೇವಿ ಅವರು ೨೦೨೨ರಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಸ್ತಾಂಬುಲ್‌ನಲ್ಲಿ ನಡೆದ ಫೆನ್ಸಿಂಗ್ ವಿಶ್ವ ಕಪ್‌ನಲ್ಲಿ ಅವರು ೨೩ನೇ ಸ್ಥಾನ ಪಡೆದಿದ್ದರು. ಹೀಗಾಗಿ ಅಂತಿಮ ೩೨ ಸ್ಪರ್ಧಿಗಳ ಪಟ್ಟಿಗೆ ಸೇರಲು ವಿಫಲಗೊಂಡಿದ್ದರು. ಅಂತೆಯೇ ಜುಲೈನಲ್ಲಿ ಈಜಿಪ್ಟ್‌ನಲ್ಲಿ ಕೈರೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದರು. ಅಂತೆಯೇ
ಭಾರತದ ಪ್ರತಿಭಾವಂತ ಫೆನ್ಸರ್ ಆಗಿರುವ ಭವಾನಿ ದೇವಿ ಅವರು ೨೦೨೨ರಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಸ್ತಾಂಬುಲ್‌ನಲ್ಲಿ ನಡೆದ ಫೆನ್ಸಿಂಗ್ ವಿಶ್ವ ಕಪ್‌ನಲ್ಲಿ ಅವರು ೨೩ನೇ ಸ್ಥಾನ ಪಡೆದಿದ್ದರು. ಹೀಗಾಗಿ ಅಂತಿಮ ೩೨ ಸ್ಪರ್ಧಿಗಳ ಪಟ್ಟಿಗೆ ಸೇರಲು ವಿಫಲಗೊಂಡಿದ್ದರು. ಅಂತೆಯೇ ಜುಲೈನಲ್ಲಿ ಈಜಿಪ್ಟ್‌ನಲ್ಲಿ ಕೈರೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದರು. ಅಂತೆಯೇ Commonwealth Fencing Championship ಈ ವರ್ಷದಲ್ಲಿ ಅವರು ಪಾಲ್ಗೊಂಡಿರುವ ೧೦ನೇ ಚಾಂಪಿಯನ್‌ಷಿಪ್ ಆಗಿದೆ. ಈ ಎಲ್ಲ ಪ್ರತಿಷ್ಠಿತ ಟೂರ್ನಿಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ.
ಭಾರತೀಯ ಫೆನ್ಸಿಂಗ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಚಾಂಪಿಯನ್ ಪಟ್ಟ ಅಲಂಕರಿಸಿರುವ ಭವಾನಿ ದೇವಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ” ಮತ್ತೊಂದು ಬಾರಿ ಚಾಂಪಿಯನ್ ಆಗಿರುವ ಭವಾನಿ ದೇವಿ ಅವರಿಗೆ ಅಭಿನಂದನೆಗಳು. ಅವರೊಬ್ಬರು ಉಳಿದವರಿಗೆ ಪ್ರೇರಣೆ. ಫೆನ್ಸರ್ ಆಗಿ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಿರುವ ಹಲವಾರು ಯುವ ಪ್ರತಿಭೆಗಳಿಗೆ ಭವಾನಿ ದೇವಿ ಅವರು ಮಾದರಿಯಾಗಿದ್ದಾರೆ. ಅವರ ಸಾಧನೆಯಿಂದಾಗಿ ಭಾರತದಲ್ಲಿ ಫೆನ್ಸಿಂಗ್ ಕ್ರೀಡೆ ಬೆಳೆಯುತ್ತಿದೆ ಎಂದು ಹೇಳುವುದಕ್ಕೆ ಸಾಧ್ಯವಿದೆ, ಅಂತೆಯೇ ಭವಿಷ್ಯದಲ್ಲಿ ಒಲಿಂಪಿಕ್ಸ್ ಸೇರಿದಂತೆ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಭಾರತ ಸ್ಪರ್ಧಿಸಲಿದೆ,” ಎಂದು ಹೇಳಿದರು.
ಏನಿದು Commonwealth Fencing Championship?
ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ೧೯೭೯ರಲ್ಲಿ ಫೆನ್ಸಿಂಗ್‌ಗೆ ಮಾನ್ಯತೆ ನೀಡಿತ್ತು. ಅಲ್ಲಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ Commonwealth Fencing Championship ನಡೆದುಕೊಂಡು ಬರುತ್ತಿದೆ. ಇದು ಕಾಮನ್ವೆಲ್ತ್ ಗೇಮ್ಸ್ ರೀತಿಯಲ್ಲೇ ನಡೆಯುವ ಚಾಂಪಿಯನ್‌ಷಿಪ್ ಆಗಿದೆ.
ಇದನ್ನೂ ಓದಿ | CWG – 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತದ ಲಾನ್ ಬೌಲ್ ತಂಡ