ನವ ದೆಹಲಿ : ನಾನ್‌ಸ್ಟ್ರೈಕ್ ಎಂಡ್‌ನಲ್ಲಿ ರನ್‌ಔಟ್ ಮಾಡುವುದು ಸರಿಯಾ, ತಪ್ಪಾ ಎಂಬುದು ಸದ್ಯದ ಚರ್ಚೆ. ಅದಕ್ಕೆ ಕಾರಣ ಶನಿವಾರ ನಡೆದ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನ ಏಕ ದಿನ ಪಂದ್ಯಗಳ ಸರಣಿಯ ಕೊನೇ ಪಂದ್ಯ. ಆ ಪಂದ್ಯದಲ್ಲಿ ಭಾರತದ ಬೌಲರ್ ಚಾರ್ಲಿ ಡೀನ್ ಅವರನ್ನು ಅದೇ ರೀತಿ ಔಟ್ ಮಾಡಿದ್ದರು. ಅದಕ್ಕೆ ಇಂಗ್ಲೆಂಡ್ ಆಟಗಾರ್ತಿಯರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಇಯಾನ್ ಬಿಷಪ್ ಆ ಬಗ್ಗೆ ಮಾತನಾಡಿದ್ದು, ಬ್ಯಾಟರ್‌ಗಳು ಸದಾ ಬೌಲರ್‌ಗಳ ಮೇಲೆ ಕಣ್ಣಿಟ್ಟಿರಬೇಕು ಎಂದು ಹೇಳಿದ್ದಾರೆ.
“ಇದು ಸರಳ ಹಾಗೂ ಸುಲಭ ಸೂತ್ರ. ಬೌಲರ್ ಚೆಂಡು ಎಸೆಯುವ ತನಕವೂ ಅವರ ಮೇಳೆ ಕಣ್ಣು ಇಟ್ಟಿರುವುದು ಒಳಿತು. ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಅವರಂತೆ ಚೆಂಡು ಬೌಲರ್ ಕೈಯಿಂದ ಹೊರಕ್ಕೆ ಹೋಗುವ ತನಕವೂ ಕಾಯಬೇಕು. ಇದರ ಬಗ್ಗೆ ಚರ್ಚೆ ನಡೆಸುವ ಅಗತ್ಯವಿಲ್ಲ. ಮಕ್ಕಳಿಗೆ ಹಿರಿಯ ಆಟಗಾರರನ್ನು ನೋಡಿ ಕಲಿಯುವಂತೆ ಹೇಳಿದರೆ ಸಾಕು,” ಎಂದು ಅವರು ಹೇಳಿದರು.
“ವಿಕೆಟ್‌ಗಳ ನಡುವಿನ ಓಡಾಟ (Running between Wickets) ಎಂಬುದು ಒಂದು ಕಲೆ. ಬೌಲರ್ ಚೆಂಡೆಸೆಯುವ ಮೊದಲೇ ಓಡಿಬಿಡಬಹುದು ಎಂದು ಅಂದುಕೊಳ್ಳುವುದು ತಪ್ಪು ಹಾಗೂ ಅದು ಅವಕಾಶದ ದುರ್ಬಳಕೆ. ತಪ್ಪು ಮಾಡಿದ ಮಾಫಿ ಕೇಳುವುದು ಸರಿಯಲ್ಲ,” ಎಂಬುದಾಗಿ ಅವರು ಹೇಳಿದರು.
ಇದನ್ನೂ ಓದಿ | Deepti Sharma | ದೀಪ್ತಿ ಶರ್ಮ ಬೆಂಬಲಕ್ಕೆ ನಿಂತ ಕ್ರಿಕೆಟ್ ನಿಯಮ ರೂಪಿಸುವ ಎಮ್‌ಸಿಸಿ ಕ್ಲಬ್