Site icon Vistara News

Boxer Parveen: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತದ ಬಾಕ್ಸರ್‌ ಪರ್ವೀನ್‌

Boxer Parveen

ನವದೆಹಲಿ: ಭಾರತದ ಬಾಕ್ಸರ್‌ ಪರ್ವೀನ್‌(Boxer Parveen) ಹೂಡಾ ಅವರು 3 ಬಾರಿ ನಿಯಮ ಉಲ್ಲಂಘನೆ ಮಾಡಿದ ತಪ್ಪಿಗಾಗಿ ಇದೀಗ 22 ತಿಂಗಳುಗಳ ಕಾಲ ಅಮಾನತು(Parveen suspended) ಶಿಕ್ಷೆಗೆ ಗುರಿಯಾಗಿದ್ದಾರೆ. ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ವಾಡಾ) ಅವರಿಗೆ ಈ ಶಿಕ್ಷೆ ವಿಧಿಸಿದೆ. ಇದರೊಂದಿಗೆ ಪರ್ವೀನ್‌ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. 57 ಕೆ.ಜಿ. ವಿಭಾಗದಲ್ಲಿ ಅವರು ಒಲಿಂಪಿಕ್ಸ್(Paris Olympics 2024) ಕೋಟಾ ಪಡೆದುಕೊಂಡಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಪರ್ವೀನ್‌, ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್‌ ಕೋಟಾ ಗಿಟ್ಟಿಸಿಕೊಂಡಿದ್ದರು. ಆದರೆ 12 ತಿಂಗಳಲ್ಲಿ 3 ಬಾರಿ ವಾಡಾ ನಿಯಮ ಉಲ್ಲಂಘಿಸಿದ್ದಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ. ಅಮಾನತು ಅವಧಿ ಈಗಾಗಲೇ 8 ತಿಂಗಳು ಆಗಿರುವುದರಿಂದ ಇನ್ನು 14 ತಿಂಗಳ ಅಮಾನತು ಅವಧಿಯನ್ನು ಪರ್ವೀನ್‌ ಪೂರ್ಣಗೊಳಿಸಬೇಕಿದೆ.

ಇನ್ನು ಮುಂದೆ ಡೋಪ್‌ ಪರೀಕ್ಷೆಯಲ್ಲಿ ಅಥ್ಲೀಟ್‌ ವಿಫಲವಾದರೆ ಅವರ ಕೋಚ್‌ಗೂ ಶಿಕ್ಷೆ ವಿಧಿಸಲು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ) ಹೊಸ ಕ್ರಮ ಕೈಗೊಂಡಿದೆ. ಇದಕ್ಕೆ ಕಾರಣ ಇತ್ತೀಚೆಗೆ ಉದ್ದೀಪನ ಮದ್ದು ಸೇವನೆ ಮಾಡಿ ಅಥ್ಲೀಟ್‌ಗಳು ಸಿಕ್ಕಿ ಬೀಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು.

ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡಲು ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ತೀರ್ಮಾನಿಸಿದೆ. 2028ರಲ್ಲಿ ಲಾಸ್‌ ಏಂಜಲಿಸ್​ನಲ್ಲಿ ನಡೆಯುವ ಒಲಿಂಪಿಕ್ ಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಎಲ್ಲರಿಗೂ ನಗದು ಪ್ರಶಸ್ತಿ ನೀಡುವುದಾಗಿಯೂ ಸಂಸ್ಥೆ ಘೋಷಿಸಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ ಕೂಟದಲ್ಲಿ ನಗದು ಪ್ರಶಸ್ತಿ ನೀಡಲಾಗುತ್ತಿದೆ.

ಇದನ್ನೂ ಓದಿ Paris Olympics 2024: 19ನೇ ಶತಮಾನದ ಹಡಗಿನಲ್ಲಿ ಇಂದು ಫ್ರಾನ್ಸ್‌ಗೆ ಬರಲಿದೆ ಒಲಿಂಪಿಕ್‌ ಜ್ಯೋತಿ

ಟೋಕಿಯೊ ಒಲಿಂಪಿಕ್ ಕೂಟದ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್​ ಚೋಪ್ರಾ ಅವರು ಈ ಬಾರಿ ಚೆನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್‌ ಡಾಲರ್‌ ಬಹುಮಾನ ದೊರೆಯಲಿದೆ. ನೀರಜ್​ ಅವರು ಟ್ರ್ಯಾಕ್‌ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಪ್ಯಾರಿಸ್‌ನಲ್ಲಿಯೂ ಅವರ ಮೇಲೆ ಚಿನ್ನದ ನಿರೀಕ್ಷೆ ಮಾಡಲಾಗಿದೆ.

ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

Exit mobile version