ನವದೆಹಲಿ: ಭಾರತದ ಸಾರ್ವಕಾಲಿಕ ಶ್ರೇಷ್ಠ ಎಡಗೈ ಸ್ಪಿನ್ನರ್ಗಳಲ್ಲಿ ಒಬ್ಬರಾದ ಭಾರತದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಸೋಮವಾರ ನಿಧನರಾದರು. ಭಾರತದ ಲೆಜೆಂಡರಿ ಕ್ರಿಕೆಟಿಗ 77 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬೇಡಿ ಅವರೊಂದಿಗೆ ಆಡಿದ ಭಾರತದ ಮಾಜಿ ನಾಯಕ ಕಪಿಲ್ ದೇವ್ ಸುದ್ದಿಸಂಸ್ಥೆಯೊಂದಕ್ಕೆ ವಿಶೇಷ ಸಂದರ್ಶನ ನೀಡಿ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಯಾಕೆ ಬಿಷನ್ ಅವರು ಭಾರತ ತಂಡದ ಶ್ರೇಷ್ಠ ಆಟಗಾರ ಎಂಬುದನ್ನು ವಿವರಿಸಿದ್ದಾರೆ.
“ಬಿಷನ್ ಜಿ ಅವರನು ನನಗೆ ಸೇರಿದಂತೆ ದೇಶದ ಒಂದು ತಲೆಮಾರಿನ ಕ್ರಿಕೆಟ್ ಆಟಗಾರರಿಗೆ ಸ್ಫೂರ್ತಿ ತುಂಬಿದವರು. ಅವರೊಂದಿಗೆ ಆಡಲು ಮತ್ತು ಒಂದೇ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳಲು ನಾನು ಅದೃಷ್ಟಶಾಲಿಯಾಗಿದ್ದೆ. ಅವರು ನನ್ನ ನಾಯಕ, ನನ್ನ ಹೀರೋ ಮತ್ತು ನಾನು ಯಾವಾಗಲೂ ನೋಡುತ್ತಿದ್ದ ವ್ಯಕ್ತಿ, ಮತ್ತು ಅವರ ಆಟದಿಂದ ಅಸಂಖ್ಯಾತ ಪಾಠಗಳನ್ನು ಕಲಿತುಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾನು ಆ ವ್ಯಕ್ತಿಯನ್ನು ನಿಜವಾಗಿಯೂ ಗೌರವಿಸುತ್ತಿದ್ದೆ. ಅವರ ನಿಧನ ಕ್ರಿಕೆಟ್ ಜಗತ್ತಿಗೆ ದೊಡ್ಡ ನಷ್ಟ. ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಪಾತ್ರವಾಗಿದ್ದರು ಎಂದು ಕಪಿಲ್ ದೇವ್ ಹೇಳಿದ್ದಾರೆ.
ಬಿಷನ್ ಸಿಂಗ್ ಅವರು 1966ರಲ್ಲಿ ಈಡನ್ ಗಾರ್ಡನ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು 67 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 1974 ರಲ್ಲಿ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಅಂತಾರಾಷ್ಟ್ರೀಯ (ಒಡಿಐ) ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ 10 ಏಕದಿನ ಪಂದ್ಯಗಳನ್ನು ಆಡಿದ್ದರು.
ಇದನ್ನೂ ಓದಿ : Bishan Singh Bedi : ಭಾರತ ತಂಡದ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ನಿಧನ
ಬಿಷನ್ ಸಿಂಗ್ ಬೇಡಿಯ ಕ್ರಿಕೆಟ್ ಶೈಲಿಯ ಬಗ್ಗೆ ಮಾತನಾಡಿದ ಕಪಿಲ್ ದೇವ್, “ಅವರು ಅತ್ಯಂತ ವರ್ಚಸ್ವಿ ನಾಯಕರಲ್ಲಿ ಒಬ್ಬರಾಗಿದ್ದರು. ಕ್ರಿಕೆಟ್ ಕ್ಷೇತ್ರದ ಅನೇಕರು ಅವರ ಶೈಲಿಯನ್ನು ಪುನರಾವರ್ತಿಸಲು ಪ್ರಯತ್ನಿಸಿದ್ದರು. ಅವರ ಬೌಲಿಂಗ್ನಲ್ಲಿ ತುಂಬಾ ಲಯವಿತ್ತು. ಅವರು ತಮ್ಮ ಆರಾಮದಾಯಕ ಮತ್ತು ಉತ್ತಮ ಚಲನೆ ಹೊಂದಿದ್ದರು. ಲಯ ಮತ್ತು ನಿಯಂತ್ರಣದೊಂದಿಗೆ ದಿನವಿಡೀ ಬೌಲಿಂಗ್ ಮಾಡಲು ಅವರಿಗೆ ಸಾಧ್ಯವಾಗುತ್ತಿತ್ತು. ಅವರು ಸಾಟಿಯಿಲ್ಲದ ಕೌಶಲ ಹೊಂದಿದ್ದರು. ಅವರು ತಂಡದ ನಾಯಕರಾಗಿದ್ದರು ಮತ್ತು ವಿದೇಶದಲ್ಲಿ ನಡೆದ ಟೆಸ್ಟ್ನಲ್ಲಿ ಭಾರತಕ್ಕೆ ದೊಡ್ಡ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.. ದೃಢನಿಶ್ಚಯ ಮತ್ತು ಆಕ್ರಮಣಶೀಲತೆ ಅವರು ಬಿಟ್ಟುಹೋಗಿರುವ ಪರಂಪರೆ ಎಂದು ಹೇಳಿದ್ದಾರೆ.
ಹಾಸ್ಯಪ್ರವೃತ್ತಿ ಹೊಂದಿದ್ದ ಆಟಗಾರ
ಮೈದಾನದ ಹೊರಗೆ, ಬೇಡಿ ಅವರು ಅದ್ಭುತ ಮನುಷ್ಯ ಎಂದು ಕಪಿಲ್ ದೇವ್ ಹೇಳಿದ್ದಾರೆ. ಅವರು ಅದ್ಭುತ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದರಿಂದ ಡ್ರೆಸ್ಸಿಂಗ್ ಕೋಣೆಯ ಮನಸ್ಥಿತಿ ಹಗುರವಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ. ಬಿಷನ್ ಅವರು ಯಾವಾಗಲೂ ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ನಮ್ಮ ಆಟಕ್ಕೆ ಪ್ರಾಮುಖ್ಯತೆ ನೀಡುವಂತೆ ಹೇಳುತ್ತಿದ್ದರು. ಆದರೆ ಕ್ರಿಕೆಟ್ ವಿನೋದ ಎಂದು ನಂಬುವಂತೆ ಮಾಡಿದ್ದರು. ಅವರು ಶ್ರೇಷ್ಠ ಆಟಗಾರ ಮತ್ತು ಸಕಾರಾತ್ಮಕ ವ್ಯಕ್ತಿಯಾಗಿದ್ದರು ಎಂಬುದಾಗಿ 1983ರ ವಿಶ್ವ ಕಪ್ ವಿಜೇತ ತಂಡದ ನಾಯಕ ಹೇಳಿದ್ದಾರೆ.
ವ