Site icon Vistara News

HCA: ಈ ತಂಡದ ಆಟಗಾರರು ರಣಜಿ ಟ್ರೋಫಿ ಗೆದ್ದರೆ ಸಿಗಲಿದೆ BMW ಕಾರು​!

HCA president Jagan Mohan Rao

ಹೈದರಾಬಾದ್: ಹೈದರಾಬಾದ್​ ತಂಡದ ಆಟಗಾರರಿಗೆ ಇಲ್ಲಿನ ಕ್ರಿಕೆಟ್ ಅಸೋಷಿಯೇಷನ್(HCA) ಅಧ್ಯಕ್ಷ(HCA president) ಜಗನ್ ಮೋಹನ್ ರಾವ್(Jagan Mohan Rao) ಅವರು ಬಂಪರ್​ ಆಫರ್​ ನೀಡಿದ್ದಾರೆ. ತಂಡವು ಮುಂದಿನ ಮೂರು ವರ್ಷಗಳಲ್ಲಿ ರಣಜಿ ಟ್ರೋಫಿ (Ranji Trophy) ಗೆದ್ದರೆ ಪ್ರತಿಯೊಬ್ಬ ಆಟಗಾರನಿಗೆ BMW ಕಾರು(BMW car) ಮತ್ತು 1 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಪ್ರಸಕ್ತ ಸಾಲಿನ ರಣಿಜಿ ಟ್ರೋಫಿಯಲ್ಲಿ ಹೈದರಾಬಾದ್ ತಂಡ ಪ್ಲೇಟ್ ಗ್ರೂಪ್​ನಲ್ಲಿ ಕಣಕ್ಕಿಳಿದಿತ್ತು. ಇಲ್ಲಿ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ ಮುಂದಿನ ಸೀಸನ್​ಗಾಗಿ ಎಲೈಟ್ ಗ್ರೂಪ್​ಗೆ ಅರ್ಹತೆ ಪಡೆದುಕೊಂಡಿದೆ. ಇದೇ ಸಾಧನೆಗೆ ತಂಡದ ಆಟಗಾರರನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆ (Hyderabad Cricket Association) ಸನ್ಮಾನಿಸಿದೆ. ಇದೇ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ 50,000 ರೂ. ಪ್ರೋತ್ಸಾಹ ಮೊತ್ತ ಮತ್ತು ತಂಡಕ್ಕೆ 10 ಲಕ್ಷ ರೂ. ಬಹುಮಾನ ನೀಡಲಾಯಿತು.

ಆಟಗಾರರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಹೈದರಾಬಾದ್ ಕ್ರಿಕೆಟ್​ ಅಸೋಸಿಯೇಷನ್ ​​ಮುಖ್ಯಸ್ಥ ಜಗನ್ ಮೋಹನ್ ರಾವ್, ಮುಂದಿನ ಮೂರು ವರ್ಷಗಳಲ್ಲಿ ಹೈದರಾಬಾದ್ ತಂಡವು ರಣಜಿ ಟ್ರೋಫಿಯಲ್ಲಿ ಚಾಂಪಿಯನ್​ ಪಟ್ಟಕ್ಕೇರಿದರೆ ಪ್ರತಿಯೊಬ್ಬರಿಗೂ ಭರ್ಜರಿ ಬಹುಮಾನ ನೀಡಲಾಗುವುದು ಎಂದು ಹೇಳಿದರು. ತಂಡ ಕಪ್ ಗೆದ್ದರೆ ಪ್ರತಿ ಆಟಗಾರನಿಗೆ ಬಿಎಂಡಬ್ಲ್ಯು ಕಾರು ನೀಡುತ್ತೇವೆ. ಹಾಗೆಯೇ ತಂಡಕ್ಕೆ 1 ಕೋಟಿ ರೂಪಾಯಿ ನಗದು ಬಹುಮಾನ ನೀಡಲಿದ್ದೇವೆ ಎಂಬುದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ Ranji Trophy: ಅಗರ್ವಾಲ್​ ದ್ವಿಶತಕ; ಬೃಹತ್​ ಮೊತ್ತ ಪೇರಿಸಿದ ಕರ್ನಾಟಕ

