Site icon Vistara News

IPL | ಪಂಜಾಬ್​ ಕಿಂಗ್ಸ್​ ತಂಡ ಸೇರಿಕೊಂಡ ಬ್ರಾಡ್​ ಹೆಡಿನ್​

haddin

ಮುಂಬಯಿ: ಮುಂಬರುವ ಐಪಿಎಲ್ (IPL)​ ಟೂರ್ನಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್‌ ಹೆಡಿನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡ ಸಹಾಯಕ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಪಂಜಾಬ್‌ ತಂಡ ಇತ್ತಿಚೇಗೆ ಅನಿಲ್‌ ಕುಂಬ್ಳೆ ಬದಲಿಗೆ ಟ್ರೆವರ್‌ ಬೇಲಿಸ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿತ್ತು. ಇದೀಗ ಅವರಿಗೆ ನೆರವಾಗಲು 44 ವರ್ಷದ ಹೆಡಿನ್‌ ಅವರಿಗೆ ಸಹಾಯಕ ಕೋಚ್​ ಹುದ್ದೆ ನೀಡಲಾಗಿದೆ.

“ಹೆಡಿನ್‌ ಅವರನ್ನು ಸಹಾಯಕ ಮುಖ್ಯ ಕೋಚ್​ ಆಗಿ ನೇಮಕ ಮಾಡಲಾಗಿದ್ದು, ಇತರ ಸಿಬ್ಬಂದಿಯ ನೇಮಕ ಶೀಘ್ರದಲ್ಲೇ ನಡೆಯಲಿದೆ. ಹೆಡಿನ್​ ಅವರ ಕಾರ್ಯಾವಧಿಯಲ್ಲಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಪಂಜಾಬ್‌ ಫ್ರಾಂಚೈಸಿ ತಿಳಿಸಿದೆ.

ಹೆಡಿನ್‌ ಮತ್ತು ಬೇಲಿಸ್‌ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಜತೆಯಾಗಿ ಕಾರ್ಯನಿರ್ವಹಿಸಿದ್ದರು. ಹೆಡಿನ್‌ ಆಸ್ಟ್ರೇಲಿಯಾ ಪರ 66 ಟೆಸ್ಟ್‌, 126 ಏಕದಿನ ಮತ್ತು 34 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ | T20 World Cup | ಮೆಲ್ಬೋರ್ನ್​ ತಲುಪಿದ ಟೀಮ್​ ಇಂಡಿಯಾ, ಶುಕ್ರವಾರದಿಂದ ಅಭ್ಯಾಸ ಆರಂಭ

Exit mobile version