Site icon Vistara News

Boxing Day Test: ಬಾಕ್ಸಿಂಗ್​ ಡೇ ಟೆಸ್ಟ್​ ಎಂದರೇನು? ಇದರ ಮಹತ್ವವೇನು?

boxing day test

ಬೆಂಗಳೂರು: ಬಾಕ್ಸಿಂಗ್ ಡೇ ಟೆಸ್ಟ್(Boxing Day Test) ಎಂಬುದು ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 26 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಡಲಾಗುವ ಪ್ರಸಿದ್ಧ ಟೆಸ್ಟ್ ಪಂದ್ಯವಾಗಿದ್ದು, ಡಿಸೆಂಬರ್ 30 ರಂದು ಅಥವಾ ಅದಕ್ಕೂ ಮೊದಲು ಕೊನೆಗೊಳ್ಳುತ್ತದೆ. ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವಿನ ಶೆಫೀಲ್ಡ್ ಶೀಲ್ಡ್ ಪ್ರಥಮ-ದರ್ಜೆ ಪಂದ್ಯವನ್ನು ಸೂಚಿಸುವ ಈ ಸಂಪ್ರದಾಯವು 1865ರ ಹಿಂದೆಯೇ ಪ್ರಾರಂಭವಾದ ಕಾರಣ ಇದು ಆಸ್ಟ್ರೇಲಿಯನ್ನರಿಗೆ ಬಹಳ ಮಹತ್ವದ್ದಾಗಿದೆ.

ಕ್ರಿಸ್​ಮಸ್​ನ ಮರು ದಿನ ನಡೆಯುವ ಯಾವುದೇ ಟೆಸ್ಟ್ ಪಂದ್ಯವನ್ನು ಕೂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವೆಂದು ಪರಿಗಣಿಸಲಾಗುತ್ತದೆ. ಆಸ್ಟ್ರೇಲಿಯದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ. ಕ್ರಿಕೆಟ್ ಆಸ್ಟ್ರೇಲಿಯಾ 1980 ರಲ್ಲಿ ಅಧಿಕೃತ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಬಾಕ್ಸಿಂಗ್ ಡೇ ಸಂಪ್ರದಾಯವು ಆರಂಭವಾಯಿತು. 2013 ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ಪ್ರೇಕ್ಷಕರು ಸೇರಿದ ದಾಖಲೆ ನಿಮಾರ್ಣವಾಯಿತು. 271,865 ಮಂದಿ ಹಾಜರಿದ್ದರು. ಇದು ಆ್ಯಶಸ್​ ಸರಣಿಯ ಪಂದ್ಯವಾಗಿತ್ತು. ಇಂಗ್ಲೆಂಡ್​ ತಂಡ ಎದುರಾಳಿಯಾಗಿತ್ತು.

ಮಂಗಳವಾರ ನಡೆಯುವ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಪ್ರತಿ ವರ್ಷವೂ ಆಸ್ಟ್ರೇಲಿಯಾ ಡಿ.26ಕ್ಕೆ ಟೆಸ್ಟ್​ ಪಂದ್ಯವನ್ನು ಆಡಿಯೇ ಆಡುತ್ತದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಕೂಡ ನಾಳೆ ಟೆಸ್ಟ್​ ಪಂದ್ಯ ಆಡಲಿದೆ. ಈ ಪಂದ್ಯವನ್ನೂ ಕೂಡ ಬಾಕ್ಸಿಂಗ್ ಡೇ ಟೆಸ್ಟ್​ ಎಂದು ಕರೆಯಲಾಗುತ್ತದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಡಿಸೆಂಬರ್‌ 26 ರಿಂದ ‘ಬಾಕ್ಸಿಂಗ್‌ ಡೇ ಟೆಸ್ಟ್’ ಆಯೋಜಿಸಲಾಗುತ್ತದೆ.

ಇದನ್ನೂ ಓದಿ Ind vs Aus : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ

ಭಾರತದ ದಾಖಲೆ

ಭಾರತ ತಂಡ ಇದುವರೆಗೂ 14 ಬಾಕ್ಸಿಂಗ್ ಡೇ ಪಂದ್ಯಗಳನ್ನು ಆಡಿದೆ. ಇದರಲ್ಲಿ ಗೆದ್ದಿದ್ದು 4 ಪಂದ್ಯಗಳನ್ನು ಮಾತ್ರ. ಕೊನೆಯ ಬಾರಿ ಭಾರತ ಬಾಕ್ಸಿಂಗ್​ ಡೇ ಟೆಸ್ಟ್​ ಗೆಲುವು ಸಾಧಿಸಿದ್ದು ಕೊಹ್ಲಿಯ ನಾಯಕತ್ವದಲ್ಲಿ.

ರಾಹುಲ್​ಗೆ ಕೀಪಿಂಗ್​ ಹೊಣೆ

ಇಶಾನ್​ ಕಿಶನ್​​ ಅವರು ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಾಗ ಕೀಪಿಂಗ್​ ಹೊಣೆ ಕೆ.ಎಲ್​ ರಾಹುಲ್​ಗೆ ನೀಡಬಹುದು ಎಂದು ಹೇಳಲಾಗಿತ್ತು. ಇದೀಗ ಖಚಿತವಾಗಿದೆ. ಕೋಚ್​ ದ್ರಾವಿಡ್​ ಈ ಬಗ್ಗೆ ಖಚಿತ ಮಾಹಿತಿ ನೀಡಿ ರಾಹುಲ್​ ಅವರೇ ಕೀಪಿಂಗ್​ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೆ ರಾಹುಲ್​ ಏಕದಿನ ವಿಶ್ವಕಪ್​ನಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್​ ಕೀಪರ್​ ಆಗಿ ಉತ್ತಮ ಯಶಸ್ಸು ಕಂಡಿದ್ದಾರೆ. ಹೀಗಾಗಿ ಅವರನ್ನೇ ಆಯ್ಕೆ ಮಾಡಲಾಗಿದೆ ಎಂದು ದ್ರಾವಿಡ್​ ಹೇಳಿದರು.

Exit mobile version