ರಣಜಿ ಟ್ರೋಫಿಯ 89 ವರ್ಷಗಳ ಇತಿಹಾಸದಲ್ಲಿ ಹೈದರಾಬಾದ್ ತಂಡ ಕೇವಲ 2 ಬಾರಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. 1937-38 ರಲ್ಲಿ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದಿದ್ದ ಹೈದರಾಬಾದ್ ಬಳಿಕ 1986-87 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಚಾಂಪಿಯನ್​ ಪಟ್ಟ ಅಲಂಕರಿಸಲು ಸಾಧ್ಯವಾಗಲಿಲ್ಲ. ಮತ್ತೆ ಚಾಂಪಿಯನ್​ ಪಟ್ಟ ಅಲಂಕರಿಸುವಂತೆ ಮಾಡಲು ಮೋಹನ್ ರಾವ್ ಆಟಗಾರರಿಗೆ ಈ ಬಹುಮಾನದ ಘೋಷಣೆ ಮಾಡಿದ್ದಾರೆ. ಮುಂದಿನ ಸೀಸನ್​ ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ತಂಡ ಕಪ್​ ಗೆದ್ದರೆ ಪ್ರತಿ ಆಟಗಾರನಿಗೆ BMW ಕಾರು ಸಿಗಲಿದೆ.

ರಣಜಿ ಟ್ರೋಫಿ ಕ್ವಾರ್ಟರ್​ ಫೈನಲ್​ ವೇಳಾಪಟ್ಟಿ ಪ್ರಕಟ


ಪ್ರಸಕ್ತ ಸಾಲಿನ ರಣಜಿ ಟ್ರೋಫಿ (Ranji Trophy 2024) ನಾಕೌಟ್ ಹಂತಕ್ಕೆ ಬಂದು ನಿಂತಿದೆ. 8 ತಂಡಗಳು ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ. ಕ್ವಾರ್ಟರ್​ ಫೈನಲ್ ಪಂದ್ಯಗಳು ಫೆಬ್ರವರಿ 23 ರಿಂದ ಶುರುವಾಗಲಿದ್ದು, ಫೆಬ್ರವರಿ 27 ರವರೆಗೆ ನಡೆಯಲಿದೆ.

ಮೊದಲ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಲಿದೆ. ದ್ವಿತೀಯ ಕ್ವಾರ್ಟರ್ ಫೈನಲ್​ನಲ್ಲಿ ಬರೋಡ ವಿರುದ್ಧ ಮುಂಬೈ ಕಣಕ್ಕಿಳಿಯಲಿದೆ. ತಮಿಳುನಾಡು ಮತ್ತು ಸೌರಾಷ್ಟ್ರ ತಂಡಗಳು ಮೂರನೇ ಮತ್ತು ಮಧ್ಯ ಪ್ರದೇಶ ಮತ್ತು ಆಂಧ್ರ ಪ್ರದೇಶ ತಂಡಗಳು ನಾಲ್ಕನೇ ಕ್ವಾರ್ಟರ್​ ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.

ವೇಳಾಪಟ್ಟಿ

ಕರ್ನಾಟಕ vs ವಿದರ್ಭ (ವಿಸಿಎ ಸ್ಟೇಡಿಯಂ, ನಾಗ್ಪರ)

ಮುಂಬೈ vs ಬರೋಡ (ಎಂಸಿಎ ಸ್ಟೇಡಿಯಂ, ಮುಂಬೈ)

ತಮಿಳುನಾಡು vs ಸೌರಾಷ್ಟ್ರ (ಎಸ್​ಆರ್​ಸಿ ಗ್ರೌಂಡ್, ಕೊಯಂಬತ್ತೂರು)

ಮಧ್ಯ ಪ್ರದೇಶ vs ಆಂಧ್ರ ಪ್ರದೇಶ (ಹೋಲ್ಕರ್ ಸ್ಟೇಡಿಯಂ, ಇಂದೋರ್)

Exit mobile version