Site icon Vistara News

Brij Bhushan: ಬ್ರಿಜ್‌ಭೂಷಣ್‌ಗೆ ಮತ್ತೆ ಸಂಕಷ್ಟ; ಶಿಕ್ಷೆಗೆ ಗುರಿಯಾಗುವ ಸಾಧ್ಯತೆ

brijbhushan singh

ನವದೆಹಲಿ: ಲೈಂಗಿಕ ಕಿರುಕುಳ ಆರೋಪ(Sexual harassment case) ಎದುರಿಸುತ್ತಿರುವ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ಗೆ(BJP MP Brij Bhushan Sharan Singh) ಸಂಕಷ್ಟವೊಂದು ಎದುರಾಗಿದೆ. ಮೇಲ್ವಿಚಾರಣಾ ಸಮಿತಿಯು ಕ್ಲೀನ್‌ಚಿಟ್‌ ಕೊಟ್ಟಿಲ್ಲ ಎಂದು ದೆಹಲಿ ಪೊಲೀಸರು(Delhi police) ಶನಿವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಯಲಕ್ಕೆ ಪೊಲೀಸರು ವರದಿ ಸಲ್ಲಿಸಿದ್ದಾರೆ. ಇದು ಬ್ರಿಜ್‌ಭೂಷಣ್​ಗೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ದೋಷಮುಕ್ತಗೊಳಿಸಿಲ್ಲ

ಇದೇ ವಿಚಾರವಾಗಿ ಮಾತನಾಡಿದ ಸರ್ಕಾರಿ ವಕೀಲ ಅತುಲ್ ಶ್ರೀವಾತ್ಸವ, ‘ಮೇಲ್ವಿಚಾರಣಾ ಸಮಿತಿಯು ಬ್ರಿಜ್‌ಭೂಷಣ್‌ ಅವರನ್ನು ಇದುವರೆಗೆ ದೋಷಮುಕ್ತಗೊಳಿಸಿಲ್ಲ. ಸಮಿತಿಯು ಅವರಿಗೆ ಕ್ಲೀನ್‌ ಚಿಟ್‌ ನೀಡಬಹುದೆಂದು ಶಿಫಾರಸು ಮಾಡಿದೆಯೇ ಹೊರತು, ಅವರ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಿಚಾರಣೆ ವೇಳೆ ಬ್ರಿಜ್‌ಭೂಷಣ್‌ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದರು. ಮುಂದಿನ ವಿಚಾರಣೆ ಸೆಪ್ಟೆಂಬರ್​ 23ಕ್ಕೆ ಮುಂದೂಡಿಕೆಯಾಗಿದೆ.

ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದಿದ್ದ ಪೊಲೀಸರು

ಕಳೆದ ತಿಂಗಳು ದೆಹಲಿ ಪೊಲೀಸರು ಬ್ರಿಜ್​ ಭೂಷಣ್​ ಅವರ ಲೈಂಗಿಕ ಕಿರುಕುಳ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಅವರನ್ನು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದೀಗ ಕ್ಲೀನ್‌ಚಿಟ್‌ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಪೊಲೀಸರ ಈ ಹೇಳಿಕೆ ಬ್ರಿಜ್​ ಭೂಷಣ್​ಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯೊಂದು ಕಂಡುಬಂದಿದೆ.

ಇದನ್ನೂ ಓದಿ Brij Bhushan: ಜಾಮೀನು ಪಡೆದ ಬ್ರಿಜ್‌ಭೂಷಣ್‌; ದೇಶ ತೊರೆಯದಂತೆ ಸೂಚನೆ

ಆರಂಭದಲ್ಲಿ ಬೆಂಬಲ ನೀಡಿದ್ದ ಪೊಲೀಸರು

ಜೂನ್​ 15ರಂದು ದೆಹಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಪಟಿಯಾಲ ನ್ಯಾಯಾಲಯಕ್ಕೆ ಬ್ರಿಜ್‌ಭೂಷಣ್‌ ಶರಣ್​ ಸಿಂಗ್‌ ವಿರುದ್ಧ 500 ಪುಟಗಳ ಚಾರ್ಜ್‌ಶೀಟ್‌(Chargesheet) ಸಲ್ಲಿಸಿ ಅವರ ಮೇಲೆ ದಾಖಲಾದ ಪೋಕ್ಸೊ(POCSO) ಕೇಸನ್ನು ರದ್ದುಗೊಳಿಸುವಂತೆ ಕೋಟ್​ಗೆ ಶಿಫಾರಸು ಮಾಡಿದ್ದರು. ಮತ್ತು ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಇದೀಗ ದೆಹಲಿ ಪೊಲೀಸರು ತಮ್ಮ ಹೇಳಿಕೆಯನ್ನು ಬದಲಿಸಿ ಬ್ರಿಜ್‌ಭೂಷಣ್‌ ವಿರುದ್ಧವಾಗಿ ನಿಂತಿದ್ದಾರೆ. ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕೋರ್ಟ್​ನಲ್ಲಿ ಪೊಲೀಸರು ನೀಡಿದ ಈ ಹೇಳಿಕೆಯಿಂದ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ. 

2 ಎಫ್​ಐಆರ್​ ದಾಖಲು 

ಬ್ರಿಜ್​ ಭೂಷಣ್​ ಹಾಗೂ ತೋಮರ್​ ವಿರುದ್ಧ ವಿನೇಶ್​ ಫೋಗಾಟ್​, ಸಾಕ್ಷಿ ಮಲಿಕ್ ಸೇರಿದಂತೆ ಕೆಲವು ಕುಸ್ತಿಪಟುಗಳು ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಜೂನ್ 15ರಂದು ಬ್ರಿಜ್ ಭೂಷಣ್ ಅವರ ವಿರುದ್ಧ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಿದರು.

ಬಿಜೆಪಿ ಸಂಸದ ಬ್ರಿಜ್​ಭೂಷಣ್​ ವಿರುದ್ಧ ಎರಡು ಎಫ್​ಐಆರ್​ಗಳನ್ನು ದಾಖಲಿಸಲಾಗಿತ್ತು. ಅದರಲ್ಲೊಂದು ಅಪ್ರಾಪ್ತ ಕುಸ್ತಿಪಟುವಿನ ಪ್ರಕರಣದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ದೂರು ಆಗಿತ್ತು. ಬಳಿಕ ದೂರುದಾರರು ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದರು. ಈ ಪ್ರಕರಣ ವಾಪಸ್​ ಪಡೆಯಲಾಗಿದೆ. ಎರಡನೇ ಪ್ರಕರಣ ಉಳಿದ ಮಹಿಳಾ ಕುಸ್ತಿಪಟುಗಳು ನೀಡಿದ ದೂರಾಗಿದೆ.

Exit mobile version