Site icon Vistara News

Mayank Agarwal: ನೀರಿನ ಬಾಟಲ್ ಫೋಟೊ ಹಂಚಿಕೊಂಡು ರಿಸ್ಕ್​​ ತೆಗೆದುಕೊಳ್ಳಲಾರೆ ಎಂದ ​​ ಅಗರ್ವಾಲ್

Mayank Agarwal

ಚೆನ್ನೈ: ಕ್ರಿಕೆಟಿಗ ಮಾಯಾಂಕ್​ ಅಗರ್ವಾಲ್(Mayank Agarwal)​ ರಣಜಿ(Ranji Trophy 2023-24) ಆಡುವ ಸಲುವಾಗಿ ಕಳೆದ ತಿಂಗಳು ಅಗರ್ತಲಾದಿಂದ ಸೂರತ್‌ಗೆ ತೆರಳುವ ವಿಮಾನದಲ್ಲಿ ನೀರು ಎಂದು ಭಾವಿಸಿ ರಾಸಾಯನಿಕ ದ್ರಾವಣವೊಂದನ್ನು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರಗಳ ಬಳಿಕ ಚೇತರಿಕೆ ಕಂಡು ಮತ್ತೆ ಕ್ರಿಕೆಟ್​ ಆಡಲು ಆರಂಭಿಸಿದ್ದರು. ಇದೀಗ ವಿಮಾನದಲ್ಲಿ ಪ್ರಯಾಣಿಸುವ ಫೋಟೊವೊಂದನ್ನು ಅವರು ತಮ್ಮ ಟ್ವಿಟರ್​ ಎಕ್ಸ್​ನಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೊ ವೈರಲ್ ಆಗಿದೆ.

ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್​ ಫೈನಲ್​ ತಲುಪಿರುವ ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ವಿದರ್ಭ ವಿರುದ್ಧ ಪಂದ್ಯವನ್ನಾಡಲಿದೆ. ಈ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯವನ್ನಾಡಲು ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಾಯಾಂಕ್​ ಅಗರ್ವಾಲ್ ಅವರು ನೀರಿನ ಬಾಟಲ್​ ಒಂದರ ಫೋಟೊವನ್ನು ಕ್ಲಿಕ್ಕಿಸಿ ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಯಬ್ಬಾ ಯಾವುದೇ ಕಾರಣಕ್ಕೂ ರಿಸ್ಕ್​​ ತೆಗೆದುಕೊಳ್ಳಲು ಬಯಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ. ಅಂದಿನ ಘಟನೆಯಿಂದ ಹೆದರಿರುವ ಅಗರ್ವಾಲ್ ಸ್ವತಃ ತಾವೇ ನೀರಿನ ಬಾಟಲ್​ ಹಿಡಿದು ಪ್ರಯಾಣಿಸಿದ್ದಾರೆ.

​ಜನವರಿ 29ರಂದು ಅಗರ್ತಲಾದಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಯಾಂಕ್‌ ಅಗರ್ವಾಲ್‌ ದಿಢೀರ್‌ ಅಸ್ವಸ್ಥರಾಗಿದ್ದರು. ತಮ್ಮ ಸೀಟಿನ ಮುಂಭಾಗದಲ್ಲಿದ್ದ ಬಾಟಲಿಯೊಂದನ್ನು ತೆಗೆದು, ಅದರಲ್ಲಿದ್ದ ಪಾನೀಯವನ್ನು ನೀರು ಎಂದು ಭಾವಿಸಿ ಕುಡಿದಿದ್ದರು. ಅದು ಶೌಚಾಲಯವನ್ನು ಸ್ವತ್ಛಗೊಳಿಸುವ ದ್ರಾವಣವಾಗಿತ್ತು. ವಿಮಾನ ಟೇಕ್‌ ಆಫ್ ಆಗದ ಕಾರಣ ಅಗರ್ವಾಲ್‌ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿತ್ತು. ಆರಂಭದಲ್ಲಿ ಅಗರ್ವಾಲ್​ಗೆ ವಿಶಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿತ್ತು. ಬಳಿಕ ಸತ್ಯಾಂಶ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ IND vs ENG: ನಾಲ್ಕನೇ ಪಂದ್ಯಕ್ಕೆ ಭಾರತ ತಂಡದ ಸ್ಟಾರ್​ ವೇಗಿಗೆ ವಿಶ್ರಾಂತಿ!

ಘಟನೆಗೆ ಸಂಬಂಧಿಸಿದಂತೆ ಅಗರ್ವಾಲ್‌ ತಮ್ಮ ಮ್ಯಾನೇ ಜರ್‌ ಮೂಲಕ ಎನ್‌ಸಿಸಿಪಿಎಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ನಾವು ತನಿಖೆ ಕೈಗೆತ್ತಿ ಕೊಳ್ಳ ಲಿದ್ದೇವೆ ಎಂದು ಪಶ್ಚಿಮ ತ್ರಿಪುರ ಎಸ್‌ಪಿ ಕಿರಣ್‌ ಕುಮಾರ್‌ ತಿಳಿಸಿದ್ದಾರೆ. ಅಗರ್ವಾಲ್​ ಅನುಪಸ್ಥಿತಿಯಲ್ಲಿ ರೈಲ್ವೇಸ್‌ ವಿರುದ್ಧದ ಪಂದ್ಯದಲ್ಲಿ ಉಪನಾಯಕ ನಿಕಿನ್‌ ಜೋಸ್‌ ತಂಡವನ್ನು ಮುನ್ನಡೆಸಿದ್ದರು. ಚೆನ್ನೈ ವಿರುದ್ಧದ ಪಂದ್ಯಕ್ಕೆ ಅಗರ್ವಾಲ್​ ಮತ್ತೆ ತಂಡ ಸೇರಿದ್ದರು.

ಕರ್ನಾಟಕ ತಂಡ


ಮಯಾಂಕ್ ಅಗರ್ವಾಲ್ (ನಾಯಕ), ರವಿಕುಮಾರ್ ಸಮರ್ಥ್, ನಿಕಿನ್ ಜೋಸ್, ಮನೀಶ್ ಪಾಂಡೆ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಅನೀಶ್ ಕೆವಿ, ವೈಶಾಕ್ ವಿಜಯಕುಮಾರ್, ವಾಸುಕಿ ಕೌಶಿಕ್, ಕೆ ಶಶಿಕುಮಾರ್, ಸುಜಯ್ ಸಾತೇರಿ (ವಿಕೆಟ್ ಕೀಪರ್), ಎಂ ವೆಂಕಟೇಶ್, ವಿಧ್ವತ್ ಕಾವೇರಪ್ಪ , ಕಿಶನ್ ಬೇಡರೆ, ರೋಹಿತ್ ಕುಮಾರ್, ಹಾರ್ದಿಕ್ ರಾಜ್.

Exit mobile version