ವಾಷಿಂಗ್ಟನ್: ವಿಶ್ವಾದ್ಯಂತ ಹೃದಯಾಘಾತ (Heart attack) ಹೆಚ್ಚುತ್ತಿದೆ. ಅದರಲ್ಲೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. WWEನ ಮಾಜಿ ಸೂಪರ್ಸ್ಟಾರ್ ಬ್ರೇ ವ್ಯಾಟ್(bray wyatt) ಅವರು ಕೂಡ ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರಿಗೆ ಕೇವಲ 36ನೇ ವಯಸ್ಸಾಗಿತ್ತು. ಅವರ ಸಾವಿಗೆ ಡಬ್ಲ್ಯುಡಬ್ಲ್ಯುಇನ ಅನೇಕ ಕುಸ್ತಿಪಟುಗಳು ಕಂಬನಿ ಮಿಡಿದಿದ್ದಾರೆ.
ಬ್ರೇ ವ್ಯಾಟ್ ಅವರ ನಿಧನದ ಸುದ್ದಿಯನ್ನು WWE ಮುಖ್ಯ ಕಂಟೆಂಟ್ ಆಫೀಸರ್ ಆಗಿರುವ ಟ್ರಿಪಲ್ ಹೆಚ್(Triple H) ಅವರು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ. ‘WWE ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾದಿಂದ ಈಗಷ್ಟೇ ಕರೆ ಬಂದಿದೆ, ಬ್ಯಾಟ್ ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ. ಈ ಸುದ್ದಿಯನ್ನು ಪ್ರಕಟಿಸಲು ನಿಜಕ್ಕೂ ಬೇಸರವಾಗುತ್ತಿದೆ. ಅವರ ಕುಟುಂಬಕ್ಕೆ ದೇವರು ಈ ದುಖಃವನ್ನು ಭರಿಸುವ ಶಕ್ತಿ ನೀಡಲಿ, ನಮ್ಮ WWE ಕುಟುಂಬದ ಸದಸ್ಯ ಬ್ರೇ ವ್ಯಾಟ್ ಇಂದು ಮುಂಜಾನೆ ಅಗಲಿದ್ದಾರೆ” ಎಂದು ಟ್ರಿಪಲ್ ಹೆಚ್ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಬ್ರೇ ವ್ಯಾಟ್ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಕೋವಿಡ್ ಸೋಂಕು ಬಂದ ಬಳಿಕ ಈ ಹೃದಯ ಸಂಬಂಧಿ ಕಾಯಿಲೆ ಕಂಡು ಬಂದಿದೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು. ಆದರೂ ಚೇತರಿಕೆ ಕಂಡಿದ್ದ ಅವರು ಮತ್ತೆ WWE ಕುಸ್ತಿ ರಿಂಗ್ಗೆ ಕಮ್ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದರು. ಆದರೆ ವಿಧಿಯಾಟ ಬೇರೆಯೆ ಆಗಿತ್ತು. ಅವರು ಬಾರದ ಲೋಕಕ್ಕೆ ತೆರಳಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಇಹಲೋಹ ತ್ಯಜಿಸಿದ್ದಾರೆ.
ಇದನ್ನೂ ಓದಿ The Great Khali: ‘ಕೆಂಡದ ಸೆರಗು’ ಚಿತ್ರದಲ್ಲಿ ತೊಡೆ ತಟ್ಟಲಿದ್ದಾರೆ WWE ವರ್ಲ್ಡ್ ಚಾಂಪಿಯನ್ ಖಲಿ
ಕೈಯಲ್ಲೊಂದು ಲ್ಯಾಂಪ್ ಹಿಡಿದು ಕತ್ತಲು ಆವರಿಸಿದ ವೇಳೆ ಮೆಲ್ಲನೆ ನಡೆದು ಬಂದು ಬಳಿಕ ಎದುರಾಳಿ ವಿರುದ್ಧ ಕಾದಾಟ ನಡೆಸುವ ಮೂಲಕ ಅವರ ಈ ವಿಚಿತ್ರ ಶೈಲಿ ಇನ್ನು ಮುಂದೆ WWE ನಲ್ಲಿ ಕಾಣಸಿಗದು. ಜಾನ್ ಸೀನಾ, ದಿ ರಾಕ್ ಸೇರಿ ಅನೇಕ WWE ಕುಸ್ತಿಪಟುಗಳು ಬ್ರೇ ವ್ಯಾಟ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.