ದುಬೈ : ಭಾರತದ ಮಧ್ಯಮ ಕ್ರಮಾಂಕದ ಬೌಲರ್ ಭುವನೇಶ್ವರ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಪವರ್ ಪ್ಲೇ ಅವಧಿಯಲ್ಲಿ ಎದುರಾಳಿ ತಂಡದ ವಿಕೆಟ್ ಕಬಳಿಸುವಲ್ಲಿ ಅವರು ನಿಸ್ಸೀಮರು. ತಮ್ಮ ಸ್ವಿಂಗ್ ಎಸೆತಗಳ ಮೂಲಕ ಬ್ಯಾಟರ್‌ಗಳನ್ನು ತಲ್ಲಣಗೊಳಿಸಿ ವಿಕೆಟ್ ಕಬಳಿಸುವುದು ಅವರ ತಂತ್ರವಾಗಿದೆ. ಅಂತೆಯೇ ಪಾಕಿಸ್ತಾನ ವಿರುದ್ಧ ಭಾನುವಾರ ನಡೆದ ಏಷ್ಯಾ ಕಪ್ ಪಂದ್ಯದಲ್ಲಿಯೂ ಅವರು ನಾಲ್ಕು ವಿಕೆಟ್ ತಮ್ಮದಾಗಿಸಕೊಂಡಿದ್ದಾರೆ. ಅವರ ಮೂಲಕ ಭಾರತ ಪರ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.
ಭಾನುವಾರದ ಪಂದ್ಯದ ನಾಲ್ಕು ವಿಕೆಟ್‌ಗಳೊಂದಿಗೆ ಪಾಕಿಸ್ತಾನ ವಿರುದ್ಧ ಟಿ೨೦ ಮಾದರಿಯಲ್ಲಿ ಅವರು ೯ ವಿಕೆಟ್ ಉರುಳಿಸಿದಂತಾಗಿದೆ. ಇದು ಭಾರತದ ಬೌಲರ್‌ಗಳ ಪರ ಗರಿಷ್ಠ ಸಾಧನೆಯಾಗಿದೆ. ಇನ್ನು ಭಾನುವಾರದ ಪಂದ್ಯದ ಹೀರೂ, ಹಾರ್ದಿಕ್ ಪಾಂಡ್ಯ ಅವರು ಏಳು ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹಾಲಿ ಏಷ್ಯಾ ಕಪ್ ಪಂದ್ಯದಲ್ಲಿ ಅವರು ೩ ತಮ್ಮದಾಗಿಸಿಕೊಂಡಿದ್ದರು. ಮಾಜಿ ವೇಗಿ ಇರ್ಫಾನ್ ಪಠಾಣ್ ಅವರು ಈ ಸಾಲಿನಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಟಿ೨೦ ಮಾದರಿಯಲ್ಲಿ ಪಾಕಿಸ್ತಾನ ತಂಡ ಆರು ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ |