ಮುಂಬಯಿ : ಟಿ೨೦ ವಿಶ್ವ ಕಪ್‌ನ ಸೆಮಿ ಫೈನಲ್ ಹಂತದ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗುತ್ತಿದ್ದಂತೆ ಭಾರತದಲ್ಲಿ ಬಾಯ್ಕಾಟ್ ಐಪಿಎಲ್ (Boycott IPL) ಟ್ರೆಂಡಿಂಗ್ ಜೋರಾಗಿ ನಡೆಯಿತು. ಭಾರತೀಯ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಲು ಐಪಿಎಲ್ ಕಾರಣ ಎಂಬುದು ಅವರೆಲ್ಲರ ಅಭಿಪ್ರಾಯವಾಗಿದೆ.
ಭಾರತದ ಕ್ರಿಕೆಟಿಗರು ಐಪಿಎಲ್‌ನಲ್ಲಿ ಉತ್ತಮವಾಗಿ ಆಡುತ್ತಾರೆ. ಅದೇ ಪರಿಸ್ಥಿತಿಗೆ ಹೊಂದಿಕೊಂಡಿರುತ್ತಾರೆ. ಆದರೆ, ವಿದೇಶಿ ಪಿಚ್‌ಗಳಲ್ಲಿ ಆಡುವಾಗ ಮತ್ತು ಐಸಿಸಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಾರೆ. ಈ ಮೂಲಕ ದೇಶದ ಮರ್ಯಾದೆ ಕಳೆಯುತ್ತಾರೆ ಎಂಬುದು ಅವರೆಲ್ಲರ ಆಕ್ಷೇಪವಾಗಿದೆ.
ಐಪಿಎಲ್‌ನಲ್ಲಿ ಕೋಟಿ ಕೋಟಿ ರೂಪಾಯಿ ಪಡೆಯುವ ಆಟಗಾರರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಭರ್ಜರಿ ಪ್ರದರ್ಶನ ನೀಡುತ್ತಾರೆ. ಆದರೆ, ಟೀಮ್ ಇಂಡಿಯಾದ ಪರವಾಗಿ ಆಡುವಾಗ ಬೇಜವಾಬ್ದಾರಿಯಿಂದ ಆಡುತ್ತಾರೆ. ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ ಕನಿಷ್ಠ ಸ್ಕೋರ್‌ಗಳನ್ನು ಬಾರಿಸಿತ್ತು. ಜತೆಗೆ ಬೌಲಿಂಗ್ ವಿಭಾಗವೂ ಅತ್ಯಂತ ಕಳಪೆಯಾಗಿತ್ತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | IND vs ENG | ಸೋಲಿನ ಹತಾಶೆಯಲ್ಲಿ ಕಣ್ಣೀರು ಹಾಕಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