Site icon Vistara News

Justin Vicky; ಭಾರ ಎತ್ತುವಾಗಲೇ ದುರಂತ ಸಾವು ಕಂಡ ಬಾಡಿಬಿಲ್ಡರ್​; ಈ ವಿಡಿಯೊ ಭೀಕರ

Bodybuilder Justyn Vicky

ಬಾಲಿ: ಫಿಟ್ನೆಸ್ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದ್ದ ಖ್ಯಾತ ಬಾಡಿಬಿಲ್ಡರ್ ಜಸ್ಟಿನ್ ವಿಕ್ಕಿ(Justin Vicky) ಅವರು ಜಿಮ್​ನಲ್ಲಿ(gym) 210 ಕೆಜಿ ಭಾರ ಎತ್ತುವ ವೇಳೆ ಮಾಡಿಕೊಂಡ ಎಡವಟ್ಟಿನಿಂದ ದುರಂತ ಸಾವು ಕಂಡಿದ್ದಾರೆ. 33 ವರ್ಷದ ವಿಕ್ಕಿ ಇಂಡೋನೇಷಿಯಾದ ಖ್ಯಾತ ಬಾಡಿಬಿಲ್ಡರ್ ಆಗಿದ್ದರು. ಅವರ ಸಾವಿಗೆ ಹಲವು ಖ್ಯಾತ ಬಾಡಿಬಿಲ್ಡರ್​ಗಳು ಸಂತಾಪ ಸೂಚಿಸಿದ್ದಾರೆ.

ಜಿಮ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ಜಸ್ಟಿನ್ ವಿಕ್ಕಿ ಬರೋಬ್ಬರಿ 210 ಕೆಜಿ ಭಾರ ಎತ್ತಲು ಪ್ರಯತ್ನಿಸಿದ್ದಾರೆ. ಅತೀವ ಭಾರ ಎತ್ತುವ ಪ್ರಯತ್ನದಲ್ಲಿ ಅವರ ಕತ್ತು ಮುರಿತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಸ್ಟಿನ್ ವಿಕ್ಕಿ ಕುಸಿದು ಬೀಳುತ್ತಿರುವ ವಿಡಿಯೊ ವೈರಲ್​ ಆಗಿದೆ. ಅತಿಯಾದ ಭಾರ ನಿಭಾಯಿಸಲು ಸಾಧ್ಯವಾಗದೆ ವಿಕ್ಕಿ ಹಿಂಭಾಗಕ್ಕೆ ಜಾರಿದ್ದಾರೆ. ಇದರಿಂದ ಹಿಂಭಾಗದಲ್ಲಿದ್ದ ತರಬೇತುದಾರ ಕೂಡ ಈ ಭಾರವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಇದರಿಂದ ವೈಟ್ ಲಿಫ್ಟಿಂಗ್ ಜಾರಿ ವಿಕ್ಕಿ ಕತ್ತಿನ ಮೇಲೆ ಬಿದ್ದಿದೆ. ಜಸ್ಟಿನ್ ವಿಕ್ಕಿ ಸಾವಿಗೆ ಸಂತಾಪ ಸೂಚಿಸಿದೆ ಹಲವರು ಸಾಮರ್ಥ್ಯಕ್ಕೆ ತಕ್ಕ ಪ್ರಯತ್ನ ಇರಲಿ, ದುಸ್ಸಾಹಸ ಬೇಡ ಎಂದು ಬಾಡಿಬಿಲ್ಡರ್​ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ Ashish Sakharkar: ‘ಮಿಸ್ಟರ್ ಇಂಡಿಯಾ’ ಬಾಡಿ ಬಿಲ್ಡಿರ್​ ಆಶಿಶ್ ನಿಧನ

ಹೃದಯಾಘಾತದಿಂದ ಸಾವನ್ನಪಿದ ಜೋ ಲಿಂಡ್ನರ್

ಸಾಮಾಜಿಕ ತಾಣಗಳಲ್ಲಿ ತಮ್ಮ ಫಿಟ್ನೆಸ್‌ ಸಲಹೆಯ ಮೂಲಕ ಖ್ಯಾತಿ ಗಳಿಸಿದ್ದ ಜರ್ಮನಿಯ ಖ್ಯಾತ ಬಾಡಿಬಿಲ್ಡರ್ ಜೋ ಲಿಂಡ್ನರ್ ಅವರು ಇತ್ತೀಚೆಗೆ ಹೃದಯಾಘಾತದಿಂದ ಥಾಯ್ಲೆಂಡ್‌ನಲ್ಲಿ ನಿಧನ ಹೊಂದಿದ್ದರು. ದೃವ ಸರ್ಜಾ ನಟನೆಯ ‘ಪೊಗರು’ ಸಿನಿಮಾದಲ್ಲೂ ಅವರು ನಟಿಸಿದ್ದರು.

ಮಿಸ್ಟರ್ ಇಂಡಿಯಾ’ ಬಾಡಿ ಬಿಲ್ಡಿರ್​ ಆಶಿಶ್ ನಿಧನ

ಮುಂಬಯಿ: ನಾಲ್ಕು ಬಾರಿಯ ‘ಮಿಸ್ಟರ್ ಇಂಡಿಯಾ'(4-time ‘Mr India’ bodybuilding champion) ದೇಹದಾರ್ಢ್ಯ ಪ್ರಶಸ್ತಿ ವಿಜೇತ ಆಶಿಶ್ ಸಖರ್ಕರ್(Ashish Sakharkar) ಅವರು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. 80 ಕೆ.ಜಿ. ವಿಭಾಗದಲ್ಲಿ ಬಾಡಿ ಬಿಲ್ಡರ್ ಆಗಿದ್ದ ಆಶಿಶ್ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಪ್ರತಿಷ್ಠತ ‘ಶಿವ ಛತ್ರಪತಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು. ಅವರು 4 ಬಾರಿ ಮಿಸ್ಟರ್ ಇಂಡಿಯಾ, 4 ಬಾರಿ ಫೆಡರೇಶನ್ ಕಪ್, ಮಿಸ್ಟರ್ ಯೂನಿವರ್ಸ್ ಮತ್ತು ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

Exit mobile version