Site icon Vistara News

ಸಚಿನ್ ಅವರ ಈ ದಾಖಲೆ ಮುರಿಯಲು ವಿರಾಟ್​ ಕೊಹ್ಲಿಗೆ ಅಸಾಧ್ಯ; ಲಾರಾ ವಿಶ್ವಾಸ ​

sachin tendulkar virat kohli

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಅದಷ್ಟೋ ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ಇತ್ತೀಚೆಗ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಕೊಹ್ಲಿ ಅವರು ಸಚಿನ್​ ಅವರ ಏಕದಿನ ಕ್ರಿಕೆಟ್​ನ 49 ಶತಕದ ದಾಖಲೆಯನ್ನು ಮುರಿದಿದ್ದರು. ಆದರೆ ಸಚಿನ್​ ಅವರ ಈ ಒಂದು ದಾಖಲೆ ಮುರಿಯಲು ಅವರಿಗೆ ಅಸಾಧ್ಯ ಎಂದು ವಿಂಡೀಸ್​ ಮಾಜಿ ಆಟಗಾರ ಬ್ರಿಯಾನ್ ಲಾರಾ(Brian Lara) ಅಭಿಪ್ರಾಯಪಟ್ಟಿದ್ದಾರೆ.

ಸದ್ಯ 80 ಅಂತಾರಾಷ್ಟ್ರೀಯ ಶತಕ ಬಾರಿಸಿ ದ್ವಿತೀಯ ಸ್ಥಾನದಲ್ಲಿರುವ ಕೊಹ್ಲಿ ಅವರು ಸಚಿನ್​ ಅವರ 100ನೇ ಶತಕದ(Tendulkar’s 100 centuries) ದಾಖಲೆಯನ್ನು ಕೂಡ ಮುರಿಯಲಿದ್ದಾರೆ ಎಂಬ ಕುರಿತು ಈಗಾಗಲೇ ಚರ್ಚೆಗಳು ನಡೆಯುತ್ತಿದೆ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಲಾರಾ, ಇದು ಅಸಾಧ್ಯ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೆ ಇದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.

ವಯಸ್ಸು ನಿಲ್ಲದು

ಕೊಹ್ಲಿಗೆ ಈಗ 35 ವರ್ಷ. ಅವರಿಗೆ ಸಚಿನ್​ ಅವರ 100 ಶತಕದ ದಾಖಲೆ ಮುರಿಯಲು ಇನ್ನೂ 20 ಶತಕದ ಅಗತ್ಯವಿದೆ. ಮುಂದಿನ ವರ್ಷ ಟೀಮ್ ಇಂಡಿಯಾಕ್ಕೆ ಹೆಚ್ಚು ಏಕದಿನ ಸರಣಿಗಳು ಇಲ್ಲ. ಹೆಚ್ಚಾಗಿ ಟಿ20 ಸರಣಿಗಳೇ ಇವೆ. ಟಿ20ಯಲ್ಲಿ ವಿರಾಟ್ ಅವರ ಭವಿಷ್ಯದ ಬಗ್ಗೆ ಇನ್ನೂ ಗೊಂದಲಗಳಿವೆ. ಒಂದೊಮ್ಮೆ ಏಕದಿನ ಸರಣಿಗಳು ಇದ್ದರೂ, ಪ್ರತಿ ವರ್ಷ ಐದು ಶತಕಗಳನ್ನು ಗಳಿಸಬೇಕು. ಇದಕ್ಕೆ ನಾಲ್ಕು ವರ್ಷಗಳು ಬೇಕಾಗುತ್ತವೆ. ಆಗ ಕೊಹ್ಲಿಗೆ 39 ವರ್ಷವಾಗುತ್ತದೆ. ಇದು ತುಂಬಾ ಕಠಿಣ. ಹೀಹಾಗಿ ಕೊಹ್ಲಿ ಕನಿಷ್ಠ 90 ಸನಿಹಕ್ಕೆ ಶತಕದ ಸಂಖೆಯನ್ನು ಏರಿಸಬಹುದು” ಎಂದು ಲಾರ ಹೇಳಿದ್ದಾರೆ.

ಇದನ್ನೂ ಓದಿ ಕಿಂಗ್​ ಕೊಹ್ಲಿ ಕೈಬಿಟ್ಟ ಬಿಸಿಸಿಐ; ಟಿ20 ವಿಶ್ವಕಪ್​ಗೆ ನೂತನ ಆಟಗಾರನ ಆಯ್ಕೆ!

400 ರನ್​ ದಾಖಲೆ ಗಿಲ್​ ಮುರಿಯಬಹುದು

ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್​ ಅವರು ಈಗಾಗಕೇ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಅವರ ಕ್ರಿಕೆಟ್​ ಪ್ರದರ್ಶನಕ್ಕೆ ಲಾರಾ ಕೂಡ ಮನಸೋತಿದ್ದು, ತಮ್ಮ ಟೆಸ್ಟ್​ ಕ್ರಿಕೆಟ್​ನ 400 ರನ್​ಗಳ ವಿಶ್ವ ದಾಖಲೆಯನ್ನು ಗಿಲ್​ ಅವರಿಗೆ ಮಾತ್ರ ಮುರಿಯಲು ಸಾಧ್ಯವಿದೆ ಎಂದು ಭವಿಷ್ಯ ನುಡಿದ್ದಾರೆ.

“ಶುಭಮನ್ ಗಿಲ್ ಅವರು ಹೊಸ ಪೀಳಿಗೆಯ ಅತ್ಯಂತ ಪ್ರತಿಭಾವಂತ ಆಟಗಾರ. ನನ್ನ ಎರಡು ಪ್ರಮುಖ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಅವರಿಗಿದೆ. ಮುಂದಿನ ದಿನಗಳಲ್ಲಿ ಆತ ಕ್ರಿಕೆಟ್ ಲೋಕವನ್ನು ಸುದೀರ್ಘವಾಗಿ ಆಳುವುದರಲ್ಲಿ ಯಾವುದೇ ಅನುಮಾನ ಬೇಡ. ಜತೆಗೆ ಆತ ನನ್ನ ವೃತ್ತಿ ಜೀವನದ ಬಹುದೊಡ್ಡ ದಾಖಲೆಯನ್ನು ಮುರಿಯುತ್ತಾರೆ ಎಂಬ ಭರವಸೆ ನನಗಿದೆ. ಗಿಲ್ ಕೌಂಟಿ ಕ್ರಿಕೆಟ್ ಆಡಿದರೆ ನನ್ನ 501* ರನ್ ಮತ್ತು ಟೆಸ್ಟ್ ಕ್ರಿಕೆಡ್‌ನಲ್ಲಿ ನನ್ನ ವೈಯಕ್ತಿಕ 400 ರನ್ ಗಳನ್ನು ಮುರಿಯಬಲ್ಲರು” ಎಂದು ಲಾರಾ ಹೇಳಿದ್ದಾರೆ.

Exit mobile version