ಬೆಂಗಳೂರು: ಬಾಲಿವುಡ್ ಮತ್ತು ಕ್ರಿಕೆಟ್ ನಡುವಿನ ನಂಟು ಹಲವು ವರ್ಷಗಳದ್ದು. ಕ್ರಿಕೆಟಿಗರು ಹಾಗೂ ಬಾಲಿವುಡ್ ನಟಿಯರು ಜತೆಯಾಗಿ ಸುತ್ತಾಡುವುದು ಮದುವೆಯಾಗುವುದು ಮಾಮೂಲಿಯಾಗಿದೆ. ಕಾಲ ಕಾಲಕ್ಕೆ ಬರುವ ಹೊಸ ನಟ- ನಟಿಯರು ಕ್ರಿಕೆಟಿಗರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಂತೆಯೆ ಸದ್ಯ ಬಾಲಿವುಡ್ನ ಸೆನ್ಷೇಷನ್ ಜಾಹ್ನವಿ ಕಪೂರ್ (Janhvi Kapoor) ತಮ್ಮ ನೆಚ್ಚಿನ ಕ್ರಿಕೆಟಿಗರು ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ. ಆರ್ಸಿಬಿ ಪಾಲಿಗೆ ಖುಷಿಯ ವಿಚಾರ ಏನೆಂದರೆ ಅವರಿಬ್ಬರೂ ಆರ್ಸಿಬಿ ಆಟಗಾರರು.
ಜಾಹ್ನವಿ ಕಪೂರ್ ಹೊಸ ತಲೆಮಾರಿನ ನಟಿಯರಲ್ಲಿ ದೊಡ್ಡ ಅಭಿಮಾನಿ ಬಳವನ್ನು ಹೊಂದಿದೆ. ಧಡಕ್, ರೂಹಿ ಮತ್ತು ಮಿಲಿಯಂತಹ ಚಲನಚಿತ್ರಗಳಲ್ಲಿ ಅದ್ಭುತ ಅಭಿನಯವನ್ನು ನೀಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಇಬ್ಬರು ಆಟಗಾರರಾದ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ತಮ್ಮ ನೆಚ್ಚಿನವರು ಎಂದು ಬಹಿರಂಗಪಡಿಸಿದ್ದಾರೆ.
ಆಜ್ ತಕ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಆರಂಭದಲ್ಲಿ ತಾವು ಕ್ರಿಕೆಟ್ ನೋಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಈಗ ಕ್ರಿಕೆಟ್ ನೋಡಲೇಬೇಕಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಅವರು ತಮ್ಮ ಹೊಸ ಚಿತ್ರಕ್ಕಾಗಿ ದಿನೇಶ್ ಕಾರ್ತಿಕ್ ತರಬೇತಿ ನೀಡಿರುವ ವಿಷಯವನ್ನೂ ಹೇಳಿಕೊಂಡಿದ್ದಾರೆ. ಈ ವೇಳೆ ದಿನೇಶ್ ಇಷ್ಟವಾಗಿದ್ದಾರೆ ಎಂದು ಹೇಳಿದ್ದಾರೆ.
“ವಿರಾಟ್ ಕೊಹ್ಲಿ ಸರ್ ಮತ್ತು ದಿನೇಶ್ ಕಾರ್ತಿಕ್ ವಿಶ್ವದ ನನ್ನ ನೆಚ್ಚಿನ ಕ್ರಿಕೆಟಿಗರು. ಕಾರ್ತಿಕ್ ಅವರು ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ, ಅವರು ತುಂಬಾ ಸುಂದರ ವ್ಯಕ್ತಿ” ಎಂದು ಜಾನ್ವಿ ಕಪೂರ್ ಹೇಳಿದರು.
‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಚಿತ್ರವು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕತೆಯ ಸುತ್ತ ಸುತ್ತುತ್ತದೆ, ಅವರ ಕ್ರಿಕೆಟ್ ಪ್ರಯಾಣವನ್ನು ಆಧರಿಸಿದ ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಎಂಬ ಜೀವನಚರಿತ್ರೆ ಈಗಾಗಲೇ ಬಂದಿದೆ. ಇದೀಗ ಮತ್ತೊಂದು ಚಿತ್ರ ತೆರೆ ಕಾಣಲಿದೆ.
ಇದನ್ನೂ ಓದಿ : Sajeevan Sajana : ಲಾಸ್ಟ್ ಬಾಲ್ನಲ್ಲಿ ಸಿಕ್ಸರ್ ಬಾರಿಸಿ ಮಿಂಚಿದ ಬುಡಕಟ್ಟು ಸಮುದಾಯದ ಸಜೀವನ್ ಸಜನಾ
ಕೊಹ್ಲಿ ಮತ್ತು ಕಾರ್ತಿಕ್ ಇಬ್ಬರೂ ಭಾರತಕ್ಕಾಗಿ ಆಡುವುದರ ಹೊರತಾಗಿ, ಆರ್ಸಿಬಿಯಲ್ಲಿ ಸಹ ಆಟಗಾರರಾಗಿದ್ದಾರೆ – ಪ್ರಸ್ತುತ ಕೊಹ್ಲಿ ತಮ್ಮ ಕೌಟುಂಬಿಕ ಕಾರಣಕ್ಕಾಗಿ ಕ್ರಿಕೆಟ್ನಿಂದ ದೂರ ಉಳಿದಿದ್ದರೆ, ಕಾರ್ತಿಕ್ ಪ್ರಸ್ತುತ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೀಕ್ಷಕವಿವರಣೆಯಲ್ಲಿ ತೊಡಗಿದ್ದಾರೆ.