ಹೈದರಾಬಾದ್: ಬಿಗ್ ಬಾಸ್ ತೆಲುಗು (Bigg Boss Telugu 7) ಸೀಸನ್ 7 ಶೋ ಶೀಘ್ರದಲ್ಲೇ ಆರಂಭವಾಗಲಿದೆ. ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ(Akkineni Nagarjuna) ಅವರು ಈ ಶೋ ನಿರೂಪಣೆ ಮಾಡಲಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಆಂಧ್ರದ ವೈ. ವೇಣುಗೋಪಾಲ ರಾವ್ (Venugopal Rao) ಅವರು ಈ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಕೆಲ ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ವದಂತಿ ಹರಡುತ್ತಿದೆ. ಈ ಮಧ್ಯೆ ಕ್ರಿಕೆಟಿಗ ವೇಣುಗೋಪಾಲ ರಾವ್ ಕೂಡ ಈ ಮೆಗಾ ಶೋಗೆ ಆಗಮಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಅವರ ಪಾಲ್ಗೊಳ್ಳುವಿಕೆಗೆ ಬಿಗ್ ಬಾಸ್ ವ್ಯವಸ್ಥಾಪಕರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತೆಲುಗಿನ ಕೆಲ ಮಾಧ್ಯಮಗಳು ವರದಿ ಮಾಡಿವೆ. ಒಂದೊಮ್ಮೆ ವೇಣುಗೋಪಾಲ ರಾವ್ ಅವರು ಅವರು ಈ ಶೋನಲ್ಲಿ ಭಾಗವಹಿಸಿದರೆ ಬಿಗ್ ಬಾಸ್ ಪ್ರವೇಶಿಸಿದ ಮೊದಲ ಟೀಮ್ ಇಂಡಿಯಾ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಕರ್ನಾಟಕದ ಕ್ರಿಕೆಟಿಗ ಎನ್‌ಸಿ ಅಯ್ಯಪ್ಪ ಅವರು ಕನ್ನಡದ ಬಿಗ್ ಬಾಸ್ನಲ್ಲಿ ಭಾಗವಹಿಸಿದ್ದರು. ಆದರೆ ಅವರು ಭಾರತ ತಂಡದ ಆಡಿಲ್ಲ. ಕೇವಲ ಪ್ರಥಮ ದರ್ಜೆ, ಲಿಸ್ಟ್ ಎ ಕ್ರಿಕೆಟ್ನಲ್ಲಿ ಮಾತ್ರ ಆಡಿದ್ದರು.
2005ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದರು. 16 ಏಕದಿನ ಪಂದ್ಯಗಳನ್ನು ಆಡಿದ ಅವರು 218 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸೇರಿದೆ. 61 ರನ್ ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಐಪಿಎಲ್ನಲ್ಲಿ 65 ಪಂದ್ಯಗಳನ್ನು ಆಡಿದ್ದು 985 ರನ್ ಬಾರಿಸಿದ್ದಾರೆ. 3 ಅರ್ಧಶತಕ ಒಳಗೊಂಡಿದೆ. ಐಪಿಎಲ್ನಲ್ಲಿ ಬೌಲಿಂಗ್ ಕೂಡ ಮಾಡಿರುವ ಅವರು 6 ವಿಕೆಟ್ ಪಡೆದಿದ್ದಾರೆ 23ರನ್ಗೆ 2 ವಿಕೆಟ್ ಕೆಡವಿದ್ದು ಉತ್ತಮ ಬೌಲಿಂಗ್ ಸಾಧನೆಯಾಗಿದೆ.
ಇದನ್ನೂ ಓದಿ Asia Cup 2023: ಏಷ್ಯಾಕಪ್ ವೇಳಾಪಟ್ಟಿ ಪ್ರಕಟಕ್ಕೆ ಕ್ಷಣಗಣನೆ; ಭಾರತ-ಪಾಕ್ ಪಂದ್ಯದ ತಾಣ ನಿಗದಿ
7ನೇ ಆವೃತ್ತಿಯ ತೆಲುಗು ಬಿಗ್ಬಾಸ್ ಸೆಪ್ಟೆಂಬರ್ 7ರಿಂದ ಆರಂಭವಾಗಲಿದೆ ಎನ್ನಲಾಗಿದೆ. ವೇಣುಗೋಪಾಲ ರಾವ್ ಅವರು ಬಿಗ್ ಬಾಸ್ ಪ್ರವೇಶದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. 41 ವರ್ಷದ ಮಾಜಿ ಆಟಗಾರ ವೇಣು ಅವರು ತೆಲುಗು ಬಾಷೆಯಲ್ಲಿ ಕ್ರಿಕೆಟ್ ವೀಕ್ಷಕ ವಿವರಣಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯಕ್ಕೂ ಎಂಟ್ರಿ ಕೊಟ್ಟಿರುವ ಅವರು ಇತ್ತೀಚೆಗಷ್ಟೇ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.