Site icon Vistara News

CWG- 2022 | ಸೋನಲ್‌ಬೆನ್‌ ಪಟೇಲ್‌ಗೆ ಪ್ಯಾರಾ ಟಿಟಿಯಲ್ಲಿ ಕಂಚಿನ ಸಮ್ಮಾನ

CWG-2022

ಬರ್ಮಿಂಗ್ಹಮ್‌ : ಭಾರತದ ಸ್ಟಾರ್‌ ಪ್ಯಾರಾ ಟೇಬಲ್‌ ಟೆನಿಸ್‌ ತಾರೆ ಸೋನಲ್‌ಬೆನ್‌ ಪಟೇಲ್‌ ಕಾಮನ್ವೆಲ್ತ್‌ ಗೇಮ್ಸ್‌ (CWG- 2022) ಪ್ಯಾರಾ ಟೇಬಲ್‌ ಟೆನಿಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇಂಗ್ಲೆಂಡ್‌ನ ಸು ಬೈಲಿ ವಿರುದ್ಧ ಜಯ ಸಾಧಿಸಿದ ಅವರು ಕಂಚಿನ ಪದಕದ ಸಮ್ಮಾನ ಪಡೆದರು.

ಸೋನಲ್‌ಬೆನ್‌ ಅವರು ಇಂಗ್ಲೆಂಡ್‌ ಆಟಗಾರ್ತಿ ವಿರುದ್ಧ ೩-೦ (೧೧-೫, ೧೧-೨, ೧೧-೩) ಅಂತರದ ಗೆಲುವು ಸಾಧಿಸಿದರು. ಪಂದ್ಯದ ಉದ್ದಕ್ಕೂ ಪಾರಮ್ಯ ಸಾಧಿಸಿದ ಅವರು ಸುಲಭವಾಗಿ ಕಂಚಿನ ಪದಕದ ಹಾರವನ್ನು ಕೊರಳಿಗೇರಿಸಿಕೊಂಡರು.

Exit mobile version