Site icon Vistara News

Boris Becker | ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣ; ಟೆನಿಸಿಗ ಬೋರಿಸ್‌ ಬೆಕೆರ್‌ ಜೈಲಿನಿಂದ ಬಿಡುಗಡೆ!

boris becker

ಲಂಡನ್​: ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ 6 ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತ, ಜರ್ಮನಿಯ ಖ್ಯಾತ ಟೆನಿಸಿ ಆಟಗಾರ ಬೋರಿಸ್‌ ಬೆಕೆರ್‌(Boris Becker) ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಬ್ರಿಟನ್‌ನ ಮಾಧ್ಯಮಗಳು ವರದಿ ಮಾಡಿವೆ.

54 ವರ್ಷದ ಬೋರಿಸ್‌ ವಿರುದ್ಧ ಕಳೆದ ಎಪ್ರಿಲ್​ನಲ್ಲಿ ಲಂಡನ್‌ ನ್ಯಾಯಾಲಯದಲ್ಲಿ 4 ವಿವಿಧ ಪ್ರಕರಣಗಳು ದಾಖಲಾಗಿತ್ತು. 2017ರಲ್ಲಿ ಬ್ಯಾಂಕ್‌ ದಿವಾಳಿ ಎಂದು ಘೋಷಿಸಿದ ಬಳಿಕ ಬೋರಿಸ್‌ ಸುಮಾರು 3.4 ಕೋಟಿ ರೂ. ಹಣವನ್ನು ತಮ್ಮ ಮಾಜಿ ಪತ್ನಿಯರಾದ ಬಾರ್ಬರಾ ಹಾಗೂ ಶಾರ್ಲೆ ಲಿಲ್ಲಿಗೆ ವರ್ಗಾವಣೆ ಮಾಡಿದ್ದರು. ಅಲ್ಲದೇ ಜರ್ಮನಿಯಲ್ಲಿ ಸುಮಾರು 6.64 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಚ್ಚಿಟ್ಟಪ್ರಕರಣದಲ್ಲಿ ಅವರು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಅದರಂತೆ ಅವರು ಎರಡೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಇದೀಗ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಬ್ರಿಟನ್‌ನಿಂದ ಗಡಿಪಾರು ಮಾಡಲಾಗುವುದು ಎಂದು ಬ್ರಿಟನ್‌ನ ಮಾಧ್ಯಮಗಳು ವರದಿ ಮಾಡಿವೆ. ಬೆಕೆರ್‌ ಅವರು 2012 ರಿಂದ ಬ್ರಿಟನ್‌ನಲ್ಲಿ ವಾಸವಾಗಿದ್ದಾರೆ. ಇದೀಗ ಗಡಿಪಾರು ಮಾಡಿದರೆ ಎಲ್ಲಿಗೆ ಹೋಗಲಿದ್ದಾರೆ ಎಂದು ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.

ಬೋರಿಸ್‌ 1985ರಲ್ಲಿ ತಮ್ಮ 17ನೇ ವರ್ಷದಲ್ಲೇ ವಿಂಬಲ್ಡನ್‌ ಸಿಂಗಲ್ಸ್‌ ಗೆದ್ದು, ಈ ಸಾಧನೆ ಮಾಡಿದ ಮೊದಲ ಶ್ರೇಯಾಂಕ ರಹಿತ ಆಟಗಾರ ಎನ್ನುವ ದಾಖಲೆ ಬರೆದಿದ್ದರು. ಬಳಿಕ ಅವರು ವಿಶ್ವ ಟಿನಿಸ್​ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದರು.

ಇದನ್ನೂ ಓದಿ | US Open Tennis | ಮಾಜಿ ವಿಶ್ವ ನಂಬರ್ ಆಟಗಾರನಿಗೆ ಯುಎಸ್‌ ಓಪನ್‌ ಚಾನ್ಸ್‌ ಕೂಡ ಮಿಸ್‌

Exit mobile version