ಹೈದರಾಬಾದ್: ವಿಶ್ವಕಪ್ (ICC World Cup 2023) ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಕೆಲವು ಆಸನಗಳು ಭಯಾನಕ ಸ್ಥಿತಿಯಲ್ಲಿವೆ ಎಂಬುದು ಸಾಬೀತಾತಿದೆ. ಸೀಟುಗಳ ಮೇಲೆ ಹಕ್ಕಿಗಳ ಹಿಕ್ಕೆಗಳು ಬಿದ್ದಿವೆ. 3 ನಿರ್ಣಾಯಕ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗುವ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹೀಗಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಹೈದಾರಾಬಾದ್ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಟೀಕೆಗಳು ಎದುರಾಗಿವೆ.
ಹೈದರಾಬಾದ್ನಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಆದರೆ ಹಣಾಹಣಿ ನಡೆಯುವ ಉಪ್ಪಲ್ ಕ್ರೀಡಾಂಗಣದಲ್ಲಿನ ಆಸನಗಳ ಶೋಚನೀಯ ಸ್ಥಿತಿಯಲ್ಲಿವೆ. ಬಿಸಿಸಿಐಗೆ ಭಾರಿ ತಲೆನೋವನ್ನುಂಟು ಮಾಡಲಿದೆ. ಕಳಪೆ ಸೀಟುಗಳು ಮತ್ತು ಪಕ್ಷಿಗಳ ಹಿಕ್ಕೆ ತುಂಬಿರುವ ಪ್ರದೇಶ ಇದಾಗಿದೆ ಇದು ಕ್ರೀಡಾಂಗಣದ ನಿರ್ವಹಣೆ ಕೊರತೆಯಾಗಿದ್ದು. ಅಭಿಮಾನಿಗಳಿಗೆ ದೊಡ್ಡ ಸಮಸ್ಯೆಯಾಗಿದೆ.
ಕೇವಲ 2 ದಿನಗಳು ಉಳಿದಿರುವಾಗ, ಕ್ರೀಡಾಂಗಣದ ಸಿಬ್ಬಂದಿ ಆಸನಗಳನ್ನು ಸ್ವಚ್ಛಗೊಳಿಸುವತ್ತ ಗಮನ ಹರಿಸಬೇಕಾಗುತ್ತದೆ/ ಅಭಿಮಾನಿಗಳು ಕುಳಿತು ಪಂದ್ಯಗಳನ್ನು ಆನಂದಿಸಲು ಅವುಗಳನ್ನು ವಾಸಯೋಗ್ಯವಾಗಿಸಬೇಕಾಗುತ್ತದೆ. ಆದರೆ ಆ ಕೆಲಸ ಇನ್ನೂ ನಡೆದಿಲ್ಲ ಎಂಬುದೇ ಅಚ್ಚರಿಯ ವಿಷಯ.
Nothing much has changed in Uppal stadium. Only some window dressing and spectator comfort still not taken care of in full.#worldcup2023 pic.twitter.com/RiPyeRsfEn
— C.VENKATESH (@C4CRICVENKATESH) October 3, 2023
ಹೈದರಾಬಾದ್ ಮೂರು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುವುದರ ಜೊತೆಗೆ 2 ವಿಶ್ವಕಪ್ ಅಭ್ಯಾಸ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಈ ಕಳಪೆ ಆಸನ ಪರಿಸ್ಥಿತಿಗಳು ಅಭಿಮಾನಿಗಳ ಕೋಪವನ್ನು ತರಿಸಿದೆ ಎಂದು ವರದಿಯಾಗಿದೆ, ಅವರು ಕ್ರೀಡಾಂಗಣಗಳ ಕಳಪೆ ಸ್ಥಿತಿಗೆ ಜಯ್ ಶಾ ಅವರನ್ನು ದೂಷಿಸುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಪ್ರಸ್ತುತ ಹೈದರಾಬಾದ್ನಲ್ಲಿ ಉಳಿದುಕೊಂಡಿದ್ದು, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಮ್ಮ ಎರಡೂ ಅಭ್ಯಾಸ ಪಂದ್ಯಗಳನ್ನು ಆಡಿದೆ. ಬಾಬರ್ ಅಜಮ್ ಮತ್ತು ಬಳಗ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿತು. ಪಂದ್ಯಾವಳಿಯ ಎರಡನೇ ಪೂರ್ವಸಿದ್ಧತಾ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದೆ.
ಇದನ್ನೂ ಓದಿ : ICC World Cup 2023 : ವಿಶ್ವ ಕಪ್ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್ ತಂಡದ ಬಲವೇನು? ದೌರ್ಬಲ್ಯವೇನು?
ಭಾರತ ಕ್ರಿಕೆಟ್ ತಂಡದ ಬಗ್ಗೆ ಹೇಳುವುದಾದರೆ, ಮೆನ್ ಇನ್ ಬ್ಲೂ ತಂಡವು ಮಳೆಯಿಂದಾಗಿ ಒಂದೇ ಒಂದು ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಆಡಲು ವಿಫಲವಾಗಿದೆ. ಗುವಾಹಟಿ ಮತ್ತು ತಿರುವನಂತಪುರದಲ್ಲಿ ನಡೆದ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಎರಡೂ ಪಂದ್ಯಗಳು ರದ್ದಾಗಿದ್ದವು. ಅಕ್ಟೋಬರ್ 5ರಂದು ಅಹ್ಮದಾಬಾದ್ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಹೈದರಾಬಾದ್ನಲ್ಲಿ ವಿಶ್ವಕಪ್ ಪಂದ್ಯಗಳು
- ಪಾಕಿಸ್ತಾನ ವಿರುದ್ಧ ನೆದರ್ಲ್ಯಾಂಡ್ಸ್ – ಅಕ್ಟೋಬರ್ 6
- ನ್ಯೂಜಿಲೆಂಡ್ ವಿರುದ್ಧ ನೆದರ್ಲ್ಯಾಂಡ್ಸ್ – ಅಕ್ಟೋಬರ್ 9
- ಪಾಕಿಸ್ತಾನ ವಿರುದ್ಧ ಶ್ರೀಲಂಕಾ – ಅಕ್ಟೋಬರ್ 10.