Site icon Vistara News

Boxing | ಯೂತ್​ ಬಾಕ್ಸಿಂಗ್​ ಚಾಂಪಿಯನ್​ಶಿಪ್​: ಚಿನ್ನಕ್ಕೆ ಪಂಚ್​ ನೀಡಿದ ವಿಶ್ವನಾಥ್‌, ದೇವಿಕಾ, ವಂಶಜ್​

youth boxing

ಸ್ಪೇನ್‌: ಇಲ್ಲಿನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ವಿಶ್ವನಾಥ್ ಸುರೇಶ್, ವಂಶಜ್ ಮತ್ತು ದೇವಿಕಾ ಘೋರ್ಪಡೆ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಶನಿವಾರ ನಡೆದ ಪುರುಷರ 48 ಕೆಜಿ ವಿಭಾಗದ ಫೈನಲ್‌ನಲ್ಲಿ ಚೆನ್ನೈ ಮೂಲದ ವಿಶ್ವನಾಥ್‌ ಅವರು ಫಿಲಿಪ್ಪೀನ್ಸ್‌ನ ರೋನೆಲ್ ಸುಯೊಮ್ ಅವರನ್ನು ಏಕಪಕ್ಷೀಯವಾಗಿ ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಇನ್ನು 63.5 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ವಂಶಜ್‌ ಫೈನಲ್‌ನಲ್ಲಿ ಜಾರ್ಜಿಯಾದ ದೆಮುರ್ ಕಜೈಯಾ ಅವರನ್ನು ಪರಾಭವಗೊಳಿಸಿದರು. ಮಹಿಳೆಯರ 52 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ದೇವಿಕಾ ಅವರು ಇಂಗ್ಲೆಂಡ್‌ನ ಲಾರೆನ್ ಮ್ಯಾಕಿ ಅವರನ್ನು ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿದರು.

ಬೆಳ್ಳಿ ಗೆದ್ದ ಆಶಿಶ್‌ ಮತ್ತು ಭಾವನಾ ಶರ್ಮಾ

‌ಪುರುಷರ (54 ಕೆಜಿ) ವಿಭಾಗದಲ್ಲಿ ಆಶಿಶ್‌ 1-4ರಿಂದ ಜಪಾನ್‌ನ ಯುತಾ ಸಕಾಯಿ ಎದುರು ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಭಾವನಾ ಶರ್ಮಾ((48 ಕೆಜಿ)) ಮಹಿಳಾ ವಿಭಾಗದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ 0-5 ಅಂತರದಿಂದ ಉಜ್ಬೆಕಿಸ್ತಾನದ ಗುಲ್ಸೆವರ್ ಗ್ಯಾನಿಯೆವಾ ಎದುರು ಸಂಪೂರ್ಣವಾಗಿ ಶರಣಾಗಿ ಬೆಳ್ಳಿಗೆ ಕೊರಳೊಡ್ಡಿದರು. ಉಳಿದಂತೆ ತಮನ್ನಾ (50 ಕೆಜಿ), ಕುಂಜರಾಣಿ ದೇವಿ ಥೊಂಗಮ್‌ (60 ಕೆಜಿ), ಮುಸ್ಕಾನ್‌ (75 ಕೆಜಿ) ಮತ್ತು ಲಾಶು ಯಾದವ್‌ (70 ಕೆಜಿ) ಸೆಮಿಫೈನಲ್‌ಗಳಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಇದನ್ನೂ ಓದಿ | IND VS NZ | ಕಿವೀಸ್​ ವಿರುದ್ಧ ದ್ವಿತೀಯ ಏಕ ದಿನ; ಧವನ್​ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

Exit mobile version